'ಖಾಲಿ ಮನೆ'ಯಂತಾಗಿದೆ ಕಾಂಗ್ರೆಸ್, ಅನುಯಾಯಿಗಳು, ಕಾರ್ಯಕರ್ತರ ಕೊರತೆ: ಕೆಪಿಸಿಸಿ ಮುಂದೆ ಬೆಟ್ಟದಷ್ಟು ಸವಾಲು

ಕಳೆದ ಎರಡು ವರ್ಷಗಳಿಂದ ಕಾರ್ಯಕರ್ತರು ಮತ್ತು ಅನುಯಾಯಿಗಳು ಸರಿಯಾಗಿ ಕೆಲಸ ಮಾಡದೆ, ಹೊಂದಾಣಿಕೆಯಿಲ್ಲದೆ ಕಾಂಗ್ರೆಸ್ ಪಕ್ಷದ ಸ್ಥಿತಿ ಖಾಲಿ ಮನೆಯಂತಾಗಿದೆ. ಕಳೆದ ಬಾರಿ ಕಾಂಗ್ರೆಸ್ ಶಾಸಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದಾಗ 14 ಕ್ಷೇತ್ರಗಳ ಶಾಸಕರು ಸರ್ಕಾರದ ವಿರುದ್ಧ ತಿರುಗಿಬಿದ್ದು ಬಿಜೆಪಿಗೆ ಬೆಂಬಲ ಸೂಚಿಸಿದರು. 
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜವಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜವಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ

ಮೈಸೂರು: ಕಳೆದ ಎರಡು ವರ್ಷಗಳಿಂದ ಕಾರ್ಯಕರ್ತರು ಮತ್ತು ಅನುಯಾಯಿಗಳು ಸರಿಯಾಗಿ ಕೆಲಸ ಮಾಡದೆ, ಹೊಂದಾಣಿಕೆಯಿಲ್ಲದೆ ಕಾಂಗ್ರೆಸ್ ಪಕ್ಷದ ಸ್ಥಿತಿ ಖಾಲಿ ಮನೆಯಂತಾಗಿದೆ. ಕಳೆದ ಬಾರಿ ಕಾಂಗ್ರೆಸ್ ಶಾಸಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದಾಗ 14 ಕ್ಷೇತ್ರಗಳ ಶಾಸಕರು ಸರ್ಕಾರದ ವಿರುದ್ಧ ತಿರುಗಿಬಿದ್ದು ಬಿಜೆಪಿಗೆ ಬೆಂಬಲ ಸೂಚಿಸಿದರು. 

ಇದರಿಂದ ಕಾಂಗ್ರೆಸ್ ಪಕ್ಷದ ಬಲ ಮತ್ತಷ್ಟು ಕುಗ್ಗಿತು. ಇಂದು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸರಿಯಾದ ಅನುಯಾಯಿಗಳು, ಕಾರ್ಯಕರ್ತರು, ಸಮರ್ಥ ಅಭ್ಯರ್ಥಿಗಳೇ ಇಲ್ಲದಂತಾಗಿದೆ.

ಆರ್ ಆರ್ ನಗರ, ಕೆ ಆರ್ ಪೇಟೆ ಮತ್ತು ಇತರ ಕ್ಷೇತ್ರಗಳಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವುದನ್ನು ಕಂಡಾಗ ಇದು ಸ್ಪಷ್ಟವಾಗುತ್ತದೆ. ಬಂಡಾಯ ಶಾಸಕರನ್ನು ಪಕ್ಷದಿಂದ ಹೊರಹಾಕಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕುಸಿಯಲಾರಂಭಿಸಿತು. ಇದರಿಂದ ಪಕ್ಷದ ಭವಿಷ್ಯಕ್ಕೆ ಮಾರಕವಾಗಿದ್ದು ಮಾತ್ರವಲ್ಲದೆ ಕಾರ್ಯಕರ್ತರಲ್ಲಿ ಸಹ ಉತ್ಸಾಹ ಕುಗ್ಗಿಸಿತು. ಯಾವುದೇ ಸಮರ್ಥ ನಾಯಕರಿಲ್ಲದೆ ಇಂದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ನಾಯಕ ಡಿ ಕೆ ಶಿವಕುಮಾರ್ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಪಕ್ಷವನ್ನು ಅಧಿಕಾರದ ಹತ್ತಿರ ತರುವುದು ಮಾತ್ರವಲ್ಲದೆ ಪಕ್ಷವನ್ನು ತಳಮಟ್ಟದಿಂದ ಮರುನಿರ್ಮಾಣ ಮಾಡಬೇಕಾಗಿದೆ. 14 ಶಾಸಕರನ್ನು ಕಳೆದುಕೊಂಡಿರುವ ಕಾಂಗ್ರೆಸ್ ಆ ಕ್ಷೇತ್ರಗಳನ್ನು ಮರುಪಡೆದು 113 ಸೀಟುಗಳನ್ನು ಗೆಲ್ಲಲೇಬೇಕು ಮುಂದಿನ ಬಾರಿ ಅಧಿಕಾರಕ್ಕೆ ಬರಲು.

ಪಕ್ಷವನ್ನು ನಿರ್ಮಿಸಲು, ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಅಭ್ಯರ್ಥಿಗಳನ್ನು ಗುರುತಿಸಲು ವಿಫಲವಾದರೆ ಈ ಕ್ಷೇತ್ರಗಳಲ್ಲಿನ ಚುನಾವಣೆಗೆ ಎರಡು ವರ್ಷಗಳ ಮುನ್ನ ಪಕ್ಷವು ಅಧಿಕಾರಕ್ಕೆ ಮರಳುವುದು ದೂರದ ಕನಸಾಗಿ ಪರಿಣಮಿಸುತ್ತದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತೀವ್ರ ಸ್ಪರ್ಧೆ ನಡೆಸಿದರೂ, ಅದು ಅನೇಕ ಸ್ಥಾನಗಳಲ್ಲಿ ಬಿಜೆಪಿಯ ಸಾಂಸ್ಥಿಕ ಶಕ್ತಿ ಮತ್ತು ಸಂಪನ್ಮೂಲಗಳಿಗೆ ಹೊಂದಿಕೆಯಾಗಲಿಲ್ಲ.

ಆರ್.ಆರ್.ನಗರದಲ್ಲಿ ಪಕ್ಷದೊಳಗೆ ಸಂಘಟನೆಯಿಲ್ಲದೆ ಕನಕಪುರ ಮತ್ತು ಹತ್ತಿರದ ಕ್ಷೇತ್ರಗಳಿಂದ ಕಾರ್ಯಕರ್ತರನ್ನು ಪ್ರಚಾರಕ್ಕೆ ಕರೆತರಬೇಕಾಯಿತು.ಶಿರಾದಲ್ಲಿ ಕಾಂಗ್ರೆಸ್ ಸೋಲು, ಮತ್ತು ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಾಗ, 90 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಹಳೆ ಮೈಸೂರನ್ನು ಬಿಜೆಪಿ ನಿಧಾನವಾಗಿ ಕಬಳಿಸಬಹುದೆಂಬ ಭಯ ವಿರೋಧಪಕ್ಷಗಳಲ್ಲಿ ಈಗ ನೆಲೆಮಾಡಿದೆ.

ಬಿಜೆಪಿ ಮುಂದಿನ ಪಂಚಾಯತ್ ಚುನಾವಣೆಗೆ ಈಗಾಗಲೇ ಕೆಲಸ ಆರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com