ರಾಜ್ಯ ನಾಯಕರಿಗೆ ಮತ್ತೆ ಹೈಕಮಾಂಡ್ ಶಾಕ್! ಬಿಜೆಪಿ ರಾಜ್ಯಸಭಾ ಅಭ್ಯರ್ಥಿಯಾಗಿ ಡಾ. ಕೆ. ನಾರಾಯಣ್ ಆಯ್ಕೆ
ನವದೆಹಲಿ: ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ.ಕೆ.ನಾರಾಯಣ್ ಅವರನ್ನು ಬಿಜೆಪಿ ಚುನಾವಣಾ ಸಮಿತಿ ಪ್ರಕಟಿಸಿದೆ.
ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಮಲ್ ಕುಮಾರ್ ಸುರಾನ ಸೇರಿದಂತೆ 3 ಹೆಸರುಗಳನ್ನು ಸಭೆಯಲ್ಲಿ ಅಂತಿಮಗೊಳಿಸಿ ದೆಹಲಿಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಪಕ್ಷದ ವರಿಷ್ಟರು ಮತ್ತೊಮ್ಮೆ ರಾಜ್ಯ ಸಮಿತಿ ನೀಡಿರುವ ಹೆಸರನ್ನು ತಿರಸ್ಕರಿಸಿ ಅಚ್ಚರಿಯ ಅಭ್ಯರ್ಥಿಗೆ ಟಿಕೆಟ್ ಪ್ರಕಟಿಸಿದೆ.
ಡಾ. ಕೆ. ನಾರಾಯಣ್ ಮೂಲತಃ ಮಂಗಳೂರಿನವರಾದ ಡಾ.ಕೆ.ನಾರಾಯಣ್ ಅವರು, ದೇವಾಂಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು ಮಂಗಳೂರಿನಲ್ಲಿಯೇ ಪದವಿ ಶಿಕ್ಷಣ ಪೂರೈಸಿ 1971 ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡರು. ಮುದ್ರಣ ಕ್ಷೇತ್ರದಲ್ಲಿ ವೃತ್ತಿಯನ್ನು ಪ್ರಾರಂಭಿಸಿದರು. ಮುದ್ರಣ ಕಂಪನಿ "SPAN PRINT" ಇದು ವರ್ಷಗಳಿಂದ ಮುನ್ನಡೆಸುತ್ತಿರುವ ಸಂಸ್ಥೆಯು ಸಂಸ್ಕೃತದಲ್ಲಿ "ಸಾಂಬಶಾನ ಸಂದೇಶ" ದ ಮಾಸಿಕ ಪತ್ರಿಕೆ ಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಸಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಸಲ್ಲಿಸಿದ್ದಾರೆ.
ಸವಿತಾ ಸಮಾಜಕ್ಕೆ ಸೇರಿದ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಅಥವಾ ಅವರದೇ ಸಮುದಾಯದವರಿಗೆ ಟಿಕೆಟ್ ನೀಡುತ್ತಾರೆಂಬ ಚೆರ್ಚೆ ನಡೆಸಿತ್ತು. ಆದರೆ ಮತ್ತೊಂದು ಅತ್ಯಂತ ಹಿಂದುಳಿದ ಹಾಗೂ ಕೆಳ ವರ್ಗದ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಮತ್ತೊಮ್ಮೆ ಅಚ್ಚರಿ ಮೂಡಿಸಿದೆ.
ಬಿಜೆಪಿ ಹಾಗೂ ಆರ್ ಎಸ್ ಎಸ್ ಬೆಂಬಲಿಗರಾಗಿರುವ ನಾರಾಯಣ್ ಆರ್ಥಿಕವಾಗಿ ಸಬಲರಾಗಿದ್ದು, ಅನೇಕ ಧಾರ್ಮಿಕ, ಸಾಂಸ್ಕೃತಿಕ, ಸಮಾಜ ಸೇವೆ, ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ