ಮರುಕಳಿಸಿದ 1994ರ ಇತಿಹಾಸ: ಚುನಾವಣೆಗೆ ಪರಸ್ಪರ ಆಸರೆಯಾದ ರಾಜಕೀಯ ಪಕ್ಷಗಳು!

ಈ ಬಾರಿಯ ರಾಜ್ಯಸಭೆ ಚುನಾವಣೆ ಸಂದರ್ಭ 1994ರಲ್ಲಿನ ರಾಜ್ಯ ರಾಜಕೀಯ ಪರಿಸ್ಥಿತಿಗೆ ಸಾಕಷ್ಟು ಹೋಲಿಕೆಯಾಗುತ್ತಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.
ಎಚ್ ಡಿ  ದೇವೇಗೌಡ
ಎಚ್ ಡಿ ದೇವೇಗೌಡ
Updated on

ಬೆಂಗಳೂರು: ಈ ಬಾರಿಯ ರಾಜ್ಯಸಭೆ ಚುನಾವಣೆ ಸಂದರ್ಭ 1994ರಲ್ಲಿನ ರಾಜ್ಯ ರಾಜಕೀಯ ಪರಿಸ್ಥಿತಿಗೆ ಸಾಕಷ್ಟು ಹೋಲಿಕೆಯಾಗುತ್ತಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

ರಾಜ್ಯಸಭೆ ಚುನಾವಣೆಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರ ರಾಜಕೀಯ ಜೀವನದ ಪಯಣದಲ್ಲಿ ಎರಡನೇ ಬಾರಿ ಅವರು ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ. 1996ರಲ್ಲಿ ಅವರು ಪ್ರಧಾನಿಯಾಗಿದ್ದ ಸಂದರ್ಭವನ್ನು ರಾಜಕೀಯ ತಜ್ಞರು ಮೆಲುಕು ಹಾಕುತ್ತಿದ್ದಾರೆ.

1994 ರಲ್ಲಿ ದೇವೇಗೌಡರು 115 ಶಾಸಕ ರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಕಾಂಗ್ರೆಸ್ ಗೆ ಕೇವಲ 34 ಶಾಸಕರ ಬೆಂಬಲವಿತ್ತು, ಈಗ ಜೆಡಿಎಸ್ ಇರುವ ಸ್ಥಿತಿಯಲ್ಲಿ ಕಾಂಗ್ರೆಸ್ ಇತ್ತು.

ಇದೇ ವೇಳೆ ಕಾಕತಾಳೀಯ ಎಂಬಂತೆ ದೇವೇಗೌಡರ ಜೊತೆ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡುತ್ತಿದ್ದಾರೆ. ಆಗ ಖರ್ಗೆ ವಿಧಾನಸಭೆ ನಾಯಕರಾಗಿದ್ದರು. ಉಪ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಮದ್ದೂರಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅದಾದ ನಂತರ ಗೌಡರ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಅದಾದ ನಂತರ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿ ನಂತರ ವಿದೇಶಾಂಗ ಸಚಿವರೂ ಆದರು.

ಈಗ ಇದು ಜೆಡಿಎಸ್ ಗೆ ಸರದಿ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್ ಬೆಂಬಲ ಪಡೆಯುವ ಸನ್ನಿವೇಶ.  ಆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾತನೂರಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

ಮತ್ತೊಂದು ಟ್ವಿಸ್ಟ್ ಎಂದರೇ ಆಗ ಪ್ರಭಾಕರ್ ಕೋರೆ ಕಾಂಗ್ರೆಸ್ ನಲ್ಲಿದ್ದರು. ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಕೋರೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ಇಚ್ಚಿಸಿದ್ದರು, ಆದರೆ ಅಂತಿಮವಾಗಿ ಟಿಕೆಟ್ ಎಸ್ ಎಂ ಕೃಷ್ಣ ಪಾಲಾಯಿತು. ಆದರೆ ಈ ಬಾರಿ ಕೋರೆ ಬಿಜೆಪಿಯಲ್ಲಿದ್ದಾರೆ, ಪಕ್ಷ ಹೊಸ ಮುಖಗಳಿಗೆ ಅವಕಾಶ ನೀಡಿದೆ, ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಬಂದ ಉತ್ತರ 'ಏನು ಮಾಡುವುದು?' ಎಂಬುದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com