ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ದುರದೃಷ್ಟಕರ: ಸಿಪಿಐಎಂ

ಪ್ರಜಾಸತ್ತಾತ್ಮಕವಾಗಿ ರಚನೆಯಾಗಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಸುವ ಬಿಜೆಪಿ ಸಂಚಿಗೆ ಕೈಜೋಡಿಸಿದ್ದ ೧೭ ಶಾಸಕರ ರಾಜಿನಾಮೆ ತಿರಸ್ಕರಿಸಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ...
ಅನರ್ಹ ಶಾಸಕರು
ಅನರ್ಹ ಶಾಸಕರು
Updated on

ಬೆಂಗಳೂರು: ಪ್ರಜಾಸತ್ತಾತ್ಮಕವಾಗಿ ರಚನೆಯಾಗಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಸುವ ಬಿಜೆಪಿ ಸಂಚಿಗೆ ಕೈಜೋಡಿಸಿದ್ದ ೧೭ ಶಾಸಕರ ರಾಜಿನಾಮೆ ತಿರಸ್ಕರಿಸಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ್ದ ವಿಧಾನ ಸಭಾಧ್ಯಕ್ಷರ ನಿರ್ಣಯವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿರುವುದು ಪ್ರಜಾಸತ್ತೆಗೆ ದೊರೆತ ಜಯ ಎಂದು ಸಿಪಿಐಎಂ ವರ್ಣಿಸಿದೆ. ಆದರೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆತಿರುವುದು ಪ್ರಜಾಪ್ರಭುತ್ವದ ಅಣಕ ಎಂದು ಟೀಕಿಸಿದೆ.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇದು ಪಕ್ಷ ಮತ್ತು ತಮನ್ನು ಆಯ್ಕೆ ಮಾಡಿದ್ದ ಜನರಿಗೆ ದ್ರೋಹ ಎಸಗಿ ಪಕ್ಷಾಂತರ ಮಾಡುವ ಜನಪ್ರತಿನಿಧಿಗಳಿಗೆ ಪಾಠವಾಗಿದೆ. ಸಂವಿಧಾನದ ೧೬೪(೧ಃ) ಮತ್ತು ೩೬೧(ಎ]ಯಂತೆ ಅನರ್ಹಗೊಂಡವರು ಹೊಸದಾಗಿ ಚುನಾಯಿತರಾಗುವವರೆಗೆ ಸಚಿವ ಪದವಿಯನ್ನಾಗಲೀ ಅಥವ ಯಾವುದೇ ರಾಜಕೀಯ ಹುದ್ದೆಗಳನ್ನು ಪಡೆಯಲು ಅವಕಾಶವಿಲ್ಲವೆಂದು ಕೋರ್ಟ್ ಸ್ಪಷ್ಟಪಡಿಸಿದೆ. ಅದೇ ರೀತಿ, ಕುದುರೆ ವ್ಯಾಪಾರದ ಮಾದರಿಯಲ್ಲಿ ಶಾಸಕರನ್ನು ಖರೀದಿಸುವ ಮತ್ತು ಪಕ್ಷಾಂತರದಂತಹ ಪ್ರಜಾಪ್ರಭುತ್ವ ವಿರೋಧಿ ಪ್ರಕ್ರಿಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಬಲಪಡಿಸುವ ಕುರಿತು ಕೋರ್ಟ್ ನೀಡಿರುವ ಸೂಚನೆಯೂ ಸಹ ಸ್ವಾಗತಾರ್ಹ ಎಂದಿದ್ದಾರೆ.

ಆದರೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರಿಗೆ ಪುನಃ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ದುರದೃಷ್ಟಕರ ಇಂತಹ ತಪ್ಪಿತಸ್ಥರನ್ನು ಶಿಕ್ಷಿಸಲಾಗದ ದೌರ್ಬಲ್ಯ ಈ ಕಾಯ್ದೆ ಹೊಂದಿರುವುದನ್ನು ಇದು ಬಯಲಿಗೆಳೆದಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com