ಗ್ರಾಮ ಪಂಚಾಯ್ತಿ ಚುನಾವಣೆ: ಅಭ್ಯರ್ಥಿಗಳಿಂದ ಹೈ-ಟೆಕ್ ಪ್ರಚಾರ

ರ್ಯಾಲಿ ರಹಿತ, ಮನೆ ಮನೆಗೆ ತೆರಳಿ ಪ್ರಚಾರ ಮಾಡದೇ ಇರುವ ಚುನಾವಣೆಗಳು ಕಲ್ಪನೆಗಷ್ಟೇ ಈ ವರೆಗೂ ಸೀಮಿತವಾಗಿತ್ತು. ಆದರೆ ಈಗ ಕೋವಿಡ್-19 ಸಂದರ್ಭದಲ್ಲಿ ಬಂದಿರುವ ಗದಗ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಅಭ್ಯರ್ಥಿಗಳು ಹೈಟೆಕ್ ಪ್ರಚಾರಕ್ಕೆ ಅವಕಾಶವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. 
ಗ್ರಾಮ ಪಂಚಾಯ್ತಿ ಚುನಾವಣೆ: ಅಭ್ಯರ್ಥಿಗಳಿಂದ ಹೈ-ಟೆಕ್ ಪ್ರಚಾರ
ಗ್ರಾಮ ಪಂಚಾಯ್ತಿ ಚುನಾವಣೆ: ಅಭ್ಯರ್ಥಿಗಳಿಂದ ಹೈ-ಟೆಕ್ ಪ್ರಚಾರ

ಗದಗ: ರ್ಯಾಲಿ ರಹಿತ, ಮನೆ ಮನೆಗೆ ತೆರಳಿ ಪ್ರಚಾರ ಮಾಡದೇ ಇರುವ ಚುನಾವಣೆಗಳು ಕಲ್ಪನೆಗಷ್ಟೇ ಈ ವರೆಗೂ ಸೀಮಿತವಾಗಿತ್ತು. ಆದರೆ ಈಗ ಕೋವಿಡ್-19 ಸಂದರ್ಭದಲ್ಲಿ ಬಂದಿರುವ ಗದಗ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಅಭ್ಯರ್ಥಿಗಳು ಹೈಟೆಕ್ ಪ್ರಚಾರಕ್ಕೆ ಅವಕಾಶವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. 

ಮತದಾರರನ್ನು ತಲುಪುವುದಕ್ಕಾಗಿ ಅಭ್ಯರ್ಥಿಗಳು ಡಿಜಿಟಲ್ ವ್ಯವಸ್ಥೆಯ ಮೊರೆಹೋಗಿದ್ದು, ತಾವು ಮಾಡಿರುವ ಕೆಲಸಗಳನ್ನು ಹಾಗೂ ಮತದಾರರನ್ನು ಸೆಳೆಯುವುದಕ್ಕಾಗಿ ಅಗತ್ಯವಿರುವುದನ್ನು ಸಾಮಾಜಿಕ ಜಾಲತಾಣ ಹಾಗೂ ಸ್ಮಾರ್ಟ್ ಫೋನ್ ಗಳ ಮೂಲಕ ಪ್ರಚಾರ ನಡೆಸಲು ಪ್ರಾರಂಭಿಸಿದ್ದಾರೆ. 

ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಇದೇ ಕಾರಣದಿಂದಾಗಿ ಹಲವಾರು ಸ್ಥಳೀಯ ನಾಯಕರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪರಿಣಾಮ ಈ ಹಿಂದಿನಂತೆ ಚುನಾವಣೆಗೆ ಖರ್ಚು ಮಾಡುವುದಕ್ಕೆ ಹಣದ ಕೊರತೆ ಎದುರಿಸುತ್ತಿದ್ದಾರೆ. ಚುನಾವಣಾ ಖರ್ಚು-ವೆಚ್ಚಗಳ ದೃಷ್ಟಿಯಿಂದಲೂ ಡಿಜಿಟಲ್ ಪ್ರಚಾರದ ಮೊರೆ ಹೋಗುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಕಳೆದ ಬಾರಿ ಗೆದ್ದಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಈ ಬಾರಿ ಫೇಸ್ ಬುಕ್ ಖಾತೆ, ಪೇಜ್, ವಾಟ್ಸ್ ಆಪ್ ಗ್ರೂಪ್ ಗಳನ್ನು ಪ್ರಾರಂಭಿಸಿದ್ದು, ಆ ಮೂಲಕ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಾಧನೆಗಳನ್ನು ಪ್ರಚಾರ ಮಾಡತೊಡಗಿದ್ದಾರೆ. 

ಈಗ ಗ್ರಾಮದ ಬಹುತೇಕ ಮಂದಿಯ ಬಳಿ ಸ್ಮಾರ್ಟ್ ಫೋನ್ ಇದ್ದು, ಮತದಾರರನ್ನು ತಲುಪುವುದೂ ಸುಲಭವಾಗುತ್ತದೆ ಎಂಬುದು ಅಭ್ಯರ್ಥಿಗಳ ಅಭಿಪ್ರಾಯವಾಗಿದೆ.

ಎಲ್ಲಾ ಅಭ್ಯರ್ಥಿಗಳು ಜನರನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಲುಪುತ್ತಿದ್ದು ಮನೆ ಮನೆ ಪ್ರಚಾರ ಬಹುತೇಕ ಅತ್ಯಂಗೊಂಡಿದೆ ಎನ್ನುತ್ತಾರೆ ರೋಣ ತಾಲ್ಲೂಕಿನ ಶರಣು ಪಾಟೀಲ್ 

ಕೋವಿಡ್-19 ನಿಯಮಗಳನ್ನು ಗ್ರಾಮಸ್ಥರು ಕಠಿಣವಾಗಿ ಪಾಲಿಸುತ್ತಿದ್ದು, ಗ್ರಾಮಸ್ಥರ ಮನೆಗಳಿಗೆ ತೆರಳಿ ಪ್ರಚಾರ ಮಾಡುವುದು ಕಷ್ಟಸಾಧ್ಯವಾಗಿದೆ, ಚುನಾವಣೆ ಹತ್ತಿರ ಬಂದಾಗ ಬ್ಯಾನರ್ ಗಳನ್ನು ಹಾಕುತ್ತೇವೆ, ಈಗ ಪ್ರಚಾರಕ್ಕಾಗಿ ಇ-ಬ್ಯಾನರ್ ಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಜನತೆಗೆ ತಲುಪುವಂತೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಬ್ಬಿಗೇರಿ ಗ್ರಾಮ ಪಂಚಾಯ್ತಿಯ ಆಕಾಂಕ್ಷಿ ಸಿಕಂದರ್ ಎಂ ಅರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com