ಯುದ್ದಕ್ಕೂ ಮುನ್ನ ಶಸ್ತ್ರ ತ್ಯಾಗ: ಸೋಲಿನ ಭೀತಿಯಿಂದ ಪಶ್ಚಿಮ ಪದವೀಧರ ಕ್ಷೇತ್ರದ ಕಣದಿಂದ ಜೆಡಿಎಸ್ ಅಭ್ಯರ್ಥಿ ವಾಪಸ್

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಒಂದಡೆ ಬಿರುಸಿನಿಂದ ನಡೆಯುತ್ತಿದೆ, ಮತ್ತೊಂದೆಡೆ ಸೋಲಿನ ಭಯದಿಂದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ವಾಪಸ್ ಕರೆಸಿಕೊಂಡಿದೆ.
ಹೊರಟ್ಟಿ ಮನೆಯಲ್ಲಿ ದೇವೇಗೌಡ ಉಪಹಾರ ಸೇವನೆ
ಹೊರಟ್ಟಿ ಮನೆಯಲ್ಲಿ ದೇವೇಗೌಡ ಉಪಹಾರ ಸೇವನೆ
Updated on

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಒಂದಡೆ ಬಿರುಸಿನಿಂದ ನಡೆಯುತ್ತಿದೆ, ಮತ್ತೊಂದೆಡೆ ಸೋಲಿನ ಭಯದಿಂದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ವಾಪಸ್ ಕರೆಸಿಕೊಂಡಿದೆ.

ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ ಅವರರನ್ನು ಸ್ಪರ್ಧೆಯಿಂದ ಹಿಂದೆ ಸರಿಸಿರುವ ಜೆಡಿಎಸ್ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.

ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡದ ಬಾಂಬೆ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಗೆ ತಳಮಟ್ಟದ ಬೆಂಬಲವಿಲ್ಲ, ಜೊತೆಗೆ ಪಕ್ಷ ಸಂಘಟನೆಯೂ ಇಲ್ಲ.

ಕಲ್ಲೂರು ಅವರ ಮಾವ ನಿಧನರಾದ ಕಾರಣ ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರಿದೆ, ಕಲ್ಲೂರು ಅವರು ಕುಟುಂಬಸ್ಥರ ಜೊತೆ ಹೆಚ್ಚಿನ ಸಮಯ ಕಳೆಯಬೇಕಾಗಿದೆ, ಆದರೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿಯೊಬ್ಬರ ಬಳಿ ನಾವು ಹೋಗಿ ಮತಯಾಚಿಸಲು ಪಕ್ಷ ವಿಫಲವಾಗಿದೆ,  ಹೀಗಾಗಿ ಜೆಡಿಎಸ್ ನಾಯಕರು ಈ ಕ್ಷೇತ್ರದ ಚುನಾವಣೆಯಿಂದ ದೂರ ಉಳಿಲು ನಿರ್ಧರಿಸಿದ್ದಾರೆ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಕಣದಿಂದ ಪಕ್ಷದ ಅಭ್ಯರ್ಥಿ ಹಿಂದೆ ಸರಿದ ಮೇಲೆ ತಾವು ಯಾರಿಗೆ ಬೆಂಬಲ ನೀಡಬೇಕು ಎಂದು ಸ್ಥಳೀಯ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಪ್ರಶ್ನಿಸಿದ್ದರು. ಹೀಗಾಗಿ ಎಲ್ಲಾ ಜಿಲ್ಲೆಗಳ ಫೀಡ್ ಬ್ಯಾಕ್ ತರಿಸಿಕೊಂಡು ಗುರಿಕಾರ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೊರಟ್ಟಿ ತಿಳಿಸಿದ್ದಾರೆ.

ಪಕ್ಷದಿಂದ ಅಭ್ಯರ್ಥಿ ಎಂದು ಘೋಷಿಸುವವರೆಗೂ ಕಲ್ಲೂರು ಯಾವುದೇ ಚುನಾವಣಾ ಕೆಲಸ ಆರಂಭಿಸಿರಲಿಲ್ಲ,  ಪಕ್ಷದ ನಾಯಕರೇ ತಮ್ಮ ಪರ ಪ್ರಚಾರ ಮಾಡಿ ಚುನಾವಣೆಗೆ ಹಣಕಾಸಿನ ಸಹಾಯ ಮಾಡಲಿ ಎಂದು ಕಲ್ಲೂರ್ ಬಯಸಿದ್ದರು, ಅವರ ನಡವಳಿಕೆಯಿಂದ ಬೇಸತ್ತು ಪಕ್ಷ ಈ ನಿರ್ಧಾರ ಕೈಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದೇ ವೇಳೆ ಗುರಿಕಾರ್ ಕಳೆದ 18 ತಿಂಗಳಿಂದ ಮೂರು ಪಕ್ಷಗಳಿಂದ ಟಿಕೆಟ್ ಪಡೆಯಲು ಹರಸಾಹಸ ಮಾಡಿದ್ದರು.ಆದರೆ ಯಾವುದೇ ಪಕ್ಷ ಅವರಿಗೆ ಸಹಾಯ ಮಾಡದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಜೆಡಿಎಸ್ ನಿರ್ಧಾರದಿಂದ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಜೆಡಿಎಸ್ ಬೆಂಬಲ ನನಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ, ನಾನು ಈಗಾಗಲೇ ಮೂರು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದೇನೆ, ಹೊರಟ್ಟಿ ಅವರು ನನ್ನ ಬೆನ್ನಿಗೆ ನಿಂತಿದ್ದಾರೆ. ಇದರಿಂದ ನನ್ನ ಸ್ಪರ್ಧೆಯ ಗಂಭೀರತೆಯನ್ನು ಮತದಾರರಿಗೆ ಅರ್ಥೈಸುತ್ತಿದ್ದೇನೆ, ಜೆಡಿಎಸ್ ನನಗೆ ಷರತ್ತು ರಹಿತ ಬೆಂಬಲ ನೀಡಿದೆ ಎಂದು ಬಸವರಾಜ ಗುರಿಕಾರ್ ತಿಳಿಸಿದ್ದಾರೆ.

ಜೆಡಿಎಸ್ ಮತಗಳು ಗುರಿಕಾರ್ ಅವರಿಗೆ ಸಿಗಲಿದೆ ಎಂದು ಹೊರಟ್ಟಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.  ಹೊರಟ್ಟಿ ಮತದಾರರು ಹೇಗೆ ಇವರಿಗೆ ತಮ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com