ಮೊಮ್ಮಕ್ಕಳೊಂದಿಗೆ ದೇವೇಗೌಡ ಪಕ್ಷ ಸಂಘಟನೆ
ಮೊಮ್ಮಕ್ಕಳೊಂದಿಗೆ ದೇವೇಗೌಡ ಪಕ್ಷ ಸಂಘಟನೆ

ಜೋಡೆತ್ತುಗಳ ಜೊತೆ ಜೆಡಿಎಸ್ ಸಂಘಟನೆ: ಪ್ರಜ್ವಲ್-ನಿಖಿಲ್ ಜೊತೆ ಎಚ್ ಡಿಡಿ ರಾಜ್ಯ ಪ್ರವಾಸ!

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು, ಹಲವು ಶಾಸಕರು ಪಕ್ಷ ತ್ಯಜಿಸಿದ್ದಾರೆ, ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮಕಾಡೆ ಮಲಗಿದೆ.
Published on

ಬೆಂಗಳೂರು: ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು, ಹಲವು ಶಾಸಕರು ಪಕ್ಷ ತ್ಯಜಿಸಿದ್ದಾರೆ, ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮಕಾಡೆ ಮಲಗಿದೆ.

ಹೀಗಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು, ತಮ್ಮ ಮೊಮ್ಮಕ್ಕಳ ಜೊತೆ ಈ ತಿಂಗಳ ಅಂತ್ಯದಿಂದ  ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ. 

86 ವರ್ಷದ ದೇವೇಗೌಡರು ಕೇವಲ ಒಬ್ಬರೇ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಹೋಗುತ್ತಿಲ್ಲ, ಸೆಪ್ಟಂಬರ್ 28 ರಿಂದ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ, ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಜೊತೆ ಸೇರಿ ರಾಜ್ಯ ಪ್ರವಾಸ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಯಾರು ಇನ್ಮುಂದೆ ನಮ್ಮ ಪಕ್ಷವನ್ನು ‌ಬಿ ಟೀಮ್ಎಂದು ಕರೆಯೋದಕ್ಕೆ ಆಗೋದಿಲ್ಲ ನಾನು‌ ಅದನ್ನೆಲ್ಲಾ ಇಷ್ಟು ದಿನ ಸಹಿಸಿಕೊಂಡು ‌ಸುಮ್ಮನೆ ಇದ್ದೆ. ಆದರೆ ‌ಅದು ಇನ್ಮುಂದೆ ಅದೆಲ್ಲಾ ನಡೆಯುವುದಿಲ್ಲ. ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ‌ನವರು ಏನೇ ಪ್ರಯತ್ನ ಮಾಡಿದ್ರು ಕೊನೆಗೆ ಸಕ್ಸಸ್ ಆಯ್ತ ಎಂದು ಪ್ರಶ್ನಿಸಿದ ಹೆಚ್‌ಡಿಡಿ, ಕಾಂಗ್ರೆಸ್ 130 ಇದ್ದವರು ಕೊನೆಗೆ 78ಕ್ಕೆ ಬಂದರು ಎಂದು ಜೆಡಿಎಸ್ ಅನ್ನು 'ಬಿ' ಟೀಂ ಎಂದಿದ್ದ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಪಕ್ಷ ಬಲವರ್ಧನೆ ಹಾಗೂ ನಾಯಕರ ವರ್ಚಸ್ಸು ಹೆಚ್ಚಿಸಲು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸಾಮಾಜಿಕ ಜಾಲತಾಣಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳಲು ಮುಂದಾಗಿದ್ದಾರೆ

ರಾಷ್ಟ್ರೀಯ ಪಕ್ಷಗಳಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಚಟುವಟಿಕೆಗಳನ್ನು ಕಾರ್ಯಕರ್ತರಿಗೆ ಮುಟ್ಟಿಸುವ ಕೆಲಸಕ್ಕೆ ಜೆಡಿಎಸ್ ಸಜ್ಜಾಗಿದೆ. 

ಗುರುವಾರ ಪಕ್ಷದ ಅಧಿಕೃತ ವೆಬ್ ಸೈಟ್ ಲೋಕಾರ್ಪಣೆಗೊಂಡಿದ್ದು, ಇದರ ನಿರ್ವಹಣೆಯ ಜವಾಬ್ದಾರಿಯನ್ನು ವಕ್ತಾರ ರಮೇಶ್ ಬಾಬು ಅವರಿಗೆ ವಹಿಸಲಾಗಿದ್ದು, ಸಾಮಾಜಿಕ ಜಾಲತಾಣ ನಿರ್ವಹಣೆಗೆ ಅನುಭವಿ ಸಿಬ್ಬಂದಿ ನೇಮಕ ಮಾಡಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com