ಭಾರತೀಯ ವಾಯುದಾಳಿ ಬಗ್ಗೆ ಸಾಕ್ಷಿ ಕೇಳಿಲ್ಲ- ಎಂ.ಬಿ.ಪಾಟೀಲ್

ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ನಡೆಸಿರುವ ದಾಳಿ ಬಗ್ಗೆ ಸಾಕ್ಷಿ ಕೇಳಿಲ್ಲ ಎಂದು ಗೃಹ ಸಚಿವ ಎಂ . ಬಿ. ಪಾಟೀಲ್ ಹೇಳಿದ್ದಾರೆ.
ಎಂ. ಬಿ. ಪಾಟೀಲ್
ಎಂ. ಬಿ. ಪಾಟೀಲ್

ಹುಬ್ಬಳ್ಳಿ:  ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ನಡೆಸಿರುವ  ದಾಳಿ ಬಗ್ಗೆ ಸಾಕ್ಷಿ ಕೇಳಿಲ್ಲ ಎಂದು ಗೃಹ ಸಚಿವ ಎಂ . ಬಿ. ಪಾಟೀಲ್ ಹೇಳಿದ್ದಾರೆ.

ಭಾರತೀಯ ವಾಯುಸೇನೆ ನಡೆಸಿದ ದಾಳಿ ಬಗ್ಗೆ ಪ್ರಿಯಾಂಕ್ ಖರ್ಗೆ, ಶಾಸಕ ರಾಘವೇಂದ್ರ ಹಿಟ್ನಾಳ್ ಸಾಕ್ಷಿ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ  ಗೃಹ ಸಚಿವರು,  ಅವರೇಕೆ ಹಾಗೆ ಹೇಳಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ, ಅವರ ಹೇಳಿಕೆ ಕುರಿತಂತೆ ಸಮಜಾಯಿಸಿ ನೀಡಲು ತಿಳಿಸಲಾಗಿದೆ ಎಂದರು.

ಉಗ್ರರ ಮೇಲೆ ಭಾರತೀಯ ಯೋಧರು ನಡೆಸಿದ ವಾಯುದಾಳಿ ಕುರಿತು ಸಾಕ್ಷಿ ಕೇಳುವುದು ಸರಿಯಲ್ಲ, ಭಾರತೀಯ ಸೇನೆ ಯಾವುದೇ ಪಕ್ಷದ ಸೇನೆಯಲ್ಲ, ಸೇನೆಯನ್ನು ಬಳಸಿ ರಾಜಕೀಯ ಮಾಡೋದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಬಿಎಸ್ ಯಡಿಯೂರಪ್ಪ ಸೇನೆಯ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು, ಸೇನೆ ಯಾರ ಸ್ವತ್ತೂ ಅಲ್ಲ, ನಾನಾಗಲಿ  ಅವರಾಗಲಿ ಸಾಕ್ಷಿ ಕೇಳುವುದು ರಾಜಕೀಯಕ್ಕಾಗಿ ಈ ಘಟನೆಯನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com