ರಾಜ್ಯದಲ್ಲಿ ತುಘಲಕ್ ದರ್ಬಾರು, ಮೈತ್ರಿ ನಾಯಕರಿಂದ ಪ್ರಜಾತಂತ್ರಕ್ಕೆ‌ ಅಗೌರವ: ಬಿಎಸ್ ವೈ

ರಾಜ್ಯದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದ್ದು, ಮೈತ್ರಿ ಸರ್ಕಾರದ ನಾಯಕರು ಪ್ರಜಾತಂತ್ರಕ್ಕೆ‌ ಅಗೌರವ ‌ಕೊಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Updated on
ಬೆಂಗಳೂರು: ರಾಜ್ಯದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದ್ದು, ಮೈತ್ರಿ ಸರ್ಕಾರದ ನಾಯಕರು ಪ್ರಜಾತಂತ್ರಕ್ಕೆ‌ ಅಗೌರವ ‌ಕೊಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಆರೋಪಿಸಿದ್ದಾರೆ. 
ವಿಧಾನಸಭೆ ಕಲಾಪವನ್ನು ನಾಳೆಗೆ ಮುಂದೂಡಿದ ಬಳಿವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಎಸ್ ವೈ, ಮೈತ್ರಿ ನಾಯಕರು ವಿನಾಕಾರಣ ‌ಸದನದ‌‌‌ ಕಾಲಹರಣ ಮಾಡಿ‌ ಸರ್ಕಾರ ‌ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ಸ್ಪೀಕರ್ ಗೆ ಸಂದೇಶ‌ ಕಳುಹಿಸಿದ್ದರು. ಅದಕ್ಕೆ‌ ನಾವು ರೂಲಿಂಗ್ ನೀಡಲು‌ ಕೇಳಿದ್ದರೂ ಪ್ರಯೋಜನವಾಗಲಿಲ್ಲ ಎಂದರು. 
ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೂ ರಾಜೀನಾಮೆ ನೀಡದೆ ಭಂಡತನದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎಂದರು.
ನಾವು 105 ಶಾಸಕರಿದ್ದೇವೆ. ಈ ಸರ್ಕಾರಕ್ಕೆ ಬಹುಮತವಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರನ್ನು ಪ್ರಚೋದಿಸುವ ಕೆಲಸ ಮಾಡಲಾಗಿದೆ. ನಾವೆಲ್ಲ ಶಾಸಕರು ಇಡೀ ‌ರಾತ್ರಿ ಸದನದಲ್ಲಿ ‌ಧರಣಿ ಮಾಡುತ್ತೇವೆ ಎಂದು ತಿಳಿಸಿದರು. 
ಮೈತ್ರಿ ಸರಕಾರ ವರ್ಗಾವಣೆ ದಂಧೆ ಮಾಡಿ‌ ಲೂಟಿ ಮಾಡಿದೆ. ಕುಮಾರಸ್ವಾಮಿ ಏಕೆ‌ ಕಡತಗಳನ್ನು‌ ವಿಲೇವಾರಿ ಮಾಡುತ್ತಿದ್ದಾರೆ. ಬಹುಮತ ಇಲ್ಲದಿದ್ದರೂ ಅಧಿಕಾರ ‌ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com