ಈಶ್ವರಪ್ಪಗೆ ಧಮ್ ಇದ್ರೆ ಗೋಮಾಂಸ ರಫ್ತು ನಿಲ್ಲಿಸಲಿ: ವಿ.ಎಸ್. ಉಗ್ರಪ್ಪ

ಕಾಂಗ್ರೆಸ್ ನಾಯಕರ ಪುರುಷತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ‍್ವರಪ್ಪ ಅವರಿಗೆ ಪುರುಷತ್ವ ಇದ್ದಿದ್ದೇ ಆದಲ್ಲಿ, ಧಮ್  ಇದ್ದರೆ ವಿದೇಶಕ್ಕೆ ಆಗುತ್ತಿರುವ ಗೋಮಾಂಸ ರಫ್ತು ನಿಲ್ಲಿಸಲಿ ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ. 
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ

ಬೆಂಗಳೂರು: ಕಾಂಗ್ರೆಸ್ ನಾಯಕರ ಪುರುಷತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ‍್ವರಪ್ಪ ಅವರಿಗೆ ಪುರುಷತ್ವ ಇದ್ದಿದ್ದೇ ಆದಲ್ಲಿ, ಧಮ್  ಇದ್ದರೆ ವಿದೇಶಕ್ಕೆ ಆಗುತ್ತಿರುವ ಗೋಮಾಂಸ ರಫ್ತು ನಿಲ್ಲಿಸಲಿ ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಕಾಂಗ್ರೆಸ್ ನಾಯಕರ ಪುರುಷತ್ವದ ಬಗ್ಗೆ ಪ್ರಶ್ನೆ‌ ಮಾಡಿದ್ದಾರೆ. ಅವರಿಗೆ ಉಡಾಫೆ ಮಾತುಗಳನ್ನು ಆಡುವುದು ಸುಲಭ. ಈಶ್ವರಪ್ಪಗೆ ನಿಜವಾದ ಪ್ರಾಮಾಣಿಕತೆ, ಪುರುಷತ್ವ ಇರುವುದೇ ಆದಲ್ಲಿ ದೇಶದಿಂದ ವಿದೇಶಕ್ಕೆ ಆಗುತ್ತಿರುವ ಗೋಮಾಂಸ ರಫ್ತು ನಿಲ್ಲಿಸಲಿ. ಗುಜರಾತ್ ನಲ್ಲಿರುವ ಗೋ ಮಾಂಸ ಕಾರ್ಖಾನೆಗಳನ್ನು ಬಂದ್ ಮಾಡಿಸಲಿ ಎಂದು ಒತ್ತಾಯಿಸಿದರು.

ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿರುವ ಗೃಹಸಚಿವ ಅಮಿತ್ ಷಾ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದಕ್ಕೆ ನಾಚಿಕೆಯಾಗಬೇಕು. ಹಿಂದಿ ಮಾತ್ರವೇ ರಾಷ್ಟ್ರಭಾಷೆ ಅಲ್ಲ.ಪ್ರಾಂತೀಯ ಭಾಷೆಗಳ ಮೇಲಿನ ದಬ್ಬಾಳಿ‌ ಸಲ್ಲದು. ಭಾಷಾ ಹೇರಿಕೆ, ಜಾತಿ ಧರ್ಮದ ರಾಜಕಾರಣ‌ವನ್ನು ಕಾಂಗ್ರೆಸ್ ಖಂಡಿಸುತ್ತದೆ. ಅಮಿತ್ ಷಾ ರಾಷ್ಟ್ರದ ಜನರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದರು. 

ಇನ್ನು ಸಿಎಂ ಯಡಿಯೂರಪ್ಪ ತಾವು ರೈತನಾಯಕ ಎಂದು ಹಸಿರು ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸಿದ್ದಾರೆ.ರೈತರು ರಾಜ್ಯದಲ್ಲಿನ ಪ್ರವಾಹದಿಂದ ತತ್ತರಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ 8163 ಕೋಟಿ ಸಾಲ ಮನ್ನಾ , ಕುಮಾರಸ್ವಾಮಿ ಸರ್ಕಾರದಲ್ಲಿ ಒಂದು ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಯಡಿಯೂರಪ್ಪಗೆ ರೈತರ ಮೇಲೆ ಕಾಳಜಿ ಇದ್ದದ್ದಾದರೆ ನೆರೆ ಹಾಗೂ ಬರಪೀಡಿತ ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com