ಸಿಬಿಐನಿಂದ ವಿನಯ್ ಕುಲಕರ್ಣಿ ಬಂಧನ: ರಾಜಕೀಯ ಭವಿಷ್ಯಕ್ಕೆ ಉರುಳಾಯ್ತಾ ಯೋಗೇಶ್ ಗೌಡ ಹತ್ಯೆ?

ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತವಾಗಿರುವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ರಾಜಕೀಯ ಜೀವನ ಅಡ್ಡದಾರಿ ಹಿಡಿಯಿತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ವಿನಯ್ ಕುಲಕರ್ಣಿ
ವಿನಯ್ ಕುಲಕರ್ಣಿ
Updated on

ಹುಬ್ಬಳ್ಳಿ: ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತವಾಗಿರುವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ರಾಜಕೀಯ ಜೀವನ ಅಡ್ಡದಾರಿ ಹಿಡಿಯಿತಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಈಗಾಗಲೇ ಎರಡು ಚುನಾವಣೆಗಳಲ್ಲಿ ಸೋಲನುಭವಿಸಿದ್ದಾರೆ, ಹೀಗಾಗಿ ಮುಂದಿನ ರಾಜಕೀಯ ಭವಿಷ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.

ಧಾರವಾಡ ವಿಧಾನ ಸಭಾ ಕ್ಷೇತ್ರದಲ್ಲಿ ಯೋಗಿಶ್ ಗೌಡ ವಿನಯ್ ಕುಲಕರ್ಣಿ ಅವರ ಪ್ರಬಲ ಎದುರಾಳಿ ಎಂದು ಬಿಂಬಿಸಲಾಗಿತ್ತು. ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಇಬ್ಬರು ಭಿನ್ನಾಬಿಪ್ರಾಯ ಹೊಂದಿದ್ದರು.

ರಾಜಕೀಯ ದ್ವೇಷ ವಯಕ್ತಿಕ ದ್ವೇಷಕ್ಕೆ ತಿರುಗಿ ಯೋಗಿಶ್ ಗೌಡ ಹತ್ಯೆ ನಡೆದಿದೆ ಎಂದು ಬಿಂಬಿಸಲಾಯಿತು. ಇದನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ವಿನಯ್ ಕುಲಕರ್ಣಿಯನ್ನು ರಾಜಕೀಯವಾಗಿ ಮಟ್ಟ ಹಾಕಲು ವ್ಯವಸ್ಥಿತವಾಗಿ ಬಳಸಿಕೊಂಡಿತು. ಬಿಜೆಪಿ ಮುಖಂಡರು ಯೋಗೇಶ್ ಗೌಡ ಹತ್ಯೆ ಪ್ರಕರಣ ವಿಷಯವಾಗಿ ವಿನಯ್ ವಿರುದ್ದ ಆರೋಪ ಮಾಡಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮ ವಿಷಯವಾಗಿ ವಿನಯ್ ಕುಲಕರ್ಣಿ ಪ್ರಮುಖ ಪಾತ್ರವಹಿಸಿದ್ದರು.

ಆದರೆ ಬಿಜೆಪಿಯ ಪರಿಣಾಮಕಾರಿ ಅಭಿಯಾನವು ಇನ್ನೊಬ್ಬ ಲಿಂಗಾಯತ ನಾಯಕನ ಹತ್ಯೆಯೊಂದಿಗೆ ತನ್ನ ಆರೋಪಗಳನ್ನು ಮರೆಮಾಡಲು ವಿನಯ್ ಜಾತಿಯನ್ನು ಮುಂದಿಟ್ಟುಕೊಂಡಿದ್ದಾನೆ  ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಯಿತು. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದ ವಿಡಿಯೋದಿಂದ ಪಕ್ಷ ಮುಜುಗರ ಅನುಭವಿಸುವಂತಾಯಿತು. 

2018ರ ವಿಧಾನಸಭೆ ಚುನಾವಣೆಯಲ್ಲಿ ವಿನ್ ವಿರುದ್ಧ ಬಿಜೆಪಿ ಜೆಡಿಸ್ ತೊರೆದಿದ್ದ ಪ್ರಭಾವಿ ಅಭ್ಯರ್ಥಿ ಅಮೃತ್ ದೇಸಾಯಿ ಅವರನ್ನು ಕಣಕ್ಕಿಳಿಸಿತು.,ಯೋಗೇಶ್ ಗೌಡ ಕೊಲೆ ಪ್ರಕರಣ ಬಿಜೆಪಿಗೆ ಪ್ರಚಾರದ ಅಸ್ತ್ರವಾಯಿತು.

ಪಕ್ಷವು ಮತ್ತೆ ವಿನಯ್ ಅವರನ್ನು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಆದೇಶದ ಮೇರೆಗೆ ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕಿಳಿುವಂತೆ ಸೂಚಿಸಲಾಯಿತು. 

ಯೋಗೀಶ್‌ಗೌದ ಹತ್ಯೆ ಕುರಿತು ಸಿಬಿಐ ತನಿಖೆ ನಡೆಸುವ ಬೇಡಿಕೆ ಉತ್ತುಂಗಕ್ಕೇರಿತು, ಏಕೆಂದರೆ ಹೈಕೋರ್ಟ್‌ನ ಧಾರವಾಡ ಪೀಠವು ಹತ್ಯೆಗೀಡಾದ ಯೋಗೀಶ್ ಗೌಡ ಸಹೋದರ ಗುರುನಾಥಗೌಡ ಅವರು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿತ್ತು. ಇದೇ ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಸಿಬಿಐ ನಿಂದ ವಿಚಾರಣೆ ನಡೆಸುವುದಾಗಿ ಪಕ್ಷ ಭರವಸೆ ನೀಡಿತ್ತು.

ಈ ಚುನಾವಣೆಯಲ್ಲಿ ವಿನಯ್ ಮತ್ತೊಮ್ಮೆ ಸೋಲಿನ ರುಚಿ ಅನುಭವಿಸಿದರು.  ಪ್ರಹ್ಲಾದ್ ಜೋಶಿ 2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದರು. 

ಈ ಸೋಲಿನಿಂದ ವಿನಯ್ ರಾಜಕೀಯ ವನವಾಸಕ್ಕೆ ತೆರಳಿದರು, ಕೆಲವು ವಾರಗಳ ಹಿಂದೆ ಅವರ ಹೆಸರು ಮತ್ತೆ ಕೇಳಿ ಬಂತು.  ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ವಿನಯ್ ಕುಲಕರ್ಣಿ ಬಿಜೆಪಿಗೆ ಸೇರುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.  ಇನ್ನೂ ವಿನಯ್ ಕುಲಕರ್ಣಿ ಬಂಧನಕ್ಕೆ ಜಿಲ್ಲಾ ಕಾಂಗ್ರೆಸ್ ಘಟಕ ತೀವ್ರ ವಿರೋಧ ವ್ಯಕ್ತ ಪಡಿಸಿದೆ, ವಿನಯ್ ಜಿಲ್ಲಾ ಘಟಕದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com