ಒಂದೆಡೆ ಸಚಿವ ಸ್ಥಾನಕ್ಕೆ, ಮತ್ತೊಂದೆಡೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಗೆ ಲಾಬಿ
ಬೆಂಗಳೂರು: ಉಪ ಚುನಾವಣೆಯಲ್ಲಿ ಆಯ್ಕೆಯಾದ 11 ಶಾಸಕರು ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಲಾಬಿ ನಡೆಸುತ್ತಿದ್ದರೇ ಮತ್ತೊಂದೆಡೆ ಪರಿಷತ್ ಚುನಾವಣೆಗಾಗಿ ಟಿಕೆಟ್ ಪಡೆಯಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
ವಿಧಾನ ಪರಿಷತ್ ನ 13 ಸ್ಥಾನಗಳು ಜೂನ್ ನಲ್ಲಿ ತೆರವಾಗಲಿವೆ, ಹೀಗಾಗಿ ವಿವಿಧ ಕೆಟಗರಿಗಳಡಿ ಆಯ್ಕೆ ನಡೆಯುತ್ತದೆ. ಎಚ್.ಎಂ ರೇವಣ್ಣ, ಬೋಸರಾಜು ಮತ್ತು ಜಯಮ್ಮ, ಮೂವರು ಕಾಂಗ್ರೆಸ್ ನವರಾಗಿದ್ದಾರೆ. ಟಿ.ಎ ಶರವಣ,(ಜೆಡಿಎಸ್) ಯು.ಡಿ ಮಲ್ಲಿಕಾರ್ಜುನ (ಪಕ್ಷೇತರ) ಇವರೆಲ್ಲರೂ ಆರು ವರ್ಷ ಅವಧಿ ಸಂಪೂರ್ಣಗೊಳಿಸಿದ್ದಾರೆ.
ಚೌಡರೆಡ್ಡಿ, ಪುಟ್ಟಣ್ಣ, ಎಸ್ ವಿ ಸಂಕನೂರ್, ಶರಣಪ್ಪ ಮತ್ತೂರ್ ಕೂಡ ಆರು ವರ್ಷ ಪೂರ್ಣಗೊಳಿಸಿದ್ದಾರೆ. ಕೆ.ಅಬ್ದುಲ್ , ಜಯಮಾಲಾ ರಾಮಚಂದ್ರ, ಐವಾನ್ ಡಿಸೋಜಾ ಮತ್ತು ಅಹ್ಮದ್ ಸರದಗಿ ಜೂನ್ 23 ಕ್ಕೆ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ, ಚುನಾವಣೆಯಲ್ಲಿ ಸೋತಿರುವ ಎಚ್ ವಿಶ್ವನಾಥ್, ಮತ್ತುಎಂಟಿ ಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರನ್ನು ಮೇಲ್ಮನೆಗೆ ನಾಮ ನಿರ್ದೇಶನಗೊಳಿಸುವ ಸಾಧ್ಯತೆಯಿದೆ.
ಮುಂದಿನ ಸಂಪುಟ ವಿಸ್ತರಣೆಯ ವೇಳೆಗೆ ಸೋತ ಶಾಸಖರನ್ನು ಪರಿಷತ್ ಗೆ ನಾಮ ನಿರ್ದೇಶನಗೊಳಿಸಿ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ