ವಿಶ್ವನಾಥ್ ಗೆ ಸಚಿವ ಸ್ಥಾನ ನೀಡಲು ಕಾನೂನು ತೊಡಕಿದೆ- ಸಚಿವ ಮಾಧುಸ್ವಾಮಿ

ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಅನ್ನೋ‌ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ
Updated on

ಹೊಸಪೇಟೆ: ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಅನ್ನೋ‌ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು,ಕೋರ್ಟ್ ಆದೇಶದಲ್ಲಿ ಸೋತವರಿಗೆ ಮಂತ್ರಿ ಸ್ಥಾನ ನೀಡೋ ಬಗ್ಗೆ ಉಲ್ಲೇಖವಿಲ್ಲ
ಯಾರನ್ನು ‌ಕೈಬಿಡೋ ಪ್ರಶ್ನೆ ಇಲ್ಲ. ಆರ್. ಶಂಕರ್ ಅವರಿಗೆ ಅನ್ಯಾಯವಾಗಲ್ಲ ವಿಶ್ವನಾಥ ಹಿರಿಯರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಸವದಿ ಕೂಡ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ.ಉಪ ಚುನಾವಣೆಯಿಂದ ಹಿಂದೆ ಸರಿದ್ರು ಬೆಳಗಾವಿ ಜಿಲ್ಲೆಯಲ್ಲಿ‌
ಎರಡು ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು

ಇರೋದೊಂದೆ ಸ್ಥಾನ ಯಾರಿಗೆ ಕೊಡಬೇಕು.. ಅನಿವಾರ್ಯವಾಗಿ ಸವದಿಗೆ ನೀಡಲಾಗಿದೆ.ಮುಂದೆಯೂ  ಶಂಕರ್ ಅವರಿಗೂ ಒಳ್ಳೆಯದಾಗಲಿದೆ ಎಂದು ಭರವಸೆ ನೀಡಿದರು.

ಬಿಜೆಪಿ ಸರ್ಕಾರ ಸ್ಥಿರವಾಗಿರಲಿ ಎಂದಿದ್ದ ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಿದ್ದರು. ಸರ್ಕಾರ ದೃಢವಾಗಿರಲಿ ಎನ್ನುತ್ತಾರೆ ಮತ್ತೊಂದೆಡೆ  ಯಡಿಯೂರಪ್ಪಗೆ  ನನ್ನ ಬೆಂಬಲವಿಲ್ಲ ಎನ್ನುತ್ತಾರೆ. ಅವರ ಮಾತನ್ನು ನಂಬೋದ ಕಷ್ಟ ಎಂದು ಮಾಧುಸ್ವಾಮಿ ಹೇಳಿದರು.

ವರದಿ: ಸುಬಾನಿ ಪಿಂಜರ್ 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com