ಮಳವಳ್ಳಿ: ಜೆಡಿಎಸ್ ಶಾಸಕ, ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ; ಕೈಕೈ ಮಿಲಾಯಿಸಿದ ಮುಖಂಡರು!

ಲೋಕಸಭೆ ಚುನಾವಣೆ ಮುಗಿದು 1ತಿಂಗಳು ಕಳೆದಿದ್ದರೂ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ ಮುಗಿದಿಲ್ಲ, ..
ಶಾಸಕ ಕೆ.ಅನ್ನದಾನಿ ಜೊತೆ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
ಶಾಸಕ ಕೆ.ಅನ್ನದಾನಿ ಜೊತೆ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
Updated on
ಮೈಸೂರು: ಲೋಕಸಭೆ ಚುನಾವಣೆ ಮುಗಿದು 1ತಿಂಗಳು ಕಳೆದಿದ್ದರೂ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ ಮುಗಿದಿಲ್ಲ, 
ಮಳವಳ್ಳಿ ತಾಲೂಕು ಮಾಗನೂರು ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಕಟ್ಟಡ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಸಮಾರಂಭದಲ್ಲಿ ಶಾಸಕ ಡಾ.ಕೆ.ಅನ್ನದಾನಿ ಮತ್ತು ಕಾಂಗ್ರೆಸ್‌ ಕಾರ‍್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ವಿರೋಧಿಗಳನ್ನು ಶಾಸಕ ಅನ್ನದಾನಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ತೆಂಗಿನ ಚಿಪ್ಪಿನಲ್ಲೇ ಹೊಡೆಯಲು ಪ್ರಯತ್ನಿಸಿದ ಘಟನೆಯೂ ನಡೆದಿದೆ. ಜತೆಗೆ ಸರಕಾರ ನಮ್ಮದಿದೆ ಒದ್ದು ಒಳಗೆ ಹಾಕಿಸುತ್ತೇನೆ ಎಂದು ಎಚ್ಚರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 
ಮಾಗನೂರು ಬಳಿ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸರಕಾರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 2018ರ ಜನವರಿ ತಿಂಗಳಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪಾಲಿಟೆಕ್ನಿಕ್‌ ಕಟ್ಟಡದ ಜತೆಗೆ ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹೀಗಿದ್ದರೂ ಶಾಸಕ ಅನ್ನದಾನಿ ಅವರು ಪುನಃ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. 
ಈ ವೇಳೆ ಶಾಸಕ ಅನ್ನದಾನಿ ಹಾಗೂ ಕಾಂಗ್ರೆಸ್‌ ಜನಪ್ರತಿನಿಧಿಗಳು ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ತಳ್ಳಾಟ-ನೂಕಾಟದ ನಡೆದಿದೆ. ಒಂದು ಹಂತದಲ್ಲಿ ತಾಳ್ಮೆ ಕಳೆದುದಕೊಂಡ ಶಾಸಕ ಅನ್ನದಾಗಿ ಅವರು ಭೂಮಿಪೂಜೆಗಾಗಿ ಕರ್ಪೂರವಿಟ್ಟು ಆರತಿ ಮಾಡಲು ಕೈಯಲ್ಲಿ ಹಿಡಿದಿದ್ದ ಒಡೆದಿದ್ದ ತೆಂಗಿನಕಾಯಿ ಚಿಪ್ಪಿನಲ್ಲೇ ಕಾಂಗ್ರೆಸ್‌ ಜನಪ್ರತಿನಿಧಿಗಳಿಗೆ ಹೊಡೆಯಲು ಪ್ರಯತ್ನಿಸಿದ್ದಾರೆ. 
ಸ್ಥಳದಲ್ಲಿದ್ದ ಪೊಲೀಸರು ಎರಡೂ ಗುಂಪಿನವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಸ್ಥಳೀಯರ ವಿರೋಧದ ನಡುವೆಯೂ ಅನ್ನದಾನಿ ಅವರು ಗುದ್ದಲಿಪೂಜೆ ನೆರವೇರಿಸಿ ಅಲ್ಲಿಂದ ನಿರ್ಗಮಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com