ಐವರು ಬಿಜೆಪಿ ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ: ಸಚಿವ ತಿಮ್ಮಾಪುರ

ಕಾಂಗ್ರೆಸ್ ಶಾಸಕರ ರಾಜೀನಾಮೆ ಸಮ್ಮಿಶ್ರ ಸರ್ಕಾರಕ್ಕೆ ಸಿಡಿಲಿನಂತೆ ಬಂದೆರಗಿದಾಗ ಸಕ್ಕರೆ ಖಾತೆ ಸಚಿವ ಆರ್ ಬಿ ತಿಮ್ಮಾಪುರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಾಗಲಕೋಟೆ/ವಿಜಯಪುರ: ಕಾಂಗ್ರೆಸ್ ಶಾಸಕರ ರಾಜೀನಾಮೆ ಸಮ್ಮಿಶ್ರ ಸರ್ಕಾರಕ್ಕೆ ಸಿಡಿಲಿನಂತೆ ಬಂದೆರಗಿದಾಗ ಸಕ್ಕರೆ ಖಾತೆ ಸಚಿವ ಆರ್ ಬಿ ತಿಮ್ಮಾಪುರ ಅಚ್ಚರಿಕೆಯ ಹೇಳಿಕೆಯೊಂದನ್ನು ನೀಡಿದ್ದಾರೆ. ಬಿಜೆಪಿಯ ಐದು ಮಂದಿ ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ರಿವರ್ಸ್ ಆಪರೇಷನ್ ನ ಸಂದೇಹಕ್ಕೆ ತುಪ್ಪ ಸುರಿದಿದ್ದಾರೆ.
ನಿನ್ನೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯ ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅತೃಪ್ತ ಶಾಸಕರ ಬೇಡಿಕೆಗಳನ್ನು ಪಾರ್ಟಿ ಹೈಕಮಾಂಡ್ ಬಗೆಹರಿಸುತ್ತದೆ ಎಂದು ಹೇಳಲಾಗುತ್ತಿದ್ದು ರಾಜಿನಾಮೆಯನ್ನು ಮರುಪರಿಶೀಲಿಸುವಂತೆ ಶಾಸಕರಿಗೆ ಮನವೊಲಿಸಬಹುದು ಎಂಬ ನಂಬಿಕೆ ನಮಗಿದೆ ಎನ್ನುತ್ತಾರೆ ತಿಮ್ಮಾಪುರ.
ನಾನು ಹಿಂದೆ ಹೇಳಿರುವಂತೆ, ಬಿಜೆಪಿಯ ಐವರು ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದು ಪರಿಸ್ಥಿತಿ ಬಿಗಡಾಯಿಸಿದರೆ ಅವರು ಪಕ್ಷ ಬಿಡಲು ಕೂಡ ತಯಾರಿದ್ದಾರೆ. ಪಕ್ಷದ ಹೈಕಮಾಂಡ್ ಕೂಡ ಅವರ ಜೊತೆ ಸಂಪರ್ಕದಲ್ಲಿದ್ದು, ಫೋನ್ ಮೂಲಕ ಅವರ ಬೆಂಬಲ ಕೇಳಿದ್ದಾರೆ. ಅಗತ್ಯ ಬಿದ್ದರೆ ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಬಿಜೆಪಿಯ  ಅತೃಪ್ತ ಶಾಸಕರು ಹೇಳಿದ್ದಾರೆ. ಭವಿಷ್ಯದಲ್ಲಿ ಅವರ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com