ಕರ್ನಾಟಕ ಉಪಚುನಾವಣೆ: ಮನವೊಲಿಕೆಗೆ ಜಗ್ಗದ ಕವಿರಾಜ್ ಅರಸು ಈಗ ಬಂಡಾಯ ಅಭ್ಯರ್ಥಿ!  

ಕಾಂಗ್ರೆಸ್-ಜೆಡಿಎಸ್ ತೊರೆದು 15 ಅನರ್ಹ ಶಾಸಕರು ಬಿಜೆಪಿ ಸೇರಿ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪಕ್ಷದಲ್ಲಿ ಮೂಲ ಬಿಜೆಪಿ ಸದಸ್ಯರ ಬಂಡಾಯ ತೀವ್ರಗೊಳ್ಳುತ್ತಿದೆ. ಈ ಪಟ್ಟಿಯಲ್ಲಿ ಹೊಸಪೇಟೆಯ ವಿಜಯನಗರ ವಿಧಾನಸಭಾ ಕ್ಷೇತ್ರವೂ ಸೇರ್ಪಡೆಯಾಗಿದೆ. 
ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸು
ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸು
Updated on

ಹೊಸಪೇಟೆ: ಕಾಂಗ್ರೆಸ್-ಜೆಡಿಎಸ್ ತೊರೆದು 15 ಅನರ್ಹ ಶಾಸಕರು ಬಿಜೆಪಿ ಸೇರಿ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪಕ್ಷದಲ್ಲಿ ಮೂಲ ಬಿಜೆಪಿ ಸದಸ್ಯರ ಬಂಡಾಯ ತೀವ್ರಗೊಳ್ಳುತ್ತಿದೆ. ಈ ಪಟ್ಟಿಯಲ್ಲಿ ಹೊಸಪೇಟೆಯ ವಿಜಯನಗರ ವಿಧಾನಸಭಾ ಕ್ಷೇತ್ರವೂ ಸೇರ್ಪಡೆಯಾಗಿದೆ. 

ವಿಜಯನಗರ ಶಾಸಕರಾಗಿದ್ದ ಆನಂದ್ ಸಿಂಗ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಈಗ ಅದೇ ಕ್ಷೇತ್ರದಿಂದ ಬಿಜೆಪಿಯಿಂದ ಕವಿರಾಜ್ ಅರಸು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಆನಂದ್ ಸಿಂಗ್ ನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಬಿಜೆಪಿಯ ಈ ನಿರ್ಧಾರವನ್ನು ವಿರೋಧಿಸಿ, ಕವಿರಾಜ್ ಅರಸು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ.16 ರಂದು ಸಂಸದ ದೇವೇಂದ್ರಪ್ಪ ಕರಡಿ ಮಗಣ್ಣ ಅವರಿಂದ ಸಂಧಾನಕ್ಕೆ ಪ್ರಯತ್ನ ಮಾಡಲಾಯಿತು. 

ಬೆಳಗಿನಿಂದ ನಗರದ ಅತೃಪ್ತರ ಮನೆಗೆ ಭೇಟಿ ನೀಡಿರುವ ಸಂಧಾನ ತಂಡ. ಕವಿರಾಜ್ ಅವರ ಮನವೊಲಿಕೆಗೆ ಪ್ರಯತ್ನಿಸಿತ್ತಾದರೂ, ಯಾವುದಕ್ಕೂ ಜಗ್ಗದ  ಕವಿರಾಜ್ ಅರಸು ಆನಂದ್ ಸಿಂಗ್ ಮುಂದೆಯೇ ತಮ್ಮ ಆಕ್ರೋಶ ಹೊರಹಾಕಿದರು ನನ್ನನ್ನ ಸೋಲಿಸಲು ಪ್ರಯತ್ನಮಾಡಿದ್ದ ಸಿಂಗ್ ಗೆ ನನ್ನ ಬೆಂಬಲ ಇಲ್ಲ ಎಂದು ಖಡಕ್ ಆಗಿ ಉತ್ತರ ಕೊಟ್ಟರು.

ಕೊನೆಗೆ ಬಂಡಾಯ ಶಮನಕ್ಕೆ ಮುಂದಾದ ಆನಂದ್ ಸಿಂಗ್ ಕಾಲಿಗೆ ಎರಗಿ ನನಗೇ ಅವಕಾಶ ಕೊಡಿ ನನಗೇ ಈ ಬಾರಿ ಅವಕಾಶ ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ಕಾಲಿಗೆ ನಮಸ್ಕರಿಸಲು ಕವಿರಾಜ್ ಮುಂದಾದರು. ಕವಿರಾಜ್ ಯಾವುದಕ್ಕೂ ಜಗ್ಗದ ಕಾರಣ ಮನವೊಲಿಕೆಗೆ ಬಂದವರು ಸುಸ್ತಾದರು.

ವರದಿ: ಸುಬಾನಿ ಪಿಂಜಾರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com