7 ಸೋಲಿನ ಸರದಾರ: ಶಿವಾಜಿನಗರ ಕ್ಷೇತ್ರದಲ್ಲಿ ಖುಲಾಯಿಸುತ್ತಾ 'ಚಾಯ್ ವಾಲಾ'ನ ಅದೃಷ್ಟ

ಇವರು ಕೂಡ ಪ್ರಧಾನಿ ನರೇಂದ್ರ ಮೋದಿಯವರಂತೆ ಟೀ ಮಾರಾಟಗಾರ, ಶಿವಾಜಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಇವರದ್ದು ಇದು 8ನೇ ಚುನಾವಣೆಯಾಗಿದೆ, ಈ ಹಿಂದೆ 7 ಬಾರಿ ಸ್ಪರ್ದಿಸಿದ್ದಾರೆ.
ಸೈಯ್ಯದ್ ಬುಖಾರಿ
ಸೈಯ್ಯದ್ ಬುಖಾರಿ

ಬೆಂಗಳೂರು: ಇವರು ಕೂಡ ಪ್ರಧಾನಿ ನರೇಂದ್ರ ಮೋದಿಯವರಂತೆ ಟೀ ಮಾರಾಟಗಾರ, ಶಿವಾಜಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಇವರದ್ದು ಇದು 8ನೇ ಚುನಾವಣೆಯಾಗಿದೆ, ಈ ಹಿಂದೆ 7 ಬಾರಿ ಸ್ಪರ್ದಿಸಿದ್ದಾರೆ.

46 ವರ್ಷದ ಸೈಯ್ಯದ್ ಬುಖಾರಿ 2010ರಲ್ಲಿ   ಶಾಂತಲಾನಗರ ವಾರ್ಡ್ ನಿಂದ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 42 ಮತ ಪಡೆದಿದ್ದರು, 2018ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು, 141 ಮತಗಳಿಸಿದ್ದರು, 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಬುಖಾರಿ ವಂಶಸ್ಥರು ಟೀ ಮಾರಾಟಗಾರರಾಗಿದ್ದಾರೆ. ಅವರ ತಾತ ಟೀ ಮಾರಾಟ ಆರಂಭಿಸಿದರು, ಬೇರೆ ಎಲ್ಲಾ ವ್ಯವಹಾರಗಳಂತೆ ಈ ಟೀ ವ್ಯಾಪಾರದಲ್ಲೂ ಅವರು ನಷ್ಟ ಅನುಭವಿಸಿದ್ದಾರೆ, ಜಾನ್ಸನ್ ಮಾರ್ಕೆಟ್ ಬಳಿ ಟೀ ಶಾಪ್ನಡೆಸುತ್ತಿದ್ದೆ, ಆದರೆ ನಷ್ಟದ ಕಾರಣ ಅದನ್ನು ಮುಚ್ಚಿದೆ, ಸದ್ಯ ಶಾಂತಿನಗರ ಅಶೋಕನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದೇನೆ, ನಾವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದೇವೆ.

2010ರಲ್ಲಿ ನಾನು ಸಮಾಜ ಸೇವೆಯಲ್ಲಿ ತೊಡಗಿದ್ದೆ, ನೆರೆಹೊರೆಯವರಿಗೆ ಸಹಾಯ ಮಾಡುತ್ತಿದ್ದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳ ಪರವಾಗ ಕೆಲಸ ಮಾಡಿದ್ದೇನೆ,ಈ ಪಕ್ಷಗಳನು ನನ್ನನ್ನು ಬಳಸಿಕೊಂಡಿವೆ, ಆದರೆ ನಾವು ಸಹಾಯ ಕೋರಿದಾಗ ಅವರು ಬೇರೆದಾರಿ ನೋಡಿಕೊಂಡರು.

ಗೆಲ್ಲುವುದು ಸೋಲುವುದು ಪ್ರಮುಖವಲ್ಲ, ಬೆಳಗ್ಗೆ 6 ಗಂಟೆಗೆ ಎದ್ದು 9ರವರೆಗೆ ಪ್ರಚಾರ ಮಾಡುತ್ತೇನೆ, ಬೆಳಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ನಾನು ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ, ಸಂಜೆ ಮತ್ತೆ ಪ್ರಚಾರ ಮಾಡುತ್ತೇನೆ ಎಂದು ಬುಖಾರಿ ಹೇಳಿದ್ದಾರೆ. ಶುಕ್ರವಾರದಿಂದ ನಾನು 10 ದಿನಗಳ ರಜೆ ತೆಗೆದುಕೊಳ್ಳುತ್ತೇನೆ, ಹೀಗಾಗಿ ನಾನು ಪ್ರಚಾರದ ಕಡೆ ಗಮನ ಹರಿಸಬಹುದು, ನನ್ನ ಸ್ನೇಹಿತರು ಹಾಗೂ ಸಂಬಂಧಿಕರು ನನ್ನ ಬೆಂಬಲಕ್ಕಿದ್ದಾರೆ ಎಂದು ಬುಖಾರಿ ತಿಳಿಸಿದ್ದಾರೆ.

ಸ್ಪರ್ದಿಸಿದ ಇಷ್ಟು ಚುನಾವಣೆಗಳಲ್ಲೂ ಒಮ್ಮೆಯೂ ಗೆದ್ದಿಲ್ಲ, ಗೆಲ್ಲುವುದು ಪ್ರಮುಖವಲ್ಲ, ಪ್ರಚಾರದ ವೇಳೆ ಹಲವು ರೀತಿಯ ಜನರನ್ನು ನಾನು ಭೇಟಿ ಮಾಡಿದ್ದೇನೆ, ನಾಗರಿಕ ಸಮಸ್ಯೆಗಳ ಬಗ್ಗೆ ನಾನು ಹೀಗಾಗಲೇ ಹಲವು ವಿಡಿಯೋಗಳನ್ನು ಮಾಡಿದ್ದೇನೆ,  ಕಳೆದ ಏಳು ವರ್ಷಗಳಲ್ಲಿ ರಸ್ತೆ ಗುಂಡಿ, ಚರಂಡಿ ಸಮಸ್ಯೆ, ಸಂಚಾರ ಸಿಗ್ನಲ್ ಗಳ ಬಗ್ಗೆ 810 ವಿಡಿಯೋ ಮಾಡಿದ್ದೇನೆ, ಜೊತೆಗೆ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com