ಮುಗಿಯದ 'ವಿಶ್ವಾಸ': ಕೊನೆಯಾಗದ ರೆಸಾರ್ಟ್ ವಾಸ: ಶಾಸಕರಿಗೆ ನಿತ್ಯವೂ ವನವಾಸ!

ವಿಶ್ವಾಸ ಮತಯಾಚನೆ ವಿಳಂಭವಾಗುತ್ತಿರುವುದರಿಂದ ಕೇವಲ ನಾಗರಿಕರು ಮಾತ್ರ ತಾಳ್ಮೆ ಕಳೆದುಕೊಳ್ಳುತ್ತಿಲ್ಲ, ಶಾಸಕರು ಕೂಡ ತಮ್ಮ ಸಹನೆ ಕಳೆದು ಕೊಳ್ಳುತ್ತಿದ್ದಾರೆ. ...
ವಿಧಾನಸಭೆ (ಸಂಗ್ರಹ ಚಿತ್ರ)
ವಿಧಾನಸಭೆ (ಸಂಗ್ರಹ ಚಿತ್ರ)
ಬೆಂಗಳೂರು: ವಿಶ್ವಾಸ ಮತಯಾಚನೆ ವಿಳಂಭವಾಗುತ್ತಿರುವುದರಿಂದ ಕೇವಲ ನಾಗರಿಕರು ಮಾತ್ರ ತಾಳ್ಮೆ ಕಳೆದುಕೊಳ್ಳುತ್ತಿಲ್ಲ, ಶಾಸಕರು ಕೂಡ ತಮ್ಮ ಸಹನೆ ಕಳೆದು ಕೊಳ್ಳುತ್ತಿದ್ದಾರೆ. 
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಚಟಿನಿಂದಾಗಿ ಶಾಸಕರು ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ, ಹಲವು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕೆಲ ಸ್ಥಗಳಲ್ಲಿ ಪ್ರವಾಹದಿಂದಾಗಿ ಜನರು ಕಂಗೆಟ್ಟು ಹೋಗಿದ್ದಾರೆ,
ಪರಿಸ್ಥಿತಿ ಹೀಗಿರುವಾಗ ಯಾವೊಬ್ಬ ಜನಪ್ರತಿನಿಧಿಗಳು ಜನರ ಕುಂದುಕೊರತೆಗಳನ್ನು ಆಲಿಸಲು ಬರುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇದು, ಆಯ್ಕೆಯಾದ ಶಾಸಕರ ವಿರುದ್ಧ ಸೋತ ಅಭ್ಯರ್ಥಿಗಳಿಗೆ ಮುಖಂಡರಿಗೆ ವರವಾಗಿ ಪರಿಣಮಿಸಿದ್ದು, ಈ ಸಮದ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ರೆಸಾರ್ಟ್ ನಲ್ಲಿರುವ ಶಾಸಕರ ಮೊಬೈಲ್ ರೀಚ್ ಆಗುತ್ತಿಲ್ಲ, ಹೀಗಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಾಗುತ್ತಿಲ್ಲ,  ಹೀಗಾಗ ಶಾಸಕರು ತಮ್ಮ ಆಪ್ತ ಸಹಾಯಕರ ಕೈಯ್ಯಲ್ಲಿ ಮೊಬೈಲ್ ಕೊಟ್ಟಿದ್ದಾರೆ, ತುರ್ತು  ಇರುವ ಸಮಸ್ಯೆಗಳನ್ನು  ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
ಹೆಚ್ಚಿನ ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತ ಎದುರಾಗಿದೆ, ಆದರೆ ಇತ್ತೀಚಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ನಾವು  ಅಸಹಾಯಕರಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಇಲ್ಲಿ ಹೇಗೆ ಇದ್ದೇವೆ ಎಂಬುದು ನಮಗೆ ಗೊತ್ತು, ನಮ್ಮ ನಾಯಕರುಗಳ ನಿರ್ದೇಶನದ ಮೇರೆಗೆ ನಾವು ಇಲ್ಲಿದ್ದೇವೆ, ಆದರೆ ಕೆಲವು ನಾವು ರೆಸಾರ್ಟ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಶಾಸಕರೊಬ್ಬರು ತಿಳಿಸಿದ್ದಾರೆ
ಮಂಗಳವಾರ ನಮ್ಮ ಊರಿನಲ್ಲಿ ಚಾಮುಂಡೇಶ್ವರಿ ಹಬ್ಬವಿದೆ, ಕಳೆದ 2 ವಾರಗಳಿಂದ ನಾನು ಕ್ಷೇತ್ರದಿಂದ ಹೊರಗಿದ್ದೇನೆ, ಒಂದು ವೇಳೆ ಹಬ್ಬಕ್ಕೆ ನಾನು ಹೋಗಲು ಸಾಧ್ಯವಾಗದಿದ್ದರೇ ನನ್ನ ಕ್ಷೇತ್ರದ ಮತದಾರರಿಗೆ ಏನು ಉತ್ತರ ನೀಡಲಿ ಎಂದು  ಬಿಜೆಪಿ ಶಾಸಕ ನಾಗೇಂದ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com