ತಾನು ಕಳ್ಳ ಪರರ ನಂಬ, ಕಾಂಗ್ರೆಸ್ ಗೆ ತಿರುಗೇಟು ಕೊಟ್ಟ ಸಚಿವ ಸಿಟಿ ರವಿ

ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡ ಕಾಂಗ್ರೆಸ್ ನಾಯಕರು ಸತ್ಯಕ್ಕೆದೂರವಾದ ಹಸಿ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಸಿ.ಟಿ.ರವಿ
ಸಿ.ಟಿ.ರವಿ
Updated on: 

ಬೆಂಗಳೂರು: ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡ ಕಾಂಗ್ರೆಸ್ ನಾಯಕರು ಸತ್ಯಕ್ಕೆದೂರವಾದ ಹಸಿ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ವಿಧಾನಸೌಧದ ಸುದ್ದಿಗಾರರ ಜೊತೆ ಜೊತೆ ಮಾತನಾಡಿದ ಅವರು, ಕರೋನ ಉಪಕರಣ ಖರೀದಿಯಲ್ಲಿ ಸರ್ಕಾರ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಚಿವರು ಈ ರೀತಿ ತಿರುಗೇಟು ನೀಡಿದ್ದಾರೆ.

ಅವರ ಸರ್ಕಾರ ಇದ್ದಾಗ ಹಾಸಿಗೆ ದಿಂಬು ಹಗರಣದಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ. ಅವರು ನಮಗೆ ಹೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ದೂರಿದರು.ಕೊರೋನಾ ಬಂದ ಹೊಸದರಲ್ಲಿ ಸರ್ಜಿಕಲ್ ಮಾಸ್ಕ್ ಗಳು ಮಾತ್ರಾ ಇದ್ದಿದ್ದು.ಅಂತಹಾ ಸಂಧರ್ಭದಲ್ಲಿ ಬೇರೆ ಕಡೆಯಿಂದ ಮಾಸ್ಕ್ ಮತ್ತು ಪಿಪಿಇ ಕಿಟ್ ಖರೀದಿ ಮಾಡು ಅನಿವಾರ್ಯವಾಗಿತ್ತು.ಆದರೆ ಇದರಲ್ಲಿ ಹುಳುಕು ಹುಡುಕೋದು ಸರಿಯಲ್ಲ. ಎಂದು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com