ಶಿರಾದಲ್ಲಿ ಮುಸ್ಲಿಂ ಮತದಾರರಿಗೆ ಕಾಂಗ್ರೆಸ್- ಜೆಡಿಎಸ್ ಗಾಳ: ಬಹುಸಂಖ್ಯಾತ ಹಿಂದೂಗಳ ಓಲೈಕೆಯಲ್ಲಿ ಬಿಜೆಪಿ ಮಗ್ನ!

ಶಿರಾ ಉಪ ಚುನಾವಣೆ ಪ್ರಚಾರ ಬಿರುಸಾಗಿದ್ದು ಮೂರು ಪ್ರಮುಖ ಪಕ್ಷಗಳ ನಾಯಕರು ಶಿರಾ ನಗರ ಪ್ರಚಾರದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತುಮಕೂರು: ಶಿರಾ ಉಪ ಚುನಾವಣೆ ಪ್ರಚಾರ ಬಿರುಸಾಗಿದ್ದು ಮೂರು ಪ್ರಮುಖ ಪಕ್ಷಗಳ ನಾಯಕರು ಶಿರಾ ನಗರ ಪ್ರಚಾರದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. 

16ನೇ ಶತಮಾನದಲ್ಲಿ ಮೊಘಲರ ಆಡಳಿತದಲ್ಲಿ ಪ್ರಧಾನ ಕಚೇರಿಯಾಗಿದ್ದ ಶಿರಾ ಪಟ್ಟಣದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿವೆ.

ಬಿಜೆಪಿ ಹೆಚ್ಚಿನ ಸಂಖ್ಯೆಯ ಹಿಂದೂ ಮತಕ್ಕೆ ಗಾಳ ಹಾಕುತ್ತಿದ್ದರೇ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಅಲ್ಪ ಸಂಖ್ಯಾತ ಮತಗಳು ಪ್ರಮುಖವಾಗಿವೆ. 

ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಈಶ್ವರಪ್ಪ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ ವೈ ವಿಜಯೇಂದ್ರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ, ಆದರೆ ಯಾವುದೇ ಧಾರ್ಮಿಕ ವಿಷಯಗಳನ್ನು ಅವರು ಮಾತನಾಡುತ್ತಿಲ್ಲ,  ಅದರ ಬದಲಿಗೆ ಬಿಜೆಪಿ ಅಭ್ಯರ್ಥಿ ರಾಜೇಶ್ ಗೆದ್ದರೇ ಮಾಡಲಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಟಿ,ಬಿ ಜಯಚಂದ್ರ ಪರ ಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡರು ಮುಸ್ಲಿಂ ಸಮುದಾಯವಿರುವ ಪ್ರದೇಶಗಳಲ್ಲಿ ಪ್ರಚಾರ ನಡೆಸಿದರು.

ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಸಮುದಾಯ ಇರುವ ಪ್ರದೇಶದಲ್ಲಿ ಅದರಲ್ಲೂ ವಿಶೇಷವಾಗಿ ಕಾಡುಗೊಲ್ಲರ ಸ್ಥಳಗಳಲ್ಲಿ ಪ್ರಚಾರ ನಡೆಸಿದರು. 

ನಾನು ಸಿಎಂ ಆಗಿದ್ದಾಗ ಕಾಡುಗೊಲ್ಲ ಜನಾಂಗವನ್ನು ಸಮುದಾಯದ ಪಟ್ಟಿಗೆ ಸೇರಿಸಿದ್ದೆ ಮತ್ತು ಕೇಂದ್ರ ಸರ್ಕಾರಕ್ಕೆ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಕೆಟಗರಿಗೆ ಸೇರಿಸುವಂತೆ ಮನವಿ ಮಾಡುತ್ತೇನೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯದ ಒಬ್ಬ ನಾಯಕನಿಗೆ ಟಿಕೆಟ್ ನೀಡುವುದಾಗಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com