ರಾಜಕೀಯ ಪಕ್ಷಗಳಿಗೆ ಸಾರ್ವತ್ರಿಕ ಚುನಾವಣೆಯಂತಾದ ಉಪಚುನಾವಣೆ!

: ಡಿಸೆಂಬರ್ 5 ರಂದು ನಡೆಯುತ್ತಿರುವ ವಿಧಾನಸಭೆ ಉಪ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಮುಳುಗಿವೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಡಿಸೆಂಬರ್ 5 ರಂದು ನಡೆಯುತ್ತಿರುವ ವಿಧಾನಸಭೆ ಉಪ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಮುಳುಗಿವೆ.  

ಡಿಸೆಂಬರ್ 9ರಂದು ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ, ಉಪಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರದ ಅಳಿವು -ಉಳಿವು ನಿಂತಿದೆ, ಫಲಿತಾಂಶವು ರಾಜ್ಯದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವ ಕಾಂಗ್ರೆಸ್ ಭರವಸೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕರನ್ನು ಹೊಂದಿದೆ,  ವಿಧಾನಸಭೆ ಉಪ ಚುನಾವಣೆಯಲ್ಲಿ  ಬಹುಮತಕ್ಕೆ 113  ಶಾಸಕರನ್ನು ಹೊಂದಬೇಕಾಗುತ್ತದೆ, 

ಹೊಸಕೋಟೆಯಲ್ಲಿ  ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ, ಇವರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ.ಆದರೆ ಕೆಲ ಪ್ರದೇಶಗಳಲ್ಲಿ  ಅನರ್ಹ ಶಾಸಕರಿಗೆ ಬೆಂಬಲ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದ್ದಾರೆ.

ಸ್ಥಳೀಯ ಮುಖಂಡರು ಹೊರಗಿನಿಂದ ಬಂದವರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಎಲ್ಲರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ. ಮುಂದೆ ಎದುರಾಗುವ ಎಲ್ಲಾ ಸಂಕೀರ್ಣತೆಗಳ ಬೂಗ್ಗೆ ಬಿಜೆಪಿಗೆ ಅರಿವಿದೆ ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ  ಸೀಟುಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್ ಕೂಡ ಜಿದ್ದಿಗೆ ಬಿದ್ದಿದೆ,ಕೇವಲ ಅನರ್ಹ ಶಾಸಕರು ಮಾತ್ರ ಬಿಜೆಪಿ ಸೇರಿದ್ದಾರೆ, ಆದರೆ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. 

ಬಿಜೆಪಿ ಸರ್ಕಾರದ ಸಾಧನೆಗಳು ಹಾಗೂ ಸಿಎಂ ಯಡಿಯೂರಪ್ಪ ಅವರ ವರ್ಚಸ್ಸಿನ ಮೇಲೆ ಮತಯಾಚನೆಗೆ ಮುಂದಾಗಿದೆ. 

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಉಪ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತ ಪರಿಸ್ಥಿತಿಗೆ ತಂದು ನಿಲ್ಲಿಸಿದೆ, 2019ರ ಲೋಕಸಭೆ ಚುನಾವಣೆ ವೇಳೆ  ಒಕ್ಕಲಿಗರ ಪ್ರಬಲ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ ಸುರೇಶ್ ಗೆಲುವು ಸಾಧಿಸಿದ್ದರು. ಅದೊಂದು ಕ್ಷೇತ್ರ ಬಿಟ್ಟರೆ ಇನ್ನೆಲ್ಲೂ ಗೆಲುವು ಸಾಧಿಸಿರಲಿಲ್ಲ. ಹೀಗಾಗಿ ಮತ್ತೆ ಅದೇ ರೀತಿಯ ವೈಫಲ್ಯ ಕಾಣಲು ಕಾಂಗ್ರೆಸ್ ಗೆ ಸಿದ್ಧವಿಲ್ಲ,

ಇನ್ನೂ ಜೆಡಿಎಸ್ ಕೂಡ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೆಟ್ಟು ಕೊಡಲು ತೀರ್ಮಾನಿಸಿದೆ,  ಇದರ ಜೊತೆಗೆ ತಮ್ಮ ಪಕ್ಷವನ್ನು ಮತ್ತಷ್ಟು ಸದೃಡವಾಗಿಸಲು ಜೆಡಿಎಸ್ ನಿರ್ಧರಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com