ಉಪ ಚುನಾವಣೆ ನಂತರ ಬಿಎಸ್‌ವೈ ಸರ್ಕಾರ ಪತನ: ಮಾಜಿ ಸಚಿವ ಶಿವರಾಜ್ ತಂಗಡಗಿ

ರಾಜ್ಯದಲ್ಲಿ ಡಿಸೆಂಬರ್ 5ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಗುರುವಾರ ಹೇಳಿದ್ದಾರೆ.
ಶಿವರಾಜ್ ತಂಗಡಗಿ
ಶಿವರಾಜ್ ತಂಗಡಗಿ
Updated on: 

ಕೊಪ್ಪಳ: ರಾಜ್ಯದಲ್ಲಿ ಡಿಸೆಂಬರ್ 5ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಗುರುವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಂಗಡಗಿ, ಬಿಎಸ್‌ವೈ ತಾವು ಏಕಾಂಗಿಯಾಗಿದ್ದಾರೆ, ಅದಕ್ಕೆ ಸಿದ್ದರಾಮಯ್ಯ ಏಕಾಂಗಿ ಅಂತಾ ಹೇಳ್ತಿದ್ದಾರೆ. ಬಿಎಸ್‌ವೈ ರನ್ನು ನೋಡಿದ್ರೆ ಮನಸ್ಸಿಗೆ ನೋವಾಗುತ್ತೆ. ಕೋರ್ ಕಮೀಟಿಯಲ್ಲಿ ಚರ್ಚೆ ಆಗಿದ್ದನ್ನು ಬಿಜೆಪಿಗರೇ ರಿವೀಲ್ ಮಾಡಿದ್ದಾರೆ. 
ಇದರಲ್ಲೇ ಗೊತ್ತಾಗುತ್ತೆ, ಬಿಜೆಪಿಗರಿಗೆ ಬಿ ಎಸ್ ವೈ ಮೇಲೆ ಎಷ್ಟು ಸಿಟ್ಟಿದೆ ಅಂತಾ ಎಂದು ಟಾಂಗ್ ನೀಡಿದರು.

ಇದೇ ವೇಳೆ ಕಾನೂನು ಸಚಿವ ಮಾಧುಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ, ಮಾಧುಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತಾಡಬೇಕಿದೆ ಎಂದರು.

ಸಿದ್ದರಾಮಯ್ಯ ತಾಕತ್ತಿದ್ರೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಲಿ ಎಂಬ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ತಂಗಡಗಿ, ಈಗಾಗಲೇ ಬಾದಾಮಿಯಲ್ಲಿ ರಾಮುಲು ಅವರನ್ನು ಸೋಲಿಸಿದ್ದು ಯಾರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com