ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ್ದ ಎಂಪಿ ಕುಮಾರಸ್ವಾಮಿಯಿಂದ ಸಚಿವ ಸ್ಥಾನಕ್ಕೆ ಲಾಬಿ

ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಪಟ್ಟಕ್ಕಾಗಿ ಒತ್ತಡ ಹೇರಿದ್ದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಮತ್ತೆ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ.
ಎಂ.ಪಿ ಕುಮಾರಸ್ವಾಮಿ
ಎಂ.ಪಿ ಕುಮಾರಸ್ವಾಮಿ
Updated on

ಚಿಕ್ಕಮಗಳೂರು: ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಪಟ್ಟಕ್ಕಾಗಿ ಒತ್ತಡ ಹೇರಿದ್ದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಮತ್ತೆ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ.

ಕಳೆದ ಬಾರಿ ಸಚಿವನನ್ನಾಗಿ ಮಾಡುವಂತೆ ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದರು, ಆದರೂ ಪ್ರಯೋಜನವಾಗಿರಲಿಲ್ಲ, ಹೀಗಾಗಿ ಈ ಸಲ ಮತ್ತೆ ತಮ್ಮ ಬೆಂಬಲಿಗರ ನಿಯೋಗದೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿ ಮಾಡಿ ಸಂಪುಟದಲ್ಲಿ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ಬಾರಿ ಸಂಪುಟ ವಿಸ್ತರಣೆ ನಂತರ ಅಸಮಾಧಾನಗೊಂಡಿದ್ದ ಶಾಸಕರನ್ನು ಸಮಾಧಾನಗೊಳಿಸಲು ಸಿಎಂ ಯಡಿಯೂರಪ್ಪ ಕೆಲವು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರು.  ಎಂಪಿ ಕುಮಾರಸ್ವಾಮಿ ಅವರಿಗೆ ಮಾರ್ಕೆಟ್ ಕನ್ಸಲ್ಟಂಟ್ ಏಜೆನ್ಸಿಸ್ ಲಿಮಿಟೆಡ್ ಗೆ ನೇಮಕ ಮಾಡಿದ್ದರು. ಆದರೆ ಈ ಆಫರ್ ಅನ್ನು ಕುಮಾರಸ್ವಾಮಿ ನಿರಾಕರಿಸಿದ್ದರು. ಜೊತೆಗೆ ಪ್ರವಾಹ ಪೀಡಿತ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದರು.

‘ನಾನು 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಬಿಜೆಪಿಯ ಜಿಲ್ಲೆಯ ಹಿರಿಯ ಶಾಸಕನಾಗಿದ್ದೇನೆ. ಜಿಲ್ಲೆಯಲ್ಲಿ ಸಿ.ಟಿ.ರವಿ ಅವರು ಶ್ರಮ ವಹಿಸಿ ಪಕ್ಷದಲ್ಲಿ ದುಡಿದು ಸಚಿವರಾಗಿದ್ದಾರೆ. ಈಗ ಅವರು ರಾಜೀನಾಮೆ ನೀಡಿದ್ದು, ಆ ಹುದ್ದೆಯು ಖಾಲಿಯಿರುತ್ತದೆ. ನಾನು ಕೂಡ ಪಕ್ಷದಲ್ಲಿ ಸಚಿವನಾಗಿ ಸೇವೆ ನೀಡಲು ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರಲ್ಲಿ ಈ ಬಗ್ಗೆ ಮನವಿ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com