ಹಿಂದುತ್ವ ಜೀವನ ಮಾರ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ

ಹಿಂದುತ್ವ ಜೀವನ ಮಾರ್ಗ.ಅದು ರಾಷ್ಟ್ರೀಯತೆಯ ಭಾಗವೇ ಆಗಿದೆ ಎಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿಂದು ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.
ಹಿಂದುತ್ವ ಜೀವನ ಮಾರ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ
ಹಿಂದುತ್ವ ಜೀವನ ಮಾರ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ
Updated on
ಬೆಂಗಳೂರು: ಹಿಂದುತ್ವ ಜೀವನ ಮಾರ್ಗ.ಅದು  ರಾಷ್ಟ್ರೀಯತೆಯ ಭಾಗವೇ ಆಗಿದೆ ಎಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿಂದು ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.
ಬುಧವಾರ 22 ನೇ  ಸಭಾಧ್ಯಕ್ಷರಾಗಿ ಪೀಠಾರೋಹಣ ಮಾಡಿದ ಬಳಿಕ ಸದನವನ್ನುದ್ದೇಶಿ ಅವರು ಮಾತನಾಡಿ, ಹಿಂದುತ್ವದ ಬಗ್ಗೆ ಹೆಚ್ಚು ಚರ್ಚೆಯಾಗಬೇಕು ಎಂದು ಹೇಳಿದರು. ಆರ್ ಎಸ್.ಎಸ್ ನೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಅವರು, ತಂದೆ ಆರ್ ಎಸ್ ಎಸ್ ಶಾಖೆ  ನಡೆಸುತ್ತಿದ್ದರಿಂದ ತಮಗೆ ಬಾಲ್ಯದಲ್ಲಿ ಆರ್ ಎಸ್ ಎಸ್ ಜೊತೆ ನಂಟು ಬೆಸೆಯುವಂತಾಯಿತು.  
ಬಳಿಕ ವಿದ್ಯಾರ್ಥಿ ದಿಸೆಯಲ್ಲಿ ಎಬಿವಿಪಿಯಲ್ಲಿ ಗುರುತಿಸಿಕೊಂಡು,ರಾಜ್ಯ ಕಾರ್ಯದರ್ಶಿಯಾಗಿ  ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. 1990ರಲ್ಲಿ ಬಿಜೆಪಿ ಜಿಲ್ಲಾ  ಕಾರ್ಯದರ್ಶಿಯಾಗಿದ್ದು, ಅದೇ ಸಂದರ್ಭದಲ್ಲಿ ತಮಗೆ ಯುವ ಮೋರ್ಚಾ ರಾಜ್ಯ  ಪ್ರಧಾನಕಾರ್ಯದರ್ಶಿಯಾಗಿ ಕೆಲಸ ಮಾಡಲು ಯಡಿಯೂರಪ್ಪ ಮತ್ತು ಅನಂತಕುಮಾರ್ ಅವಕಾಶ ಕಲ್ಪಿಸಿಕೊಟ್ಟರು.ಆ ಸಂದರ್ಭದಲ್ಲಿ  ಈಶ್ವರಪ್ಪ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು ಎಂದರು.
ಈ ಸ್ಥಾನಕ್ಕೆ ತಾವು ಪ್ರಸ್ತುತ ಹೌದೋ ಅಥವಾ ಅಲ್ಲವೋ ಎಂಬ ಬಗೆಗಿನ ಚರ್ಚೆಗಿಂತ ನಮ್ಮ ಕರ್ತವ್ಯವನ್ನು ಅರಿತುಕೊಂಡು ಜವಾಬ್ದಾರಿಯಿಂದ  ಕೆಲಸ ಮಾಡುವುದು ಮುಖ್ಯವಾಗುತ್ತದೆ. ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವುದು ಅಗತ್ಯ  ಎಂದರು.
ಜನತೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು,  ಜನರ ಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು‌.ಹೋರಾಟದ ಹಿನ್ನೆಲೆಯಿಂದ  ಬಂದಿರುವ ಯಡಿಯೂರಪ್ಪ ಅವರಿಗೆ  ಜನರ ಕಷ್ಟಗಳ ಅರಿವಿದೆ. ನಾವೆಲ್ಲ ಸೇರಿ  ಜನರ ನೋವಿಗೆ  ಧ್ವನಿಯಾಗಬೇಕು ಎಂದರು.
ಕಾರ್ಯಾಂಗದ ಅಧಿಕಾರಿಗಳಲ್ಲಿ ಬೇಜವಾಬ್ದಾರಿ ಪ್ರವೃತ್ತಿ ಹೆಚ್ಚಿದೆ. ಸರ್ಕಾರ ಅಂತ್ಯ ಸಂಸ್ಕಾರಕ್ಕೆಂದು ಕೊಟ್ಟ ಹಣ ಮೂರು  ತಿಂಗಳಾದರೂ ಫಲಾನುಭವಿಗಳಿಗೆ   ತಲುಪುತ್ತಿಲ್ಲ. ಇದನ್ನು ನೋಡಿದರೆ ಅಧಿಕಾರಿಗಳಲ್ಲಿ ಎಷ್ಟರಮಟ್ಟಿಗೆ ಬೇಜವಾಬ್ದಾರಿ  ಇದೆ ಎನ್ನುವುದು ಅರಿವಾಗುತ್ತದೆ ಎಂದು ಸಭಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದೀಯ ವ್ಯವಸ್ಥೆಯಲ್ಲಿ  ಹಿಂದಿನ ಎಲ್ಲಾ ಸಭಾಧ‍್ಯಕ್ಷರು ಸದನದ ಗೌರವ, ಘನತೆಯನ್ನು ಎತ್ತಿ ಹಿಡಿದಂತೆ ತಾವು ಸಹ ಸದನದ ಪಾರಮ್ಯಕ್ಕೆ  ದಕ್ಕೆ ಬಾರದಂತೆ ಕಲಾಪ ನಡೆಸುವ ಮತ್ತು ಸದನದ ಸತ್ ಸಂಪ್ರದಾಯಗಳನ್ನು ಎತ್ತಿಹಿಡಿಯುವುದಾಗಿ  ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ  ಕ್ಷೇತ್ರಗಳಲ್ಲಿಯೂ ಮೌಲ್ಯ ಹಾಳಾಗುತ್ತಿದೆ. ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮ  ಮೇಲಿದೆ. ನಮ್ಮಲ್ಲಿನ ಬದ್ಧತೆಯಲ್ಲಿ ಯಾವ ಕೊರತೆಯೂ ಆಗದಂತಹ ಸಂದರ್ಭ ಸೃಷ್ಟಿಸಬೇಕು. ಹೊಸ ಸದಸ್ಯರು ಹೆಚ್ಚು ಸಮಯ  ಸದನದಲ್ಲಿ ಹಾಜರಿದ್ದು ಕಲಾಪಗಳನ್ನು ವೀಕ್ಷಿಸಬೇಕು.  ಜನರು  ಭ್ರಮನಿರಸನಗೊಂಡು ಆಕ್ರೋಶಗೊಂಡರೆ ಅದು  ಕ್ರಾಂತಿಗೆ ಕಾರಣವಾಗುತ್ತದೆ‌. ಹೀಗಾಗಿ ನಾವು ನಮ್ಮ ಸಂವಿಧಾನದ ಚೌಕಟ್ಟಿನೊಳಗೆ ಇರುವ ಕಾನೂನು  ನಿಯಮಾವಳಿಗಳಡಿ ಕೆಲಸ ನಿರ್ವಹಿಸಬೇಕು ಎಂದರು.
ಒಬ್ಬನಿಂದ ಏನೂ ಆಗುವುದಿಲ್ಲ.ಎಲ್ಲರ ಸಹಕಾರ ಅಗತ್ಯ. 1994ರಲ್ಲಿ ನಾನು ವಿಧಾನಸಭೆಗೆ ಬಂದಾಗ ರಮೇಶ್ ಕುಮಾರ್  ಸಭಾಧ್ಯಕ್ಷರಾಗಿದ್ದರು.ಈಗ ಅವರು ಸಭಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುವವರೆಗೆ ಹಲವು  ಸಭಾಧ್ಯಕ್ಷರ ಜತೆ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಇದು ತಮಗೆ ಅನುಭವದ ಪಾಠಶಾಲೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com