ಬಾಳಾ ಠಾಕ್ರೆ ಪರಂಪರೆ ತೊರೆದು ಉದ್ಧವ್ ಠಾಕ್ರೆ ಸೋನಿಯಾಗೆ ಶರಣಾಗಿದ್ದಾರೆ: ಶೋಭಾ ಕರಂದ್ಲಾಜೆ ಕಿಡಿ

ಬಾಳಾ ಠಾಕ್ರೆ ಪರಂಪರೆಯನ್ನು ಮುಂದುವರಿಸುವ ಬದಲಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಶರಣಾಗಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on: 

ಮುಂಬಯಿ: ಬಾಳಾ ಠಾಕ್ರೆ ಪರಂಪರೆಯನ್ನು ಮುಂದುವರಿಸುವ ಬದಲಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಶರಣಾಗಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಟ್ವಿಟ್ಟರ್‌ನಲ್ಲಿ ಉದ್ಧವ್ ಠಾಕ್ರೆ ಮರಾಠಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ಶೋಭಾ ಕರಂದ್ಲಾಜೆ, ಉದ್ಧವ್ ಠಾಕ್ರೆ ಅವರು ಬಾಳಾ ಸಹಾಬ್ ಠಾಕ್ರೆ ಪರಂಪರೆಯನ್ನು ಅನುವಂಶೀಕವಾಗಿ ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಶರಣಾಗಿದ್ದು ಅವರ ಆಲೋಚನೆಗಳನ್ನು ಎರವಲು ಪಡೆದುಕೊಂಡಿದ್ದಾರೆ ಎಂದು ಕಿರಿಕಾರಿದ್ದಾರೆ.

ಇದು ಭಾರತ ದೇಶ ಎಂದಿಗೂ ಸಹಿಸದ ಅಧಪತನ, ಅವರು ಹಿಂದೂ ಭಾವನೆಗಳು ಮತ್ತು ಹಬ್ಬಗಳನ್ನು ಅಪಹಾಸ್ಯ ಮಾಡುವ ಮಟ್ಟಕ್ಕೆ ತಲುಪಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com