ವರ್ಷದ ಏಳು-ಬೀಳುಗಳ ಕಿರುನೋಟ: ಯಡಿಯೂರಪ್ಪ ಸ್ಥಾನ ತುಂಬಲು ಕಟೀಲ್ ಶಕ್ತರೇ?

ನಳಿನ್ ಕುಮಾರ್ ಕಟೀಲ್  ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸಿದ್ದಾರೆ, ಹೀಗಾಗಿ ಅವರ ಅಭಿಮಾನಿಗಳು ಸಂಭ್ರಮಾಚರಣೆಗಾಗಿ ಕಾಯುತ್ತಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್
Updated on

ಬೆಂಗಳೂರು: ನಳಿನ್ ಕುಮಾರ್ ಕಟೀಲ್  ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸಿದ್ದಾರೆ, ಹೀಗಾಗಿ ಅವರ ಅಭಿಮಾನಿಗಳು ಸಂಭ್ರಮಾಚರಣೆಗಾಗಿ ಕಾಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಪ್ರವಾಹ ಮತ್ತು ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡದಿರಲು  ಕಟೀಲ್ ನಿರ್ಧರಿಸಿದ್ದಾರೆ.

ಅವರನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಹೋಲಿಸಲಾಗದಿದ್ದರೂ, ಒಂದು ವರ್ಷದ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆಗಳಿಲ್ಲದೇ ಕೆಲಸ ಮಾಡಿದ್ದಾರೆ, ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿತ್ತು, 15ರಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು.

ಈಗ ಸದ್ಯ ಬಿಬಿಎಂಪಿ ಚುನಾವಣೆ ಕಟೀಲ್ ಅವರ ಮುಂದಿರುವ ದೊಡ್ಡ ಸವಾಲಾಗಿದೆ. ಕಾಂಗ್ರೆಸ್ ಪ್ರಬಲವಾಗಿರುವ ಕೌನ್ಸಿಲ್ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆಲ್ಲಬೇಕು,  ಶಿರಾ ಉಪ ಚುನಾವಣೆ ಕೂಡ ಎದುರಾಗುತ್ತಿದೆ, ಅದರ ಜೊತೆಗೆ ಮಸ್ಕಿ ಮತ್ತು ಆರ್ ಆರ್ ನಗರ ಉಪ ಚುನಾವಣೆಗಳು ಬಾಕಿ ಉಳಿದಿವೆ, ಎಲ್ಲಾ ಕಾನೂನು  ಅಡೆ ತಡೆಗಳನ್ನು ನಿವಾರಿಸಿಕೊಂಡು ಚುನಾವಣೆ ಎದುರಿಸಬೇಕಾಗಿದೆ.ಮುಂದಿನ ಆರು ತಿಂಗಳಲ್ಲಿ ಏನೇನು ಮಾಡಬೇಕು ಎಂಬ ರೋಡ್ ಮ್ಯಾಪ್ ಅನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿಎಲ್ ಸಂತೋಷ್ ಭಾನುವಾರ ರಾಜ್ಯ ಘಟಕಕ್ಕೆ ನೀಡಿದ್ದಾರೆ.

ಇದರ ಜೊತೆಗೆ ಹಳೇ ಮೈಸೂ ರು ಭಾಗದಲ್ಲಿ ಪಕ್ಷವನ್ನು ಬಲ ಪಡಿಸುವ ಜವಾಬ್ದಾರಿಯೂ ಕಟೀಲ್ ಮೇಲಿದೆ, ಅಲ್ಲಿ ಪಕ್ಷವು ಸಾಂಪ್ರದಾಯಿಕವಾಗಿ 60 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಳಪೆ ಸಾಧನೆ ಮಾಡಿದೆ.ಈ ಸಂಬಂಧ ಪಕ್ಷದ ಸಭೆಯಲ್ಲಿ ತೀವ್ರತರವಾದ ಚರ್ಚೆ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಳಿನ್ ಕುಮಾರ್ ಕಟೀಲ್ ಆಯ್ಕೆ ಅಚ್ಚರಿ ತಂದಿತ್ತು, ಆದರೆ ಅವರು ಆರ್ ಎಸ್ ಎಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಅವರಿಗೆ ಈ ಹುದ್ದೆ ನೀಡಲಾಗಿದೆ. ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್  ಬಲಪಡಿಸುವುದರಲ್ಲಿ ಅವರ ಪಾತ್ರವು ಆದರೆ ಮಹತ್ವದ್ದಾಗಿದೆ .

ದಕ್ಷಿಣ ಕನ್ನಡದಲ್ಲಿ ಅವರು ವಿವಾದವುಲ್ಲದ ವ್ಯಕ್ತಿಯಾಗಿದ್ದಾರೆ, ಜೊತೆಗೆ ಅವರ ವಸ್ಸು ಮತ್ತು ಅವರಿಗಿರುವ ಸಂಪರ್ಕಗಳಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಉತ್ತಮ ಹಾಗೂ ಪ್ರಬಲ ರಾಜಕಾರಣಿಯಾಗುವ ನಿರೀಕ್ಷೆಯಿದೆ ಎಂದು ರಾಜಕೀಯ ತಜ್ಞ ಹರೀಶ್ ರಾಮಸ್ವಾಮಿ ತಿಳಿಸಿದ್ದಾರೆ

ಕಟೀಲ್ ಅವರ ವಿರೋಧಿಗಳು, ಅವರು ಕರಾವಳಿ ಪಟ್ಟಿಯನ್ನು ಮೀರಿ ವಾಸ್ತವಿಕವಾಗಿ “ಶೂನ್ಯ ಪ್ರಭಾವ” ಹೊಂದಿದ್ದಾರೆಂದು ಗಮನಸೆಳೆದಿದ್ದಾರೆ. ಹಳೇ ಮೈಸೂರು, ಉತ್ತರ ಕರ್ನಾಟಕ ಹಾಗೂ ಕೇಂದ್ರ ಕರ್ನಾಟಕದಲ್ಲಿ ಕಟೀಲ್ ಹೊರಗಿನವರಾಗೇ ಉಳಿದಿದ್ದಾರೆ  ಎಂದು ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ಸ್ಥಾನ ತುಂಬಲು ಕಟೀಲ್ ಗೆ
ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ಕೆಲವರು ಅವರ ಕೆಲಸವನ್ನು ಮೆಚ್ಚುತ್ತಾರೆ ಮತ್ತು ಕಟೀಲ್ ರಾಜಕೀಯ ಅರ್ಹತೆಯ ಅತ್ಯುತ್ತಮ ಉದಾಹರಣೆ ಎಂದು ಹೇಳುತ್ತಾರೆ,  ಕಾಂಗ್ರೆಸ್ ಪ್ರಬಲ ನಾಯಕ ಜನಾರ್ದನ ಪೂಜಾರಿ ವಿರುದ್ಧ ಅವರು ಗಳಿಸಿದ ಎರಡು ಗೆಲುವುಗಳು ಅವರ ರಾಜಕೀಯ ಚತುರತೆಗೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com