ರೈತರ ಬಂದ್ ಗೆ ಜೆಡಿಎಸ್ ಬೆಂಬಲ, ಭೂ ಮಸೂದೆ ಪರವಾಗಿಯೂ ಮತ; ಯಾವ ಪಕ್ಷದಲ್ಲೂ ತತ್ವ ಸಿದ್ಧಾಂತ ಇಲ್ಲ: ಹೊರಟ್ಟಿ

ಯಾವ ಪಕ್ಷದಲ್ಲೂ ತತ್ವ-ಸಿದ್ದಾಂತ ಇಲ್ಲ, ನಾವೂ ಅದಕ್ಕೆ ಹೊರತಾಗಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಬಸವರಾಜ್ ಹೊರಟ್ಟಿ
ಬಸವರಾಜ್ ಹೊರಟ್ಟಿ

ಬೆಂಗಳೂರು: ಯಾವ ಪಕ್ಷದಲ್ಲೂ ತತ್ವ-ಸಿದ್ದಾಂತ ಇಲ್ಲ, ನಾವೂ ಅದಕ್ಕೆ ಹೊರತಾಗಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ವಿಧಾನಸೌಧಲ್ಲಿ ಮಾತನಾಡಿದ ಅವರು, ಪರಿಷತ್ ನಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೆಲವೊಂದು ತಪ್ಪುಗಳು ಆಗುತ್ತೇವೆ ಅದಕ್ಕೆ ಏನು ಮಾಡೋದಕ್ಕೆ ಆಗಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇವತ್ತಿನ ರಾಜಕಾರಣ ಕಲುಷಿತವಾಗಿದೆ. ಇವತ್ತಿನ ರಾಜಕಾರಣದಲ್ಲಿ ಸಿದ್ಧಾಂತವೇ ಇಲ್ಲ. ನಾವು ನಿನ್ನೆ ಬಂದ್ ಗೆ ಬೆಂಬಲ ನೀಡಿದ್ದೇವೆ. ಪರಿಷತ್ ನಲ್ಲಿ ನಮ್ಮ ಸದಸ್ಯರಿಗೆ ಗೊಂದಲವಾಗಿದೆ. ಕೆಲವರು ಭೂ ಮಸೂದೆಯ ಪರವಾಗಿದ್ರು. ಮರಿತಿಬ್ಬೇಗೌಡ ಒಬ್ಬರೇ ವಿರೋಧ ವ್ಯಕ್ತಪಡಿಸಿದ್ರು. ಪರಿಷತ್ ನಲ್ಲಿ ಯಾಕೆ ಹಾಗಾಯ್ತು ಅಂತ ನಾಳೆ ಹೇಳ್ತೇವೆ ಎಂದು ವಿವರಿಸಿದರು.

ಇದು ಸರಿಯೋ ತಪ್ಪೋ ಪರಿಷತ್ ನಲ್ಲಿ ಮಸೂದೆ ಪರ ನಿಂತಿದ್ದು ನಿಜ. ಕಳೆದ ಬಾರಿ ಬಿಲ್ ಮಂಡನೆ ವೇಳೆ ನಾವು ಬಿಜೆಪಿಗೆ ಬೆಂಬಲ ಕೊಟ್ಟಿರಲಿಲ್ಲ. ಬಳಿಕ ನಮ್ಮ ನಾಯಕರ ಜೊತೆ ಬಿಜೆಪಿಯವರು ಮಾತನಾಡಿದ್ದಾರೆ. ನಾವು ವಿರೋಧ ಮಾಡಿದ ಕೆಲವೊಂದು ಅಂಶಗಳನ್ನ ಕಾಯ್ದೆಯಲ್ಲಿ ತೆಗದು ಹಾಕಿದ್ದಾರೆ. ಈಗ ಯಾವ ಪಕ್ಷದಲ್ಲಿ ತತ್ವ ಸಿದ್ದಾಂತ ಇದೆ ನೀವೇ ಹೇಳಿ?. ಇವತ್ತಿನ ರಾಜಕಾರಣದಲ್ಲಿ ಹೊಂದಾಣಿಕೆ ಅಂತೀರೋ ಏನಂತಿರೋ. ರಾಜಕೀಯದಲ್ಲಿ ಸುಧಾರಣೆಯನ್ನು ತರಬೇಕು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com