ಸೋನಿಯಾ ವಿರುದ್ಧದ ಎಫ್ ಐಆರ್ ರದ್ದುಗೊಳಿಸಲು ಸಿಎಂ ಸಹಮತ: ಬಿಎಸ್ ವೈ ವಿರುದ್ಧ ಬಿಜೆಪಿ ಕೊತಕೊತ!

ಕೊರೋನಾ ವಿರುದ್ಧ ಹೋರಾಟ ನಡೆಸಲು ಮುಖ್ಯಮಂತ್ರಿ ಸರ್ವ ಪಕ್ಷ ಕರೆದು ಸಮಾಲೋಚಿಸಿದರು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧದ ಎಫ್ ಐ ಆರ್ ಕೈ ಬಿಡುವುದಾಗಿ ನೀಡಿದ ಹೇಳಿಕೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿತ್ತು, ಆದರೆ ಸಿಎಂ ನಡೆಗೆ ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ.
ಯಡಿಯೂರಪ್ಪ
ಯಡಿಯೂರಪ್ಪ
Updated on

ಬೆಂಗಳೂರು: ಕೊರೋನಾ ವಿರುದ್ಧ ಹೋರಾಟ ನಡೆಸಲು ಮುಖ್ಯಮಂತ್ರಿ ಸರ್ವ ಪಕ್ಷ ಕರೆದು ಸಮಾಲೋಚಿಸಿದರು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧದ ಎಫ್ ಐ ಆರ್ ಕೈ ಬಿಡುವುದಾಗಿ ನೀಡಿದ ಹೇಳಿಕೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿತ್ತು, ಆದರೆ ಸಿಎಂ ನಡೆಗೆ ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ   ನೇತೃತ್ವದ ನಿಯೋಗ  ಸೋನಿಯಾ ವಿರುದ್ಧ ಎಫ್ ಐ ಆರ್ ಕೈ ಬಿಡುವಂತೆ ಮನವಿ ಸಲ್ಲಿಸಿತ್ತು, ಸಿಎಂ ಕೂಡ ಕೈಬಿಡುವ ಭರವಸೆ ನೀಡಿದ್ದರು, ಆದರೆ ಯಾವುದೇ ಕಾರಣಕ್ಕೂ ಎಫ್ ಐ ಆರ್ ವಾಪಸ್ ಪಡೆಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ತಬ್ಲಿಘಿಗಳ ವಿರುದ್ಧ ಬಿಜೆಪಿ ನಾಯಕರು ಆರೋಪಗಳ ಸುರಿಮಳೆ ಮಾಡುತ್ತಿದ್ದಾಗ ಕೊರೋನಾವನ್ನು ಕೋಮುವಾದೀಕರಣ ಗೊಳಿಸುತ್ತಿರುವವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದರು.  ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.ಇದರ ಜೊತೆಗೆ ಸೋನಿಯಾ ವಿರುದ್ಧದ ಎಫ್ ಐ ಆರ್ ಕೈ ಬಿಡುವ ಹೇಳಿಕೆ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ಅವರ ಆಪ್ತ ಕಾರ್ಯಕರ್ತರು ಮತ್ತು ಬೆಂಬಲಿಗರು ಕೂಡ ವಿರೋಧ ಪಕ್ಷಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಜೆಪಿ ಸರ್ಕಾರಕ್ಕೆ ತಿಂಗಳುಗಳು ಕಳೆದರೂ, ಪಕ್ಷದ ಕಾರ್ಯಕರ್ತರು ಬಿಜೆಪಿ ಅಧಿಕಾರದಲ್ಲಿದೆ ಎಂಬ ಭಾವನೆ ಬಂದಿಲ್ಲ. ಸಿಎಂ ಅವರ ನಿಕಟ ವಲಯದಲ್ಲಿರುವ ಯಾರೂ ಪಕ್ಷದಿಂದ ಅಥವಾ  ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ ಒಬ್ಬ ವ್ಯಕ್ತಿಯೂ ಮುಖ್ಯಮಂತ್ರಿಯ ಸಾಮಾಜಿಕ ಮಾಧ್ಯಮ ತಂಡದ ಉಸ್ತುವಾರಿ ವಹಿಸಿಲ್ಲ, 

ವಾಸ್ತವವಾಗಿ, ಕರ್ನಾಟಕದ ಸಿಎಂ ಮತ್ತು ಬಿಎಸ್ ಯಡಿಯೂರಪ್ಪ ಅವರ ಖಾಸಗಿ ನಡೆಯನ್ನು  ಗಮನಿಸಲು ಖಾಸಗಿ ಏಜೆನ್ಸಿಗಾಗಿ ಲಕ್ಷಗಳಲ್ಲಿ ಪಾವತಿಸಲಾಗುತ್ತಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕಸ ಎಂಬುದಕ್ಕಿಂತ ಡಿಕೆ ಶಿವಕುಮಾರ್ ಯಡಿಯೂರಪ್ಪ ಅವರಿಗೆ ಹೆಚ್ಚಿನ ಆಪ್ತರಾಗಿದ್ದಾರೆ.  ಕೊರೋನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಹಾಗೂ ಕಾಯಿದೆಗಳಿಗೆ ತಿದ್ದುಪಡಿ ತರಲು ವಿರೋಧ ಪಕ್ಷಗಳ ಸಹಕಾರ ಅಗತ್ಯ ಎಂಬುದನ್ನು ಮನಗಂಡಿದ್ದಾರೆ,  ಎಪಿಎಂಸಿ ಕಾಯಿದೆ ತಿದ್ದುಪಡಿ, ಭೂ ಸುಧಾರಣೆ  ವಿರುದ್ಧ ಈಗಾಗಲೇ ವಿರೋಧ ಪಕ್ಷಗಳು ಪ್ರತಿಭಟನೆ ಆರಂಭಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com