ಹುಣಸೂರು ಕ್ಷೇತ್ರಕ್ಕೆ ವಿಶ್ವನಾಥ್ ಬಿಜೆಪಿ ಅಭ್ಯರ್ಥಿ: 'ಸೈನಿಕ'ನ ಆಸೆಗೆ ತಣ್ಣೀರು!
ಮೈಸೂರು: ನಿರೀಕ್ಷೆಯಂತೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಕಣಕ್ಕಿಳಿಯಲಿದ್ದಾರೆ. ಹುಣಸೂರು ಕ್ಷೇತ್ರಕ್ಕಾಗಿ ಮಾಜಿ ಸಚಿವರುಗಳಾದ ಜಿಟಿ ದೇವೇಗೌಡ ಮತ್ತು ಸಿಪಿ ಯೋಗೇಶ್ವರ್ ತೆರೆಮರೆಯಲ್ಲಿ ನಡೆಸಿದ ಕಸರತ್ತುಗಳು ವಿಫಲವಾಗಿವೆ.
ಸಮ್ಮಿಶ್ರ ಸರ್ಕಾರವನ್ನು ಕೆಡವಲು ವಿಶ್ವನಾಥ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು, ವಿಶ್ವನಾಥ್ ಅನರ್ಹತೆ ಕೇಸ್ ನಲ್ಲಿ ಬ್ಯುಸಿಯಾಗಿದ್ದರು. ಇದೇ ಮಾಜಿ ಸಚಿವ ಜಿಟಿ ದೇವೇಗೌಡ ತಮ್ಮ ಪುತ್ರ ಹರೀಶ್ ಗೆ ಟಿಕೆಟ್ ಕೊಡಿಸಲು ಬಿಜೆಪಿ ನಾಯಕರುಗಳ ಜೊತೆ ಚರ್ಚೆ ನಡೆಸಿ ವಿಫಲವಾಗಿದ್ದರು.
ಅದಾದ ನಂತರ ತಮ್ಮ ಪುತ್ರ ಅಥವಾ ತಮ್ಮ ಕುಟುಂಬದ ಬೇರೆ ಯಾವುದೇ ಸದಸ್ಯರು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. ವಿಶ್ವನಾಥ್ ಅವರನ್ನು ಎಂಎಲ್ ಸಿ ಮಾಡಿ ಮಂತ್ರಿ ಮಾಡುವಂತೆ ಕೆಲವರು ಸಲಹೆ ನೀಡಿದ್ದರು. ಜೊತೆಗೆ ವಿಶ್ವನಾಥ್ ಅವರಿಗೆ ಒಕ್ಕಲಿಗರ ಮತಗಳು ಬೀಳುವುದಿಲ್ಲ ಅವರ ಆರೋಗ್ಯ ಕೂಡ ಸರಿಯಿಲ್ಲ ಎಂದು ಕೆಲವರು ಬಿಂಬಿಸಿದ್ದರು.
ಮತ್ತೊಂದೆಡೆ ಅತೃಪ್ತ ಶಾಸಕರನ್ನು ಮುಂಬಯಿಗೆ ಕರೆದೊಯ್ದಪ ಲಾಕ್ ಮಾಡಿದ್ದ ಮಾಜಿ ಶಾಸಕ ಯೋಗೇಶ್ವರ್ ಕೂಡ ಹುಣಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಮೈಸೂರು ಹಾಗೂ ಹುಣಸೂರು ಒಕ್ಕಲಿಗ ನಾಯಕರ ಜೊತೆ ಸಭೆ ನಡೆಸಿದ್ದರು, ತಮ್ಮನ್ನು ಹುಣಸೂರು ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದರು. ಹೀಗಾಗಿ ಸ್ಥಳೀಯ ನಾಯಕರು ಯೋಗೇಶ್ವರ್ ಮತ್ತು ಹರೀಶ್ ಗೌಡ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು.
ಆದರೆ ತಮಗೆ ಸೀಟು ನೀಡುವಂತೆ, ತಮಗೆ ತಮ್ಮ ಹಿಂದೆ ಕುರುಬ ಮತದಾರರಿದ್ದಾರೆ ಎಂದು ತೋರಿಸಲು ರ್ಯಾಲಿ ನಡೆಸಿದ್ದರು. ಜೊತೆಗೆ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಒತ್ತಾಯಿಸಿದ್ದರು.
ಇನ್ನು ಹುಣಸೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿಯನ್ನು ವಿ,ಶ್ರೀನಿವಾಸ್ ಪ್ರಸಾದ್ ಅವರಿಗೆ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ