ಅಸಮಾಧಾನವೇನಿದ್ದರೂ ಅಂತರಂಗದಲ್ಲಿರಲಿ: ಪ್ರತಾಪ್ ಸಿಂಹ- ರಾಮದಾಸ್ ಗೆ ವಿಶ್ವನಾಥ್ ಸಲಹೆ

 ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್​ ಸಿಂಹ ವಾಕ್ಸಮರ  ಬಹಿರಂಗವಾಗಿ ಬೇಡ ಅಂತರಂಗದಲ್ಲಿ ಇರಲಿ. ನಿಮ್ಮ ಅಸಮಾಧಾನ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಇರಲಿ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ.
ಎಚ್. ವಿಶ್ವನಾಥ್
ಎಚ್. ವಿಶ್ವನಾಥ್

ಮೈಸೂರು: ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್​ ಸಿಂಹ ವಾಕ್ಸಮರ  ಬಹಿರಂಗವಾಗಿ ಬೇಡ ಅಂತರಂಗದಲ್ಲಿ ಇರಲಿ. ನಿಮ್ಮ ಅಸಮಾಧಾನ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಇರಲಿ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು , ಪಕ್ಷದಲ್ಲಿ ರಾಮದಾಸ್ ಹಿರಿಯರಿದ್ದಾರೆ. ಜಿಲ್ಲಾ ಮಂತ್ರಿಗಳು ಇದ್ದಾರೆ. ಎಲ್ಲರ ಬಳಿ ಚರ್ಚಿಸಿ ನಿಮ್ಮ ಸಮಸ್ಯೆ ಬಗಹರಿಸಿಕೊಳ್ಳಿ. ಸುಮ್ಮನೆ ಬಹಿರಂಗವಾಗಿ ವಾಕ್ಸಮರ ಬೇಡ ಎಂದು  ಹೆಚ್​.ವಿಶ್ವನಾಥ್ ಅವರು ಇಬ್ಬರಿಗೂ ಸಲಹೆ ನೀಡಿದ್ದಾರೆ.

ಇಡೀ ಭಾರತ ಮೋದಿ ಘೋಷಣೆಯನ್ನು ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಜನರ ಮೇಲೆ ಮೋದಿ ಒಲವು ಇದೆ. ಈ ಒಲವು ನೋಡಿದ್ರೆ ಈ ಪ್ಯಾಕೇಜ್ ಅನುಷ್ಠಾನ ಆಗುತ್ತೆ ಅನ್ನೋದೆ ನಂಬಿಕೆ ಇದೆ.  ಥಿಂಕ್ ಗ್ಲೋಬಲಿ ಅನ್ನೋ ಆಶಯಕ್ಕೂ ಮೋದಿ ನಿರೇರೆದಿದ್ದಾರೆ. ಸ್ಥಳಿಯ ವಾಣಿಜ್ಯ ಚಟುವಟಿಕೆಗೆ ಗ್ಲೋಬಲ್ ಮಾರ್ಕೆಟ್ ಆರಂಭವಾಗಬೇಕಿದೆ. ಈ ವಿಶೇಷ
ಪ್ಯಾಕೇಜ್​ಅನ್ನು  ಎಲ್ಲರಿಗೂ ಅನುಕೂಲ ಆಗುವ ನಿರೀಕ್ಷೆ ಇದೆ ಎಂದು ಅವರು ಮೋದಿ ವಿಶೇಷ ಪ್ಯಾಕೇಜ್​ ಬಗ್ಗೆ ಮಾತನಾಡಿದರು.

ಸದ್ಯ ರಾಜ್ಯದಲ್ಲಿ ಆರ್ಥಿಕ ಶಿಸ್ತು ರೂಪಿಸಬೇಕಿದೆ. ಈ ಹಿನ್ನಲೆಯಲ್ಲಿ ಅಗತ್ಯವಿರುವುದಕ್ಕೆ ಮಾತ್ರ ಖರ್ಚು ಮಾಡಿ. ನಮ್ಮ ಬಜೆಟ್ ಹಣದಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಬಳಕ್ಕೆ ಶೇ. 21ರಷ್ಟು ಹೋಗುತ್ತಿದೆ. ರಾಜ್ಯದ ಪಿಂಚಣಿದಾರರಿಗೆ ಶೇ. 9ರಷ್ಟು ಹಣ ಹೋಗುತ್ತದೆ. ಇದನ್ನೆಲ್ಲ ನಿಯಂತ್ರಣ ಮಾಡಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com