'ಚಲುವರಾಯಸ್ವಾಮಿ ಭಕ್ಷೀಸು ಪಡೆದದ್ದು ದೇವರಾಣೆಗೂ ಸತ್ಯ, ಸುಮಲತಾ ಪರವಾಗಿ ಕೆಲಸ ಮಾಡಿಲ್ಲ ಅಂದ್ರೆ ಆಣೆ ಮಾಡ್ಲಿ'

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಯಾರು ಎಷ್ಟು ಹಣ ಪಡೆದಿದ್ದಾರೆ ಎಂದು ನನಗೆ ತಿಳಿದಿದೆ, ಚಲುವರಾಯಸ್ವಾಮಿ ಚುನಾವಣೆ ವೇಳೆ ಹಣ ಪಡೆದದ್ದು ದೇವರಾಣೆಗೂ ...
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
ಮಂಡ್ಯ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಯಾರು ಎಷ್ಟು ಹಣ ಪಡೆದಿದ್ದಾರೆ ಎಂದು ನನಗೆ ತಿಳಿದಿದೆ, ಚಲುವರಾಯಸ್ವಾಮಿ ಚುನಾವಣೆ ವೇಳೆ ಹಣ ಪಡೆದದ್ದು ದೇವರಾಣೆಗೂ ಸತ್ಯ ಎಂದು ನಾಗಮಂಗಲ ಶಾಸಕ ಸುರೇಶ್​ಗೌಡ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಬಳಿ ಹೋಗಿ ಟ್ಯೂಷನ್​ ತೆಗೆದುಕೊಳ್ಳಬೇಕೆ? ಜನತೆ ಐದು ವರ್ಷ ನೆಮ್ಮದಿಯಾಗಿ ವಿಶ್ರಾಂತಿ ಪಡೆಯುವಂತೆ ತೀರ್ಪು ನೀಡಿದ್ದಾರೆ. ಜನತೆಯಿಂದ ತಿರಸ್ಕೃತಗೊಂಡ ಇವರು ಮುಂದಿನ ಚುನಾವಣೆಯಲ್ಲಿ ಗೆದ್ದು ಬಂದು ಮಾತನಾಡಲಿ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ಗೆ ಬೆಂಬಲ ನೀಡಿದರು. ಹಳ್ಳಿಗಳಿಗೆ ಹೋಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಖುದ್ದಾಗಿ ಹಣ ಹಂಚಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್​ರನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಚೆಲುವರಾಯಸ್ವಾಮಿ ಜೆಡಿಎಸ್ ನಲ್ಲಿದ್ದಾಗ ನಡೆದ ಮಂಡ್ಯ ಲೋಕಸಭೆ ಚುನಾವಣೆ ವೇಳೆ ರಮ್ಯಾ ಸ್ಪರ್ಧಿಸಿದ್ದರು,, ನಾನು ಗಂಡಸಾಗಿದ್ದಕ್ಕೆ ರಮ್ಯಾ ಅವರಿಗೆ ನೇರವಾಗಿ ಬೆಂಬಲ ಸೂಚಿಸಿದ್ದೆ, ಇವರ ಹಾಗೆ ಹೆಂಗಸನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಿಲ್ಲ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com