ಜಾತ್ಯತೀತರ ಜತೆಗೆ, ಹೆತ್ತ ತಂದೆಗೂ ಅನಂತಕುಮಾರ್ ಹೆಗಡೆ ಅಪಮಾನ: ಸಿದ್ಧರಾಮಯ್ಯ

ಅಂದು ಜಾತ್ಯತೀತರಿಗೆ ಅಪ್ಪ- ಅಮ್ಮ, ರಕ್ತದ ಪರಿಚಯ ಇಲ್ಲ ಎಂದು ಹೇಳುವ ಮೂಲಕ ಜಾತ್ಯತೀತರನ್ನು ಮಾತ್ರವಲ್ಲ, ಹೆತ್ತ ತಂದೆಯನ್ನೂ ಅವಮಾನಿಸಿದ್ದೀರಿ
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಅಂದು ಜಾತ್ಯತೀತರಿಗೆ ಅಪ್ಪ- ಅಮ್ಮ, ರಕ್ತದ ಪರಿಚಯ ಇಲ್ಲ ಎಂದು ಹೇಳುವ ಮೂಲಕ ಜಾತ್ಯತೀತರನ್ನು ಮಾತ್ರವಲ್ಲ, ಹೆತ್ತ  ತಂದೆಯನ್ನೂ ಅವಮಾನಿಸಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಶವಿವಾರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ತಮಗೆ ತಮ್ಮ ತಂದೆಯೇ ಎರಡು - ಮೂರು ಚುನಾವಣೆಯಲ್ಲಿ ಮತ ಹಾಕಿರಲಿಲ್ಲ. ನನ್ನ ತಂದೆ ಕಾಂಗ್ರೆಸ್ ಪಕ್ಷಕ್ಕೆ ಮತಚಲಾಯಿಸುತ್ತಿದ್ದರು ಎಂದು ಸಚಿವ ಅನಂತಕುಮಾರ್ ಹೆಗಡೆ  ಹೇಳಿಕೊಂಡಿದ್ದ ಬೆನ್ನಲ್ಲೇ ಸಿದ್ದರಾಮಯ್ಯ ತಮ್ಮ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
ಕಾಂಗ್ರಸ್ ಪಕ್ಷ ಜಾತ್ಯತೀತ ಸಿದ್ಧಾಂತಕ್ಕೆ ಬದ್ಧವಾಗಿರುವ ಪಕ್ಷ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವವರು ಕೂಡಾ ಪರೋಕ್ಷವಾಗಿ ಜಾತ್ಯತೀತವಾದಿಗಳೇ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಳ್ಳನೇ ಪೊಲೀಸ್ ಆಗಿ ಪೊಲೀಸರ ಗೌರವ ಕಳೆಯುತ್ತಿರುವುದು ಈ ದೇಶದ ದುರಂತ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಈ ಸೋಂಕು ಹರಡಿ ದೇಶದ ಕಳ್ಳರೆಲ್ಲ ಪೊಲೀಸ್ ಆಗಲು ಹೊರಟರೆ ಏನು ಗತಿ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ನಾನು ಕೂಡ ಚೌಕಿದಾರ ಎಂಬ ಪ್ರತಿಜ್ಞೆಯನ್ನು ಬೆಂಬಲಿಗರು ಹಾಗೂ ದೇಶದ ಜನತೆ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಈ ರೀತಿ  ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com