ಕಚೇರಿಗೆ ಬಾರದ ನೂತನ ಸಚಿವರು: ಹಿರಿಯ ಬಿಜೆಪಿ ನಾಯಕರು ಕೆಂಡಾಮಂಡಲ

10 ಮಂದಿ ಬಂಡಾಯ ಶಾಸಕರು ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಸುಮಾರು ಮೂರು ವಾರಗಳು ಕಳೆಯುತ್ತಿವೆ. ಹೀಗಿದ್ದರೂ ಇದುವರೆಗೂ ಒಮ್ಮೆಯೂ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೋಳ್ಳದಿರುವುದು ಕಮಲ ನಾಯಕರ ಕಣ್ಣು ಕೆಂಪಾಗಿಸಿದೆ.
ಬಿಜೆಪಿ ನೂತನ ಸಚಿವರು
ಬಿಜೆಪಿ ನೂತನ ಸಚಿವರು
Updated on

ಬೆಂಗಳೂರು: 10 ಮಂದಿ ಬಂಡಾಯ ಶಾಸಕರು ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಸುಮಾರು ಮೂರು ವಾರಗಳು ಕಳೆಯುತ್ತಿವೆ. ಹೀಗಿದ್ದರೂ ಇದುವರೆಗೂ ಒಮ್ಮೆಯೂ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೋಳ್ಳದಿರುವುದು ಕಮಲ ನಾಯಕರ ಕಣ್ಣು ಕೆಂಪಾಗಿಸಿದೆ.

2019ರ ನವೆಂಬರ್ ನಲ್ಲಿ  ಬಿಜೆಪಿ ರಾಜ್ಯಾಧ್ಯಶ್ರ ನಳಿನ್ ಕುಮಾರ್ ಕಟೀಲ್, ಎಲ್ಲಾ ಸಚಿವರುಗಳು ತಪ್ಪದೇ ಪಕ್ಷದ ಕಚೇರಿಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನಕ್ಕೆ ಬಂದು ಅಲ್ಲಿ ಕಾರ್ಯಕರ್ತರ ತಿಂಗಳಲ್ಲಿ 2 ಸಲ ಸಂಜೆ 3 ರಿಂದ 5ಗಂಟೆಯವರೆಗೂ ಅಹವಾಲು ಸ್ವೀಕರಿಸಬೇಕೆಂದು ಸುತ್ತೊಲೆ ಹೊರಡಿಸಿದ್ದರು.

ಆಗಸ್ಟ್ 2019 ರಲ್ಲಿ ಮೊದಲ ಸುತ್ತಿನ ಪ್ರವೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ 17 ಮಂತ್ರಿಗಳು ನಿಯಮಿತವಾಗಿ ಪಕ್ಷದ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಎರಡನೇ ಬಾರಿಗೆ ಪ್ರಮಾಣ ಸ್ವೀಕರಿಸಿದ ಸಚ್ವರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. 

ಅವರಿಗೆ ತಮ್ಮನ್ನು ಬಿಜೆಪಿ ನಾಯಕರೆಂದು ಗುರುತಿಸಿಕೊಳ್ಳಲು ಮುಜುಗರವಾಗುತ್ತಿರಬಹುದು ಎಂದು ಹೇಳಲಾಗುತ್ತಿದೆ. ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದವರಾಗಿದ್ದಾರೆ,  ಆದರೆ ಇವರು ನಿರಂತರವಾಗಿ ಕಚೇರಿಗೆ ಬರುತ್ತಿಲ್ಲ,  ಕೇವಲ ಒಂದೆರಡು ಬಾರಿ ಮಾತ್ರ ಹಾಜರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಹೊಸ ಮಂತ್ರಿಗಳಲ್ಲಿ ಒಂಬತ್ತು ಮಂದಿ ಅಧಿಕಾರ ವಹಿಸಿಕೊಂಡ ನಂತರ ಒಮ್ಮೆ ಮಾತ್ರ ಭವನಕ್ಕೆ ಭೇಟಿ ನೀಡಿದ್ದಾರೆ. ಆದರೆ ಅದು ಕೂಡ ಹಾರುವ ಭೇಟಿಗಳು. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಇನ್ನೂ ಕಾಣಿಸಿಕೊಂಡಿಲ್ಲ.

ಈ ನಾಯಕರುಗಳು ಪಕ್ಷಕ್ಕೆ ಸೇರಿದಾಗ, ಅವರ ಹೆಚ್ಚಿನ ಸಂಖ್ಯೆಯ ಅನುಯಾಯಿಗಳು ಕೂಡ ಬಿಜೆಪಿಗೆ ಸೇರಿದರು. ಆದರೆ ನಮ್ಮ ತಳಮಟ್ಟದ ಕಾರ್ಯಕರ್ತರಂತೆ, ಅವರು ಪಕ್ಷದ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಕೆಲವು ಹಿರಿಯ ಬಿಜೆಪಿ ನಾಯಕರು ಮತ್ತು ಸಚಿವರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com