ಹುಣಸೂರಿನಿಂದ ಹರೀಶ್ ಗೌಡ ಸ್ಪರ್ಧಿಸಿದರೆ ಸಂತೋಷ: ಪ್ರಜ್ವಲ್ ರೇವಣ್ಣ
ಹಾಸನ: ಜಿಟಿ ದೇವೇಗೌಡ ಅವರ ಪುತ್ರ ಹರೀಶ್ ಗೌಡ ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾದರೆ ತುಂಬಾ ಸಂತೋಷ, ಪ್ರಜಾಪ್ರಭುತ್ವದಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಅಭ್ಯಂತರವಿಲ್ಲ, ಉಪಚುನಾವಣೆಯಲ್ಲಿ ನಾಲ್ಕು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೂರು ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಹಾಕಲು ಸೂಚಿಸಲಾಗಿದೆ. ಜಿ.ಟಿ. ದೇವೇಗೌಡರ ಪುತ್ರ ಹರೀಶ್ ಗೌಡ ಹುಣಸೂರಿನಿಂದ ಸ್ಪರ್ಧಿಸಿದರೆ ಒಳ್ಳೆಯದು.
ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಪಿತೃ ಪಕ್ಷ ಮುಗಿದ ಬಳಿಕ ಸೋಮವಾರದಿಂದ ಚುನಾವಣಾ ಪ್ರಚಾರ ಆರಂಭಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಹೈಕೋರ್ಟ್ ನಿಂದ ನೋಟೀಸ್ ಬಂದಿದೆ ಹೈಕೋರ್ಟ್ ಗೆ ವಿಚಾರಣೆಗೆ ನಾನು ಹಾಜರಾಗುತ್ತೇನೆ ಆದರೆ ನಾನು ಹೆದರಿಕೊಂಡಿಲ್ಲ, ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ನಾನು ಧೈರ್ಯವಾಗಿ ವಿಚಾರಣೆಗೆ ಹೋಗುತ್ತೇನೆ ಹೆದರುವ ಅಗತ್ಯತೆ ಇಲ್ಲ ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ