ಸಿದ್ದರಾಮಯ್ಯ ಅವರೇನು ಕೇಂದ್ರದ ಆರ್ಥಿಕ ಇಲಾಖೆಯ ಖಜಾಂಚಿಯಾ?: ಗೋವಿಂದ ಕಾರಜೋಳ

ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನಲು ಸಿದ್ಧರಾಮಯ್ಯನವರೇನು ಕೇಂದ್ರದ ಖಜಾಂಚಿಯಾಗಿದ್ದಾರೆಯೇ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ. 
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಕಲಬುರಗಿ: ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನಲು ಸಿದ್ಧರಾಮಯ್ಯನವರೇನು ಕೇಂದ್ರದ ಖಜಾಂಚಿಯಾಗಿದ್ದಾರೆಯೇ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ. 

ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಮಾಜಿ ಸಿದ್ದರಾಮಯ್ಯನವರ ಹೇಳಿಕೆಗೆ ಡಿಸಿಎಂ ಗೋವಿಂದ ಕಾರಜೋಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯನವರೇನು ಕೇಂದ್ರ ಸರ್ಕಾರದ ಖಜಾಂಚಿಯಾಗಿದ್ದಾರೆಯೇ? ಅಥವಾ ಕೇಂದ್ರ ಸರ್ಕಾರದ ಪೆಟ್ಟಿಗೆ ಇವರ ಬಳಿ ಇದೆಯೇ," ಎಂದು ಪ್ರಶ್ನಿಸಿದ್ದಾರೆ.

ಬೊಕ್ಕಸ ದಿವಾಳಿಯಾಗಿದೆ  ಎಂದು  ಸಿದ್ಧರಾಮಯ್ಯ  ಯಾವ ಆಧಾರದ ಮೇಲೆ ಹೇಳುತ್ತಾರೆ ಎಂದು ಪ್ರಶ್ನಿಸಿದರು. 14 ಬಾರಿ ಬಜೆಟ್ ಮಂಡಿಸಿದ್ದಾರೆ. ಐದು ವರ್ಷಗಳ ಕಾಲ ಸಿಎಂ ಸಹ ಆಗಿದ್ದವರು. ಅಂಥವರು ಈ ರೀತಿ ಮಾತನಾಡೋದು ಸರಿಯಲ್ಲ. ಹಣಕಾಸಿನ ತೌಲನಿಕ ನೋಟ ಬೇಕಿದ್ದರೆ ಕೊಡಲಿ. ಅದನ್ನು ಬಿಟ್ಟು ಹೀಗೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡೋದು ಸರಿಯಲ್ಲ ಎಂದು ಕಿಡಿಕಾರಿದರು.

ನೆರೆ ಪರಿಹಾರಕ್ಕಾಗಿ ಕೇಂದ್ರ ಬಿಡುಗಡೆ ಮಾಡಿರೋದು ಸಣ್ಣ ಮೊತ್ತವಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಷ್ಟು ಪ್ರಮಾಣದಲ್ಲಿ ಯಾವ ಸರ್ಕಾರವೂ ನೆರೆ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ್ದಿಲ್ಲ. ಹೀಗಿರಬೇಕಾದರೆ ರಾಜೀಕಯಕ್ಕಾಗಿ ಮಾತಡೋದು ಸರಿಯಲ್ಲ ಎಂದು ಸಿದ್ಧರಾಯಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com