ಕರೋನಾ ತಡೆಯಲು ಕಟ್ಟೆಚ್ಚರ: ಪರಿಷತ್ ಸದಸ್ಯರ ಆತಂಕಕ್ಕೆ ಶ್ರೀರಾಮುಲು ಉತ್ತರ

ಕೊರೊನಾ ಎದುರಿಸಲು ರಾಜ್ಯ ಸರಕಾರ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ, ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ, ಎಲ್ಲ ಜಿಲ್ಲೆಗಳಲ್ಲಿಇನ್ನೊಂದು ವಾರದಲ್ಲಿ ಪ್ರಯೋಗಾಲಯ ಸಿದ್ಧವಾಗಲಿದೆ, ಯಾರು ಆತಂಕಕ್ಕೆ ಒಳಗಾಗೋದು ಬೇಡ ಎಂದು ಆರೋಗ್ಯ ಸಚಿವ ಶ್ರೀರಾಮುಲು ಜನರಲ್ಲಿ ಮನವಿ ಮಾಡಿದ್ದಾರೆ.
ಶ್ರೀರಾಮುಲು
ಶ್ರೀರಾಮುಲು
Updated on

ಬೆಂಗಳೂರು: ಕೊರೊನಾ ಎದುರಿಸಲು ರಾಜ್ಯ ಸರಕಾರ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ, ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ, ಎಲ್ಲ ಜಿಲ್ಲೆಗಳಲ್ಲಿಇನ್ನೊಂದು ವಾರದಲ್ಲಿ ಪ್ರಯೋಗಾಲಯ ಸಿದ್ಧವಾಗಲಿದೆ, ಯಾರು ಆತಂಕಕ್ಕೆ ಒಳಗಾಗೋದು ಬೇಡ ಎಂದು ಆರೋಗ್ಯ ಸಚಿವ ಶ್ರೀರಾಮುಲು ಜನರಲ್ಲಿ ಮನವಿ ಮಾಡಿದ್ದಾರೆ.

ನಿಯಮ 68 ರ ಅಡಿ ಸಾರ್ವಜನಿಕ ಮಹತ್ವದ ವಿಷಯಗಳ ಚರ್ಚೆಗೆ ವಿಧಾನ ಪರಿಷತ್ ನಲ್ಲಿ ಅವಕಾಶ ಕೊಡಲಾಗಿತ್ತು. ಮೇಲ್ಮನೆಯಲ್ಲಿ ಕೊರೊನಾ ಬಗ್ಗೆ ವಿಪಕ್ಷಗಳು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ವಿಫಲವಾಗಿದೆ. ಮಾಸ್ಕ್ ದರ ದುಪ್ಪಟ್ಟು ಆಗಿವೆ. ರಾಜ್ಯದಲ್ಲಿ ಲ್ಯಾಬ್ ಗಳ ಸಮಸ್ಯೆ ಇದೆ. ಮಾಲ್, ಸಿನಿಮಾ ನಿಲ್ಲಿಸಿದ ಕೂಡಲೇ ಕೊರೊನಾ ಕಡಿಮೆ ಆಗಲ್ಲ. ಅಗತ್ಯ ಮುಂಜಾಗ್ರತಾ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು ಅಂತ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾದಿಯಾಗಿ ವಿಪಕ್ಷ ಸದಸ್ಯರು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

ಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಸರ್ಕಾರ ಕೈಗೊಂಡಿದೆ. ಜನರು ಆತಂಕಕ್ಕೆ ಒಳಗಾಗೋದು ಬೇಡ ಅಂತ ಸಚಿವರು ಅಭಯ ನೀಡಿದ್ರು. ಏರ್ ಪೋರ್ಟ್, ಬಂದರು ಸೇರಿದಂತೆ ಅನೇಕ ಕಡೆ ವಿದೇಶದಿಂದ ಬಂದ 1.85 ಲಕ್ಷ ಜನರನ್ನ ಈಗಾಗಲೇ ತಪಾಸಣೆ ಮಾಡಲಾಗಿದೆ. ಎಲ್ಲರಿಗೂ ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ಮಾಡಲಾಗಿದೆ ಅಂತ ಸಚಿವರು ತಿಳಿಸಿದರು.

ಜನರಲ್ಲಿ ಆತ್ಮಸ್ಥೈರ್ಯ ತುಂಬುವುದು ಮುಖ್ಯ, ಅನಗತ್ಯ ಆತಂಕ ನಿವಾರಿಸಬೇಕು. ವಿಮಾನ ನಿಲ್ದಾಣಗಳಲ್ಲಿಎಲ್ಲಾ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ಈವರೆಗೆ 1,11,085 ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 862 ಜನರ ರಕ್ತದ ಮಾದರಿ ಹಾಗೂ ಕಫ ಪರೀಕ್ಷೆ ನಡೆಸಲಾಗಿದೆ, 609 ಮಂದಿಯ ರಿಪೋರ್ಟ್‌ ನೆಗೆಟಿವ್‌ ಬಂದಿದೆ. 

ಕೊರೊನಾ ಸೊಂಕು ಬಂದಾಕ್ಷಣ ಜನರು ಸಾಯುವುದಿಲ್ಲ, ಆದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬೇಗ ಅದಕ್ಕೆ ತುತ್ತಾಗುತ್ತಾರೆ. ಕಲಬುರಗಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿತು, ಅದು ಸೋಂಕಿಗೆ ಬಲಿದಾದ ದೇಶದ ಮೊದಲ ವ್ಯಕ್ತಿ. ಆ ಸಾವಿನ ನಂತರ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.

ಆ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಅವರ ಕುಟುಂದವರು ಹಾಗೂ 71 ಸಂಬಂಧಿಗಳ ವಿರುದ್ಧ ನಿಗಾ ಇಡಲಾಗಿದೆ. ಕುಟುಂಬದಲ್ಲಿ ಒಬ್ಬರಿಗೆ ಪಾಸಿಟಿವ್‌ ಎಂಬುದು ದೃಢಪಟ್ಟಿದೆ. ಆ ಪಾಸಿಟಿವ್‌ ಪ್ರಕರಣದಲ್ಲಿ ಗುಣಮುಖರಾಗುವ ಸಾಧ್ಯತೆ ಹೆಚ್ಚಿದ್ದು, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com