'ರಾಜಾಹುಲಿ' ಬಿಎಸ್ ವೈ ಹೈಕಮಾಂಡ್ ಬೋನಿನಲ್ಲಿ ಒದ್ದಾಡುತ್ತಿದ್ದಾರೆ: ಎಸ್ ಆರ್ ಪಾಟೀಲ್ ವ್ಯಂಗ್ಯ

ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡಗುತ್ತೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಈಗ ಅವರ ಸ್ಥಿತಿ ಏನಾಗಿದೆ ನೋಡಿ ಎಂದಿರುವ ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅವರು, ಬಿಎಸ್ ವೈ ಹೈಕಮಾಂಡ್ ಬೋನ್‌ನಲ್ಲಿ ಒದ್ದಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಎಸ್ ಆರ್ ಪಾಟೀಲ್
ಎಸ್ ಆರ್ ಪಾಟೀಲ್

ಬಾಗಲಕೋಟೆ: ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡಗುತ್ತೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಈಗ ಅವರ ಸ್ಥಿತಿ ಏನಾಗಿದೆ ನೋಡಿ ಎಂದಿರುವ ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅವರು, ಬಿಎಸ್ ವೈ ಹೈಕಮಾಂಡ್ ಬೋನ್‌ನಲ್ಲಿ ಒದ್ದಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡದ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಎಸ್‌ವೈ ಸದ್ಯ ಸಂಪುಟ ವಿಸ್ತರಣೆ ಸೇರಿದಂತೆ ಪ್ರತಿ ವಿಷಯಕ್ಕೂ ಹೈಕಮಾಂಡ್ ಮರ್ಜಿಗಾಗಿ ಕಾಯುವಂತಾಗಿದೆ. ಅವರು ಬಿಜೆಪಿ ಹೈ ಕಮಾಂಡ್ ರಾಜಾ ಹುಲಿಯನ್ನು ಬೋನಿನಿಂದ ಹೊರ ಬಿಡುತ್ತಿಲ್ಲ. ಸಂಪುಟ ರಚನೆಗಾಗಿ ಪರದಾಡುವ ಸ್ಥಿತಿಯಲ್ಲಿದ್ದಾರೆ ಎಂದು ಮರುಕ ವ್ಯಕ್ತ ಪಡಿಸಿದರು.

ಬಿಎಸ್‌ವೈ ಹಿರಿಯರು ಅವರ ಬಗ್ಗೆ ಅಪಾರ ಗೌರವವಿದೆ. ನಿಜಲಿಂಗಪ್ಪನವರ ಹಾಗೆ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಬಿಎಸ್ವೈ ಕೆಲಸ ಮಾಡೋದಕ್ಕೆ ಹೈಕಮಾಂಡ್ ಅವಕಾಶ ಕಲ್ಪಿಸುತ್ತಿಲ್ಲ ಎಂದು ಹೇಳಿದರು.

ಬಿಎಸ್ವೈ ಸಲುವಾಗಿ ಮರುಕ ಪಡುವುದಿಲ್ಲ ಎಂದ ಎಸ್ ಆರ್ ಪಾಟೀಲ್, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯವರು ಬೇಗನೇ ಮಂತ್ರಿಮಂಡಲ ರಚನೆ ಮಾಡಬೇಕು ಒತ್ತಾಯಿಸಿದರು.

ರಾಜ್ಯದ ಖಜಾನೆ ಖಾಲಿಯಾಗಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಬೆಂಬಲಿಸಿದ ಎಸ್ಸಾರ್ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿಲ್ಲ ಎಂದರು.

ಕೆಳಮನೆ, ಮೇಲ್ಮನೆ ಶಾಸಕರು ೩೦೦ ಜನರಿದ್ದೇವೆ. ವರ್ಷಕ್ಕೆ ೨ಕೋಟಿ ಪ್ರದೇಶಾಭಿವೃದ್ಧಿ ನಿಧಿ ಕೊಡಬೇಕು. ೨೦೧೯-೨೦ನೇ ಸಾಲಿನ ಹಣಕಾಸು ವರ್ಷದ ೧೦ ತಿಂಗಳು ಗತಿಸಿ ಹೋಗಿದೆ. ಹಣಕಾಸು ವರ್ಷ ಮುಗಿಯೋದಕ್ಕೆ ಎರಡು ತಿಂಗಳು ಉಳಿದಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ ೨ ಕೋಟಿಯಲ್ಲಿ ೫೦ಲಕ್ಷ ರೂ. ಕೊಟ್ಟಿದ್ದಾರೆ. ೧ ಕೋಟಿ ೫೦ಲಕ್ಷ ಹಣ ೩೦೦ ಶಾಸಕರಿಗೂ ಕೊಟ್ಟಿಲ್ಲ.  ೨೦೧೮-೧೯ನೇ ಸಾಲಿನ ೩೯ ಲಕ್ಷ ಹಣ ಇನ್ನು ಬಂದಿಲ್ಲ.  ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಇದೊಂದೇ ಸಾಕಲ್ಲವೇ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com