ಯೋಗೇಶ್ವರ್ ಗೆ ಮತ್ತೆ ನಿರಾಸೆ? ವಿಶ್ವನಾಥ್ ,ವಿಜಯೇಂದ್ರ ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಗೆ ಆಯ್ಕೆ ಸಾಧ್ಯತೆ

ಮೇ ಮತ್ತು ಜೂನ್ ನಲ್ಲಿ 16 ವಿಧಾನ ಪರಿಷತ್ ಸದಸ್ಯರುಗಳ ಅವಧಿ ಮುಕ್ತಾಯಗೊಳ್ಳಲಿದ್ದು, ಬಿಜೆಪಿ ಸರ್ಕಾರಿ ಅಧಿಕಾರಕ್ಕೆ ಬರಲು ಕಾರಣವಾದ ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು  ಆರ್ ಶಂಕರ್ ಅವರುಗಳನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಸಾಧ್ಯತೆಯಿದೆ,
ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್
ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್
Updated on: 

ಬೆಂಗಳೂರು: ಮೇ ಮತ್ತು ಜೂನ್ ನಲ್ಲಿ 16 ವಿಧಾನ ಪರಿಷತ್ ಸದಸ್ಯರುಗಳ ಅವಧಿ ಮುಕ್ತಾಯಗೊಳ್ಳಲಿದ್ದು, ಬಿಜೆಪಿ ಸರ್ಕಾರಿ ಅಧಿಕಾರಕ್ಕೆ ಬರಲು ಕಾರಣವಾದ ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು  ಆರ್ ಶಂಕರ್ ಅವರುಗಳನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಸಾಧ್ಯತೆಯಿದೆ,

ಮಾಜಿ ಎಂಎಲ್ ಸಿ ಗೋ.ಮಧುಸೂಧನ್, ನಿರ್ಮಲ್ ಕುಮಾರ್ ಸುರಾನಾ ಹಾಗೂ ಮತ್ತು ಸಿಪಿ ಯೋಗೇಶ್ವರ್ ಹಾಗೂ ಯಡಿಯೂರಪ್ಪ 2ನೇ ಪುತ್ರ ವಿಜಯೇಂದ್ರ ಕೂಡ ಆಕಾಂಕ್ಷಿಗಳಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಕಾಂಗ್ರೆಸ್ ತನ್ನ ಪಟ್ಟಿಯನ್ನು ಸಿದ್ದಪಡಿಸಲಿದೆ, ಅದರಂತೆ ಜೆಡಿಎಸ್ ಕೂಡ  ಪಟ್ಟಿ ತಯಾರಿಸಲಿದೆ.

ತೆರವಾಗುವ 16 ಪರಿಷತ್ ಸದಸ್ಯರಲ್ಲಿ 5 ನಾಮ ನಿರ್ದೇಶಿತರು, 7 ಮಂದಿ ವಿಧಾನ ಸಭೆಯಿಂದ ಆಯ್ಕೆಯಾಗುವವರು ಹಾಗೂ ನಾಲ್ಕು ಮಂದಿ ಶಿಕ್ಷಕರ ಕ್ಷೇತ್ರ ನಾಲ್ಕು ಮಂದಿ ಪದವೀದರರ ಕ್ಷೇತ್ರದಿಂದ ಆಯ್ಕೆಯಾಗುವ ಸದಸ್ಯರಾಗಿದ್ದಾರೆ. 

ಬಿಜೆಪಿ ಸೇರಿ ಸೋತಿರುವ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್ ಶಂಕರ್ ಅವರನ್ನು ನಾಮ ನಿರ್ದೇಶನಗೊಳಿಸುವ ಸಾಧ್ಯತೆಯಿದೆ. ಮಧು ಸೂಧನ್ಜೊತೆಗೆ ನಿರ್ಮಲ್ ಕುಮಾರ್ ಸುರಾನ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕ್ಯಾಂಪ್ ನಲ್ಲಿ ಗುರುತಿಸಿಕೊಂಡಿದ್ದಾರೆ.


ಡಿಕೆ ಶಿವಕುಮಾರ್ ಗೆ ಕೌಂಟರ್ ನೀಡಲು ಮತ್ತೊಬ್ಬ ಒಕ್ಕಲಿಗ ಪ್ರಭಾವಿ ನಾಯಕ ಸಿಪಿ ಯೋಗೇಶ್ವರ್ ಅವರನ್ನು ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಸಿಪಿವೈ ಪ್ರಧಾನ ಪಾತ್ರ ನಿರ್ವಹಿಸಿದ್ದರು, ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕಿದ್ದ  ವಿಜಯೇಂದ್ರ ಕೂಡ ಪರಿಷತ್ ಸದಸ್ಯ ಸ್ಥಾಆಕಾಂಕ್ಷಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com