ಬಿಜೆಪಿಯಿಂದ ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕರ ಹೈಜಾಕ್ : ಈಶ್ವರ ಖಂಡ್ರೆ ಟೀಕೆ
ಬೆಂಗಳೂರು: ಒಂದು ಕಡೆ ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ ಎನ್ನುವ ಬಿಜೆಪಿಗರು ಜನರಿಂದ ಆರಿಸಿ ಬಂದವರನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಶಾಸಕಾಂಗ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರದ ಈ ನೀತಿಯನ್ನು ಜನರು ಗಮನಿಸುತ್ತಿದ್ದಾರೆ. ಜನರಿಂದ ಆರಿಸಿ ಬಂದವರನ್ನು ಆಪರೇಷನ್ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ನಮ್ಮ ಸರ್ಕಾರ ಉರುಳಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ.
ಶಾಸಕರನ್ನು ವಾಪಸು ಕರೆತರಲು ನಾವು ಸಾಕಷ್ಟು ಪ್ರಯತ್ನ ಮಾಡ್ತಿದ್ದೇವೆ.ಈ ಬಗ್ಗೆ ಕೆಪಿಸಿಸಿ ವತಿಯಿಂದ ಗಂಭೀರ ವಿಚಾರ ಮಾಡಿದ್ದು ಹೈಕಮಾಂಡ್ ಜೊತೆ ನಿರಂತರ ಸಂಪರ್ಕ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಮಾಹಾಮಾರಿ ಕೊರೋನಾ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂಜಾಗರೂಕತೆ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ಸಲಹೆ ಕೊಡುವ ಬಗ್ಗೆ, ಬಜೆಟ್ ಬಗ್ಗೆ ಯಾರು ಯಾರು ಮಾತನಾಡಬೇಕು, ಯಾವ್ಯಾವ ಕ್ಷೇತ್ರಕ್ಕೆ ಅನುದಾನದ ಕೊರತೆಯಾಗಿದೆ, ಕೇಂದ್ರದಿಂದ ಅನುದಾನದ ಕಡಿತವಾಗಿರುವ ಬಗ್ಗೆ ಚರ್ಚೆ ನಡೆಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ