ಪರಮೇಶ್ವರ್, ಗೌಡ ಮುದ್ದಯ್ಯ
ರಾಜಕೀಯ
ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರಲು ವ್ಯಕ್ತಿ ಶಪಥ!
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರುವ ಅವರ ಅಭಿಮಾನಿಯೊಬ್ಬರು ಶಪಥ ಗೈದಿದ್ದಾರೆ.
ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರುವ ಅವರ ಹಿಂಬಾಲಕರೊಬ್ಬರು ಶಪಥ ಗೈದಿದ್ದಾರೆ.
ಮಧುಗಿರಿಯ ಹುಣಸೆಮರದ ಹಟ್ಟಿ ಬಳಿಯ ನಿವಾಸಿ 53 ವರ್ಷದ ಗೌಡ ಮುದ್ದಯ್ಯ ಈ ರೀತಿಯ ಶಪಥ ಕೈಗೊಂಡಿರುವ ಅಭಿಮಾನಿ.
ಯಾದವ ಸಮುದಾಯದವರೊಂದಿಗೆ ನಿನ್ನೆ ನಡೆದ ಸಭೆಯಲ್ಲಿ ಇವರೇ ಕೇಂದ್ರ ಬಿಂದುವಾಗಿದ್ದರು. ದಲಿತ ನಾಯಕ ಪರಮೇಶ್ವರ್ ಅವರೊಂದಿಗೆ ಮಾತನಾಡಿದರು.
ಗೌಡ ಮುದ್ದಯ್ಯ ಕುರಿತು ಮಾತನಾಡಿದ ಪರಮೇಶ್ವರ್, ನಾನು ಮುಖ್ಯಮಂತ್ರಿ ಆಗುವವರೆಗೂ ಗಡ್ಡ ಶೇವ್ ಮಾಡುವುದಿಲ್ಲ ಎಂದು 10 ವರ್ಷದ ಹಿಂದಯೇ ಶಪಥ ಮಾಡಿದ್ದಾರೆ.
ಮುಖ್ಯಮಂತ್ರಿಯಾಗುವ ಅವಕಾಶ ಇಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಆದರೂ ಕೇಳುತ್ತಿಲ್ಲ. ಗಡ್ಡ ಶೇವ್ ಮಾಡುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ