ಮಹೇಶ್ ಕುಮಟಳ್ಳಿಗೆ ಆತಂಕ ಬೇಡ, ವಿಧಾನಸಭೆ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಸವದಿ

ನಾನು ವಿಧನಾಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಹಾಗಾಗಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಭಯ ಪಡುವ ಅಗತ್ಯವಿಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟ ಪಡಿಸಿದ್ದಾರೆ.
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ
Updated on

ಚಿತ್ರದುರ್ಗ: ನಾನು ವಿಧನಾಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಹಾಗಾಗಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಭಯ ಪಡುವ ಅಗತ್ಯವಿಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟ ಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ದುರಾದೃಷ್ಟವಶಾತ್ ನಾನು ಸೋತೆ, ನನ್ನ ಪಕ್ಷ ನಿಷ್ಠೆಯಿಂದಾಗಿ ನಾನು ಡಿಸಿಎಂ ಆಗಿದ್ದೇನೆ, ನಾನು ಈ ಹುದ್ದೆಯಲ್ಲಿ ಮುಂದುವರೆಯಲು ಇನ್ನೂ 5 ತಿಂಗಳು ಸಮಯವಿದೆ ಎಂದು ಹೇಳಿದ್ದಾರೆ.

ಇದು ಬಿಜೆಪಿ ಹೈಕಮಾಂಡ್  ನಿರ್ದೇಶನದಂತೆ ನಾನು ವಿಧಾನ ಪರಿಷತ್ ಸದಸ್ಯನಾಗುವ ಮೂಲಕ ಶಾಸನಸಭೆಗೆ ಪ್ರವೇಶಿಸುತ್ತೇನೆ, ಎರಡು ಎಂಎಲ್ ಸಿ ಸ್ಥಾನಗಳು ಖಾಲಿ ಇವೆ, ಶೀಘ್ರವೇ ಆದರ ಆಯ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅಥಣಿ ವಿಧಾನಸಭೆ ಕ್ಷೇತ್ರದಿಂದ ಲಕ್ಷ್ಮಣ ಸವದಿ ಸ್ಪರ್ಧಿಸುತ್ತಾರೆ ಎಂದು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ  ಆತಂಕಕ್ಕೊಳಗಾಗಿದ್ದರು, ಈ ಸಂಬಂಧ ಸವದಿ ಸ್ಪಷ್ಟನೆ ನೀಡಿದ್ದಾರೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com