ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿಯಾಗಿ ಸಚಿವ ಸುಧಾಕರ್ ನೇಮಕ

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಸಹ-ಉಸ್ತುವಾರಿಯಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇಮಕವಾಗಿದ್ದಾರೆ. 
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್
Updated on

ಬೆಂಗಳೂರು: ಹೈದರಾಬಾದ್ಮಹಾನಗರ ಪಾಲಿಕೆ ಚುನಾವಣೆಗೆ ಸಹ-ಉಸ್ತುವಾರಿಯಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇಮಕವಾಗಿದ್ದಾರೆ. 

ಬಿಜೆಪಿ ಹೈಕಮಾಂಡ್ ಸಚಿವ ಸುಧಾಕರ್ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿದೆ.  ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ.

ಸಚಿವ ಸುಧಾಕರ್ ಅವರೊಂದಿಗೆ ಮಹಾರಾಷ್ಟ್ರ ಶಾಸಕ ಅಶೀಶ್, ಗುಜರಾತಿನ ಬಿಜೆಪಿ ಮುಖಂಡ ಪ್ರದೀಪ್ ಸಿಂಗ್ ವಾಘೇಲಾ ಹಾಗೂ ಸತೀಶ್ ರೆಡ್ಡಿಯವರನ್ನು ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು "ಹೈದರಾಬಾದ್ ನ ಮಹಾನಗರ ಪಾಲಿಕೆ (GHMC) ಚುನಾವಣೆಗೆ ನನ್ನನ್ನು ಸಹ-ಉಸ್ತುವಾರಿಯಾಗಿ ನೇಮಿಸಿರುವ ಬಿಜೆಪಿ ನಾಯಕರಿಗೆ ಧನ್ಯವಾದಗಳು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. " ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com