ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ: ಸಿಎಂ ಪುತ್ರ ಬಿವೈ ವಿಜಯೇಂದ್ರಗೆ ಉಪಾಧ್ಯಕ್ಷ ಸ್ಥಾನ

ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ವಿಜಯೇಂದ್ರ
ವಿಜಯೇಂದ್ರ
Updated on

ಬೆಂಗಳೂರು: ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪಟ್ಟಿ ಅಂತಿಮಗೊಳಿಸುವ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಪದಾಧಿಕಾರಿಗಳ ಪಟ್ಟಿ ತಯಾರಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಕಟೀಲ್ ಪದಾಧಿಕಾರಿಗಳ ನೇಮಕ ಸಂಬಂಧ ಮಾತುಕತೆ ನಡೆಸಿದ್ದರು.

ಇದೀಗ ಪಟ್ಟಿ ಹೊರಬಿದ್ದಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಅರವಿಂದ ಲಿಂಬಾವಳಿ, ಸಂಸದೆ ಶೋಭಾ ಕರಂದ್ಲಾಜೆ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಸಿಎಂ ಆಪ್ತರ ಜೊತೆಗೆ ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರಿಗೆ ಮೋರ್ಚಾಗಳ ಜವಾಬ್ದಾರಿ ನೀಡಲಾಗಿದೆ.

ರಾಜ್ಯ ಉಪಾಧ್ಯಕ್ಷರು: ಅರವಿಂದ ಲಿಂಬಾವಳಿ, ನಿರ್ಮಲ್ ಕುಮಾರ್ ಸುರಾನ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್, ತೇಜಶ್ವಿನಿ ಅನಂತ್ ಕುಮಾರ್, ಪ್ರತಾಪ್ ಸಿಂಹ, ಎಂ.ಬಿ.ನಂದೀಶ್, ಬಿ.ವೈ.ವಿಜಯೇಂದ್ರ, ಎಂ.ಶಂಕರಪ್ಪ, ಎಂ.ರಾಜೇಂದ್ರ,

ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಎನ್.ರವಿಕುಮಾರ್, ಸಿದ್ದರಾಜು, ಅಶ್ವಥ್ ನಾರಾಯಣ, ಮಹೇಶ್ ಟೆಂಗಿನಕಾಯಿ

ರಾಜ್ಯ ಕಾರ್ಯದರ್ಶಿಗಳು: ಸತೀಶ್ ರೆಡ್ಡಿ, ತುಳಸಿ ಮುನಿರಾಜುಗೌಡ, ಕೇಶವ್ ಪ್ರಸಾದ್, ಜಗದೀಶ್ ಹಿರೇಮನಿ, ಸುಧಾ ಜಯರುದ್ರೇಶ್, ಭಾರತಿ ಮುಗ್ದಂ, ಹೇಮಲತಾ ನಾಯಕ್, ಉಜ್ವಲಾ ಬಡವಣ್ಣಾಜೆ, ಕೆ.ಎಸ್.ನವೀನ್, ವಿನಯ್ ಬಿದರೆ, 

ರಾಜ್ಯ ಖಾಜಾಂಚಿ: ಸುಬ್ಬ ನರಸಿಂಹ ಹಾಗೂ ಲೆಹರ್ ಸಿಂಗ್ ಸಿರೋಯ

ರಾಜ್ಯ ವಕ್ತಾರರಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೇಮಕಗೊಳಿಸಲಾಗಿದೆ.
ವಿವಿಧ ಪ್ರಕೋಷ್ಠಗಳಿಗೆ ನೇಮಕ :
ಭಾನುಪ್ರಕಾಶ್ ಮತ್ತು ಡಾ.ಎ.ಎಚ್.ಶಿವಯೋಗಿಸ್ವಾಮಿ

ಯುವ ಮೋರ್ಚಾ ಅಧ್ಯಕ್ಷರಾಗಿ ಡಾ.ಸಂದೀಪ್ ಆಯ್ಕೆ
ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗೀತಾ ವಿವೇಕಾನಂದ ನೇಮಕ

ರೈತ ಮೋರ್ಚಾಗೆ ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾಗೆ ಅಶೋಕ್ ಗಸ್ತಿ ನೇಮಕ

ಎಸ್.ಸಿ.ಮೋರ್ಚಾ ಅಧ್ಯಕ್ಷರಾಗಿ ಚಲವಾದಿ ನಾರಾಯಣಸ್ವಾಮಿ
ಎಸ್.ಟಿ.ಮೋರ್ಚಾಗೆ ಅಧ್ಯಕ್ಷರಾಗಿ ತಪ್ಪರಾಜು ಹವಲ್ದಾರ್ ನೇಮಕ
ಅಲ್ಪಸಂಖ್ಯಾತ ಮೋರ್ಚಾಗೆ ಮುಜ್ಹಾಮಿಲ್ ಬಾಬು ನೇಮಕಗೊಳಿಸಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಆದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com