ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ನಾಳಿನ ಬಿಜೆಪಿಯೇ ಇಂದಿನ ಯುವ ಮೋರ್ಚಾ: ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಬಿಜೆಪಿ  ಯುವ ಮೋರ್ಚಾಅಧ್ಯಕ್ಷರಾಗಿ  ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಬಿಜೆಪಿ  ಯುವ ಮೋರ್ಚಾಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಪ್ರಬಲವಾಗಿಲ್ಲದ ರಾಜ್ಯಗಳಲ್ಲಿ ಪಕ್ಷದ ಬಲವರ್ಧನೆ ಹಾಗೂ ವಿಸ್ತರಣೆಯ ಗುರಿ ಹೊಂದಿರುವ ಸಂಸದಪಶ್ಚಿಮ ಬಂಗಾಳದಲ್ಲಿ ‘ಸೈದ್ಧಾಂತಿಕ ಹೋರಾಟ’ ಗೆಲ್ಲಲು ಸಹಾಯ ಮಾಡುವುದು ಮತ್ತು ಯುವ ಮೋರ್ಚಾ ಸದಸ್ಯರಿಗೆ ಪರಿಣಾಮಕಾರಿ ರಾಜಕೀಯ ಕಾರ್ಯಕರ್ತರಾಗುವಂತೆ ತರಬೇತಿ ನೀಡುವುದು ಸೇರಿದಂತೆ ಹಲವಾರು ಆದ್ಯತೆಗಳನ್ನು ಹೊಂದಿದ್ದಾರೆ. "ನಾಳಿನ ಬಿಜೆಪಿ ಇಂದಿನ ಯುವ ಮೋರ್ಚಾ"  ಎಂದು ಅವರು 'ನ್ಯೂ ಸಂಡೇ ಎಕ್ಸ್‌ಪ್ರೆಸ್‌'ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಅವರೊಂದಿಗಿನ ಸಂದರ್ಶನದ ಮುಖ್ಯ ಭಾಗಗಳು ಹೀಗಿದೆ-

ಯುವ ಮೋರ್ಚಾ ಅಧ್ಯಕ್ಷರಾಗಿ ನಿಮ್ಮ ಆದ್ಯತೆಗಳು ಯಾವುವು?

ಸೈದ್ಧಾಂತಿಕ ಸಂಘರ್ಷದ ಮೂಲಕ ಬಿಜೆಪಿ ಯಾವಾಗಲೂ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ. ೨ರಿಂದ 303ಕ್ಕೆ ಸಂಸದರ ಸಂಖ್ಯೆಯ ಏರಿಕೆ ಇದಕ್ಕೆ ಸಾಕ್ಷಿ. ಮತ್ತಿದು ರಂತರ ಸೈದ್ಧಾಂತಿಕ ಹೋರಾಟವಾಗಿದೆ.  ಪಶ್ಚಿಮ ಬಂಗಾಳ ಮತ್ತು ಕೇರಳ ನಮಗೆ ಬಹಳ ಮುಖ್ಯ. ಇಲ್ಲಿ ಗೆಲುವು ಎಂದರೆ ಈ ರಾಜ್ಯಗಳು ಸಾಂಪ್ರದಾಯಿಕವಾಗಿ ಕಮ್ಯುನಿಸ್ಟ್ ಭದ್ರಕೋಟೆಗಳಾಗಿರುವುದರಿಂದ ನಮ್ಮ ಸಿದ್ಧಾಂತದ ವಿಜಯ. ನನ್ನ ಆದ್ಯತೆಯೆಂದರೆ ಬಂಗಾಳದಲ್ಲಿ ಸೈದ್ಧಾಂತಿಕ ಗೆಲುವನ್ನು  ಖಚಿತಪಡಿಸುವುದು, ನಾವು ಬಲವಾಗಿರುವ ಪ್ರದೇಶಗಳಲ್ಲಿ ನಮ್ಮ ನೆಲೆಯನ್ನು ಕ್ರೋಢೀಕರಿಸುವುದು ಮತ್ತು ನಾವು ಬಲವಾಗಿರದ ಭಾಗಗಳಲ್ಲಿ ಹೆಚ್ಚು ಹೆಚ್ಚು ತಳಮಟ್ಟದ ಪ್ರದೇಶಗಳನ್ನು ತಲುಪುವುದು, ಅದು ತಮಿಳುನಾಡು, ತೆಲಂಗಾಣ, ಒಡಿಶಾ ಅಥವಾ ಈಶಾನ್ಯ ರಾಜ್ಯಗಳಾಗಿರಬಹುದು.  ಯುವ ಮೋರ್ಚಾ ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ಪ್ರಧಾನಮಂತ್ರಿಯವರ  ಪ್ರತಿಯೊಂದು ಕಾರ್ಯಕ್ರಮವು ಜನರ ಚಳುವಳಿಯಂತಾಗಿ ಯಶಸ್ವಿಯಾಗುವುದನ್ನು ಖಚಿತಪಡಿಸುತ್ತದೆ. ನಾಳಿನ ಬಿಜೆಪಿ ಇಂದಿನ ಯುವ ಮೋರ್ಚಾ.

ಸಾಮಾನ್ಯವಾಗಿ ಯುವಕರು ರಾಜಕೀಯಕ್ಕೆ ಬರಲು ಹಿಂಜರಿಯುತ್ತಾರೆ. ಅವರನ್ನು ಆಕರ್ಷಿಸಲುನೀವು ಹೇಗೆ ಯೋಜನೆ ರೂಪಿಸಿದ್ದೀರಿ?

ರಾಜಕೀಯ ಪಕ್ಷಗಳು ರಾಜವಂಶದ ಘಟಕಗಳಾಗಿ ಕಾರ್ಯನಿರ್ವಹಿಸುವುದರಿಂದ ಸಾಧಾರಣ ಹಿನ್ನೆಲೆಯಿಂದ ಬರುವ ಪ್ರತಿಭಾವಂತ ಯುವಕರು ಯಾವಾಗಲೂ ರಾಜಕೀಯದಲ್ಲಿ ಸಾಕಷ್ಟು ಅವಕಾಶ ಹಾಗೂ ಯಶಸ್ಸನ್ನು ಪಡೆಯುವುದಿಲ್ಲ ಎಂದು ಭಾವಿಸುತ್ತಾರೆ. ಬಿಜೆಪಿ ಇದಕ್ಕೆ ಹೊರತಾಗಿದೆ. ಯುವಜನರು ರಾಜಕೀಯಕ್ಕೆ ಸೇರಿದರೆ ಅವರ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಶ್ರಮವನ್ನು ಗುರುತಿಸಲಾಗುತ್ತದೆ ಮತ್ತು ಅವರು ಯಶಸ್ವಿಯಾಗಬಹುದು ಎಂಬ ವಿಶ್ವಾಸ ಮೂಡಿಸುತ್ತದೆ.ರಾಜವಂಶದ ರಾಜಕಾರಣವು ಯುವಜನರ ದೊಡ್ಡ ವಿರೋಧಕ್ಕೆ ಕಾರಣವಾಗಿತ್ತು. ಈಗ ಬಿಜೆಪಿ ಪ್ರತಿ ಹಂತದಲ್ಲೂ ಇಂತಹಾ ಪರಂಪರೆಯನ್ನು  ಮುರಿಯುತ್ತಿದೆ, ಇದು ಯುವಕರಲ್ಲಿ ವಿಶ್ವಾಸವನ್ನು ತುಂಬುತ್ತದೆ ಮತ್ತು ರಾಜಕೀಯದಲ್ಲಿ ತಮ್ಮ ಸಮಯ ಮತ್ತು ಶಕ್ತಿಯನ್ನು ತೊಡಗಿಸಿಕೊಳ್ಳಲು  ಪ್ರೋತ್ಸಾಹಿಸುತ್ತದೆ.


ಯುವ ಮೋರ್ಚಾ ಅಧ್ಯಕ್ಷರಾಗಿ, ಬಿಹಾರ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ನಿಮ್ಮ ಪಾತ್ರವೇನು?

ಬಿಹಾರವಾಗಲಿ, ಪಶ್ಚಿಮ ಬಂಗಾಳವಾಗಲಿ ಅಥವಾ ಇನ್ನಾವುದೇ ರಾಜ್ಯವಾಗಲಿ, ಯುವಜನರ ಆಕಾಂಕ್ಷೆಗಳಿಗೆ ರಾಜಕೀಯ ಧ್ವನಿ ನೀಡುವುದು ಮುಖ್ಯ. ಅದೇ ಆಕಾಂಕ್ಷೆಯನ್ನು ಹಂಚಿಕೊಳ್ಳುವ ಯುವಕನಾಗಿ, ನಾನು ಅವರೊಂದಿಗೆ ಸಂಪರ್ಕ ಸಾಧಿಸಬಹುದೆಂದು ಭಾವಿಸಿದ್ದೇನೆ. ನಾವು ಒಗ್ಗಟ್ಟಿನಿಂದ  ದೇಶಕ್ಕಾಗಿ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುತ್ತೇವೆ.

ಪಶ್ಚಿಮ ಬಂಗಾಳದಲ್ಲಿ ನಿಮ್ಮ ಮೊದಲ ರ್ಯಾಲಿ ಹಿಂಸೆಗೆ ತಿರುಗಿತ್ತು?

ಪಶ್ಚಿಮ ಬಂಗಾಳದಲ್ಲಿ ಕಾನೂನು ನಿಯಮಗಳನ್ನು ಅಮಾನತಿನಲ್ಲಿಡಲಾಗಿದೆ.  ಕಳೆದ ಎರಡು ವರ್ಷಗಳಲ್ಲಿ 120 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಟಿಎಂಸಿ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ. ಯಾವುದೇ ರೀತಿಯ ಪ್ರಜಾಪ್ರಭುತ್ವ ಪ್ರತಿಭಟನೆಯನ್ನು ಅನುಮತಿಸಲಾಗುವುದಿಲ್ಲ, ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವುದು ಮತ್ತು ಕಾನೂನು ನಿಯಮಗಳನ್ನು ರಕ್ಷಿಸುವುದು ನಮ್ಮ ಮುಂದಿರುವ ಸವಾಲು. ಭ್ರಷ್ಟಾಚಾರ ಮುಕ್ತ ಸರ್ಕಾರ, ಉತ್ತಮ ಉದ್ಯೋಗಾವಕಾಶ ಮತ್ತು ಲಂಚವಿಲ್ಲದ ಸಾರ್ವಜನಿಕ ವಲಯದ ನೇಮಕಾತಿಗಳನ್ನು ಕೋರಿ ನಾವು ಶಾಂತಿಯುತ ರ್ಯಾಲಿಯನ್ನು ನಡೆಸಿದ್ದೇವೆ. ಆದರೆ ಲಾಠಿಚಾರ್ಜ್, ಟಿಯರ್‌ಗಾಸ್ ಶೆಲ್ ಮತ್ತು ಕಂಟ್ರಿ  ಬಾಂಬುಗಳನ್ನು ಎಸೆಯುವ ಮೂಲಕ ಇದನ್ನು ಕ್ರೂರ ಪೊಲೀಸ್ ದೌರ್ಜನ್ಯಕ್ಕೆ ತಳ್ಲಲಾಗಿತ್ತು, ಪಶ್ಚಿಮ ಬಂಗಾಳದಲ್ಲಿ ಮುಂದಿನ ಸರ್ಕಾರ ಬಿಜೆಪಿಯದ್ದಾಗಿರಲಿದೆ ಎನ್ನುವುದು ಗೋಡೆ ಮೇಲಿನ ಬರಹದಷ್ಟು ಸ್ಪಷ್ಟವಾಗಿದೆ.

‘ಬೆಂಗಳೂರು ಭಯೋತ್ಪಾದನೆಯ ಕೇಂದ್ರ’ ಎಂದು ಕರೆದಿದ್ದಕ್ಕಾಗಿ ನೀವು ವಿವಾದಕ್ಕೆ ಸಿಲುಕಿದಿರಿ?

ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ರೂಪುಗೊಳಿಸಲಾಗಿದೆ. ಬೆಂಗಳೂರು ಭಯೋತ್ಪಾದಕ ಕೇಂದ್ರವಾಗದಂತೆ ನೋಡಿಕೊಳ್ಳುವುದು ಮತ್ತು ಅದನ್ನು ಸುಂದರ ನಗರವನ್ನಾಗಿಯೇ ಉಳಿಸಬೇಕುಎಂಬುದು ನನ್ನ ಉದ್ದೇಶವಾಗಿತ್ತು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಅನೇಕ ಉಗ್ರರ ಬಂಧನವಾಗಿದೆ.  ದಕ್ಷಿಣ ಭಾರತದಲ್ಲಿ ಕೆಲ ವಿಚ್ಚಿದ್ರಕಾರಿ ಶಕ್ತಿಗಳು ಬೆಂಗಳೂರನ್ನು ಸುರಕ್ಷಿತ ತಾಣವೆಂಬಂತೆ ಬಳಸಿಕೊಂಡಿದೆ  ಎಂಬುದು ಸ್ಪಷ್ಟವಾಗುತ್ತಿದೆ. ಡಿಜೆ ಹಳ್ಳಿಮತ್ತು ಕೆಜೆ ಹಳ್ಳಿ ಗಲಭೆಗಳು ಈ ಮಾದರಿಯನ್ನು ಬಹಿರಂಗಪಡಿಸಿದವು. ಕಾಂಗ್ರೆಸ್ ಮತ್ತು ಜೆಡಿಎಸ್ ಮತ ಬ್ಯಾಂಕ್ ರಾಜಕೀಯದ ಬಲವನ್ನು ಹೊಂದಿರಬಹುದು, ಅದು ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಕ್ರಮ ಜರುಗಿಸುವುದನ್ನು ತಡೆಯುತ್ತದೆ. ಆದರೆ ನನಗೆ ಬೆಂಗಳೂರಿನ ಸುರಕ್ಷತೆಯು ಪ್ರಥಮ ಆದ್ಯತೆಯಾಗಿದೆ.

ರಾಜಕೀಯವಾಗಿ ತಪ್ಪಾದ ಹೇಳಿಕೆಗಳು ಹಾಗೂ ವಿಭಜನೆಗೆ ಅವಕಾಶ ನೀಡುವ ಹೇಳಿಕೆ ನಿಡುವುರೆಂದು ನಿಮ್ಮನ್ನು ವಿಮರ್ಶಿಸುವ ಕೆಲವರು ಹೇಳಿದ್ದಾರೆ?

ದುರದೃಷ್ಟವಶಾತ್, ನಮ್ಮ ರಾಜಕೀಯ ಭಾಷಣಗಳಲ್ಲಿ ಸರಿಯಾದ ವಿಷಯವನ್ನು ಹೇಳುವುದು ಅಥವಾ ಸತ್ಯವನ್ನು ಮಾತನಾಡುವುದು ರಾಜಕೀಯವಾಗಿ ತಪ್ಪೆಂದು ಹೇಳಲಾಗುತ್ತದೆ,ದು ಬದಲಾಗಬೇಕಾಗಿದೆ.

ನೀವು ಸೇರಿದಂತೆ ಬಿಜೆಪಿ ಸಂಸದರು ಜಿಎಸ್ಟಿ ಪರಿಹಾರ ಮತ್ತು ಪ್ರವಾಹ ಪರಿಹಾರದಂತಹ ರಾಜ್ಯ ಸಮಸ್ಯೆಗಳನ್ನು ಕೇಂದ್ರದೊಂದಿಗೆ ಚರ್ಚಿಸುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ?

ಜಿಎಸ್ಟಿ ಕೌನ್ಸಿಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೂಲಭೂತ ಅಂಶಗಳನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಇದು ಎಲ್ಲಾ ರಾಜ್ಯಗಳ  ಪ್ರಾತಿನಿಧ್ಯವನ್ನು ಹೊಂದಿದೆ, ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗುತ್ತದೆ ಮತ್ತು ಪ್ರತಿ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ಬದ್ದವಾಗಿದೆ. ರ್ಥಿಕ ಶಕ್ತಿ ಕೇಂದ್ರವಾಗಿರುವುದರಿಂದ ಕರ್ನಾಟಕವು ಯಾವಾಗಲೂ ಕೇಂದ್ರಕ್ಕೆ ಮೊದಲ ಆದ್ಯತೆಯಾಗಿದೆ. ಕಳೆದ 30 ವರ್ಷಗಳಿಂದ ಬಾಕಿ ಇರುವ ಎನ್‌ಐಎ ಕೇಂದ್ರ ಮತ್ತು ಉಪನಗರ ರೈಲು ಯೋಜನೆ  ಬೆಂಗಳೂರಿಗೆ ಸಿಕ್ಕಿತು. ನಿಧಿಗಳ ಹಂಚಿಕೆಯ ಮೇಲೆ, ನಮ್ಮನ್ನು ಎಂದೂ ಕಡೆಗಣಿಸಿಲ್ಲ, ಅಲ್ಲದೆ, ಸ್ಮಾರ್ಟ್ ಸಿಟಿ ಯೋಜನೆಗಳು, ಹೆದ್ದಾರಿಗಳು, ಐಐಐಟಿಗಳು ಮತ್ತು ಇತರ ಸಂಸ್ಥೆಗಳ ಮೂಲಕ ಹೂಡಿಕೆಯಲ್ಲಿಯೂ ರಾಜ್ಯಕ್ಕೆ ಹೆಚ್ಚು ಪಾಲು ಸಿಕ್ಕಿದೆ ಎನ್ನುವುದ್ ಗಮನಿಸಬೇಕು.

Related Stories

No stories found.

Advertisement

X
Kannada Prabha
www.kannadaprabha.com