ಕಾಂಗ್ರೆಸ್ ಚುನಾವಣಾ ಸಮಿತಿಯಲ್ಲಿ ಸಿದ್ಧಗೊಂಡ ಮಹಿಳಾ ಅಭ್ಯರ್ಥಿಗಳ ಪಟ್ಟಿ

ಲೋಕಸಭಾ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‍ನಲ್ಲಿ ವೇದಿಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ಮಹಿಳಾ ಟಿಕೆಟ್ ಆಕಾಂಕ್ಷಿಗಳು ಕೂಡ ಹೆಚ್ಚಾಗಿದ್ದು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‍ನಲ್ಲಿ ವೇದಿಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ಮಹಿಳಾ ಟಿಕೆಟ್ ಆಕಾಂಕ್ಷಿಗಳು ಕೂಡ ಹೆಚ್ಚಾಗಿದ್ದು, ಚುನಾವಣಾ ಸಮಿತಿ ಸಭೆಯಲ್ಲಿ 5 ಆಕಾಂಕ್ಷಿಗಳ ಪಟ್ಟಿ ಸಿದ್ಧಗೊಂಡಿದ್ದು, ಈ ಪಟ್ಟಿಯನ್ನು ಪರಿಶೀಲನಾ ಸಮಿತಿಗೆ ಕಳುಹಿಸಲಾಗುತ್ತಿದೆ.
ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಪೈಪೋಟಿ ಇರುವ ಕಾರಣ ಕಾಂಗ್ರೆಸ್ ಮಹಿಳೆಯರು ಟಿಕೆಟ್ ಗಾಗಿ ಕಳೆದೊಂದು ತಿಂಗಳಿನಿಂದಲೇ ಕಸರತ್ತು ನಡೆಸಿದ್ದು, ಕಾಂಗ್ರೆಸ್ ಹಿರಿಯರ ಪತ್ನಿ, ಪುತ್ರಿಯರು ಹಾಗೂ ಸೊಸೆಯಂದಿರು ಸಹ ಟಿಕೆಟ್‍ಗಾಗಿ ಲಾಬಿ ಆರಂಭಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪತ್ನಿ ಗೀತಾ ಖಂಡ್ರೆ, ಮಾಜಿ ಶಾಸಕ ವಿಜಯಾನಂದ ಖಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ, ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಬಾಯಕ್ಕ ಮೇಟಿ, ಮಾಜಿ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಸೊಸೆ ವಸಂತ ಕವಿತಾರೆಡ್ಡಿ, ಗೃಹ ಸಚಿವ ಎಂ.ಬಿ ಪಾಟೀಲ್ ಪತ್ನಿ ಆಶಾ ಪಾಟೀಲ್, ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ, ಕವಿತಾ ಸುನೀಲ್, ಕಾಂತಾ ನಾಯಕ್, ತಾರಾದೇವಿ, ಆರತಿಕೃಷ್ಣ ಟಿಕೆಟ್‍ ಆಕಾಂಕ್ಷಿಗಳಾಗಿದ್ದಾರೆ.
ಈ ಪೈಕಿ ಮಹಿಳಾ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಮಹಿಳಾ ಘಟಕ ಸಿದ್ಧಗೊಳಿಸಿ, ಚುನಾವಣಾ ಸಮಿತಿ ಸಭೆಯ ಮುಂದಿಟ್ಟಿತ್ತು. ಚುನಾವಣಾ ಸಮಿತಿ ಸಭೆಯಲ್ಲಿ ಬೀದರ್ ಕ್ಷೇತ್ರದಿಂದ ಗೀತಾ ಖಂಡ್ರೆ, ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ, ಚಿಕ್ಕಮಗಳೂರಿನಿಂದ ಆರತಿಕೃಷ್ಣ, ವಿಜಯಪುರದಿಂದ ಕಾಂತಾನಾಯಕ್, ಬೆಳಗಾವಿಯಿಂದ ಅಂಜಲಿ ನಿಂಬಾಳ್ಕರ್ ಹೆಸರಿನ ಪಟ್ಟಿ ಸಿದ್ಧಗೊಳಿಸಿದ್ದು, ಮಾರ್ಚ್ 11 ರಂದು ನಡೆಯಲಿರುವ ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ಮೂಲಗಳು ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com