'ಭ್ರಷ್ಟ' ಬ್ಯಾಂಕರ್ ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಬಂಡಾಯ: ಜನಾರ್ದನ ಪೂಜಾರಿ ಬೆದರಿಕೆ

ಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್​ಸಿಡಿಸಿಸಿ) ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದರೆ ತಾವು ಪಕ್ಷದ ಬಂಡಾಯ ಅಭ್ಯರ್ಥಿಯಾಗಿ....
ಜನಾರ್ದನ ಪೂಜಾರಿ
ಜನಾರ್ದನ ಪೂಜಾರಿ
ಮಂಗಳುರು: ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್​ಸಿಡಿಸಿಸಿ) ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದರೆ ತಾವು ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಕೇಂದ್ರ ಮಾಜಿ ಸಚಿವ ಮಂಗಳೂರಿನ ಹಿರಿಯ ಕಾಂಗ್ರೆಸ್ ನಾಯಕ  ಜನಾರ್ಧನ ಪೂಜಾರಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುಜಾರಿ ರಾಜೇಂದ್ರ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ಆರೋಪವಿದೆ.ವರ ಭ್ರಷ್ಟಾಚಾರಗಳಿಗೆ ಜಿಲ್ಲಾ ಸಹಕಾರಿ ಬ್ಯಾಂಕ್ ಸಹ ಬಲಿಯಾಗಿದೆ ಎಂದು ಪೂಜಾರಿ ಹೇಳಿದ್ದಾರೆ. ಈ ಮೂಲಕ  ತಾವು ಕಾಂಗ್ರೆಸ್ ವಿರುದ್ಧ ಬಂಡಾಯವೇಳುವ ಬೆದರಿಕೆಯೊಡ್ಡಿದ್ದಾರೆ
`
"ರಾಜೇಂದ್ರ ಕುಮಾರ್ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಅವರು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯರೂ ಸಹ ಅಲ್ಲ. ಇನ್ನು ವಿಧಾನ ಪರಿಷತ್ ನಾಯಕ ಐವನ್ ಡಿಸೋಜ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಸಹ ಟಿಕೆಟ್ ದೊರೆತರೆ ನಾನು ಬಂಡಾಯವೇಳುವುದು ಖಚಿತ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಐವನ್ ಅವರು ಮುಖ್ಯಮಂತ್ರಿಯನ್ನು ಕುದ್ರೋಳಿಗೆ ಬರದಂತೆ ತಡೆದಿದರು "ಎಂದು ಪೂಜಾರಿ ಹೇಳಿದ್ದಾರೆ.
"ಇನ್ನೆರಡು ದಿನಗಳಲ್ಲಿ ನಾನು ದೆಹಲಿಗೆ ತೆರಳುತ್ತೇನೆ. ಅಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಜೇಂದ್ರ ಕುಮಾರ್ ಭ್ರಷ್ಟಾಚಾರದ ಸಂಬಂಧ ಗಮನ ಸೆಳೆಯುತ್ತೇನೆ.
"ರಾಜೇಂದ್ರ ಅವರು ಭ್ರಷ್ಟಾಚಾರ ನಡೆಸಿದ್ದಾರೆ. ಮಾದ್ಯಮಗಳ ವರದಿಯ ಅನುಸಾರ  ರಾಜೇಂದ್ರ ಜನರ ಹಣವನ್ನು ತಿಂದಿದ್ದಾರೆ. ನಾನು ಮಾದ್ಯಮಗಳನ್ನು ನಂಬುತ್ತೇನೆ.ಹಾಗೆಯೇ ನಾನು ಕೊನೆಯುಸಿರುವವರೆಗೆ ಇರುತ್ತೇನೆ.ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅನೇಕರಿದ್ದಾರೆ. ಆದರೆ ರಾಜೇಂದ್ರ ಟಿಕೆಟ್ ಗಾಗಿ ಲಾಬಿ ಮಾಡುತ್ತಿದ್ದಾರೆ.ಅವರ ಹೆಸರು ಸಂಭಾವ್ಯ ಅಭ್ಯರ್ಥಿಗಳಲ್ಲಿ ಒಂದಾಗಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ
"ಟಿಕೆಟ್ ಸಿಕ್ಕರೆ ನಾನು ಸಹ  ಸ್ಪರ್ಧಿಸುತ್ತೇನೆ. ಸ್ಪರ್ಧೆ ಮಾಡಬೇಕು ಎಂಬ ಒತ್ತಡವೂ ಇದೆ.ಜಿಎಸ್‌ಬಿ ಸಮಾಜದವರು ನೀವು ಸ್ಪರ್ಧಿಸಿದರೆ ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ.16 ಲಕ್ಷ ಮತದಾರರಲ್ಲಿ 5 ಲಕ್ಷ ಬಿಲ್ಲವರು, ಅಷ್ಟೇ ಅಲ್ಪಸಂಖ್ಯಾತರು ಜಿಲ್ಲೆಯಲ್ಲಿದ್ದಾರೆ. ಉಡುಪೊಇ ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರಕೋಟೆಯ್ಗಿತ್ತು. ಇದೀಗ ಅದನ್ನು ಜೆಡಿಎಸ್ ಗೆ ಬಿಟ್ಟುಕೊಡುವುದು ಸರಿಯಲ್ಲ.  ಆರತಿ ಕೃಷ್ಣ ಅಲ್ಲಿ ಸ್ಪರ್ಧಿಸಬೇಕಾಗಿತ್ತು 
"ಐವನ್ ಅಥವಾ ರಾಜೇಂದ್ರ ಹೊರತಾಗಿ  ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ ಅಥವಾ ಬಿ.ಕೆ.ಹರಿಪ್ರಸಾದ್‌ಗೆ ಟಿಕೆಟ್ ನೀಡಿದ್ದಾದರೆ ಮಾತ್ರ ನಾನು ಅವರ ಪರ ಪ್ರಚಾರ ನಡೆಸಲಿದ್ದೇನೆ" ಪೂಜಾರಿ ಹೇಳೀದ್ದಾರೆ.
1977 ರಿಂದ ನಾಲ್ಕು ಬಾರಿ ಸತತ ಲೋಕಸಭೆ ಸಂಸದರಾಗಿದ್ದ ಜನಾರ್ಧನ ಪೂಜಾರಿ ಕೇಂದ್ರ ಸಚಿವರಾಗಿ ಸಹ ಕೆಲಸ ನಿರ್ವಹಿಸಿದ್ದಾರೆ.
ಇನ್ನು ಎಂ. ಎನ್. ರಾಜೇಂದ್ರ ಕುಮಾರ್ ಎಸ್​ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿದ್ದು 25 ವರ್ಷಗಳ ಕಾಲ ಸಹಕಾರಿ ಬ್ಯಾಂಕ್ ನೇತೃತ್ವ ವಹಿಸಿದ್ದಾರೆ. ಯಾವುದೇ ಸಹಕಾರಿ ನಾಯಕನ ಪಾಲಿಗೆ ಇದೊಂದು ವಿಶಿಷ್ಟ ಸಾಧನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com