
ಬೆಂಗಳೂರು: 2019ರ ಕೆ.ಆರ್ ಪೇಟೆ ವಿಧಾನಸಭೆ ಉಪಚುನಾವಣೆ ತಂತ್ರವನ್ನು ಶಿರಾದಲ್ಲಿ ಬಳಸುವುದಾಗಿ ಬಿಜೆಪಿ ಹೇಳುತ್ತಿದೆ, ಇದೇ ವೇಳೆ 2017ರ ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ರಣತಂತ್ರ ಬಳಸಲು ಕಾಂಗ್ರೆಸ್ ಮುಂದಾಗಿದೆ.
ಎರಡು ಚುನಾವಣೆಗಳಲ್ಲಿಯೂ ಮಹಿಳಾ ಮತದಾರರೇ ಕೇಂದ್ರವಾಗಿದ್ದಾರೆ, ಮತದಾನಕ್ಕೆ ಇನ್ನೂ ಒಂದೇ ವಾರ ಬಾಕಿಯಿರುವ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳಾ ಮತದಾರರಿಗೆ ಗಾಳ ಹಾಕುತ್ತಿವೆ.
ಶಿರಾದಲ್ಲಿ ಬಿಜೆಪಿ ಗ್ರಾಮಗಳ ದೇವಾಸ್ಥಾನಗಳಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿ ವಿಶೇಷವಾಗಿ ಅವರ ಬಳಿ ಮತಯಾಚನೆ ಮಾಡುತ್ತಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಕಾಂಗ್ರೆಸ್ ತಲುಪುತ್ತಿದೆ.ಅನೇಕ ಮಹಿಳೆಯರ ಸ್ವ-ಸಹಾಯ ಗುಂಪುಗಳು ಸ್ಥಳೀಯ ಆಡಳಿತದೊಂದಿಗೆ ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತವೆ, ಹೀಗಾಗಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಕಾರ್ಡ್ ಪ್ಲೇ ಮಾಡಿ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಹಿಂದಿನ ವಿವಾದವನ್ನೇ ಬಂಡವಾಳವಾಗಿಸಿಕೊಂಡಿರುವ ಕಾಂಗ್ರೆಸ್ ನಿಮ್ಮಲ್ಲೇ ನಿಮ್ಮವರನ್ನೇ ಒಬ್ಬರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡುತ್ತಿದೆ.
2017ರ ರಲ್ಲಿ ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೀತಾ ಮಹಾದೇವ ಪ್ರಸಾದ್ ಅವರನ್ನು ಕಣಕ್ಕಿಳಿಸಿ ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಅದೇ ರೀತಿಯಲ್ಲೇ ಆರ್ ಆರ್ ನಗರದಲ್ಲಿ ಪ್ರಚಾರ ಮಾಡುತ್ತಿದೆ.
ಮಹಿಳಾ ಘಟಕಗಳು ಗಾರ್ಮೆಂಟ್ಸ್ ಫ್ಯಾಕ್ಟರಿ ವರ್ಕರ್ಸ್ ಯೂನಿಯನ್ ನಾಯಕರು ಮತ್ತು ಅವರ ಪತ್ನಿಯರು ಹಾಗೂ ಸ್ವ ಸಹಾಯ ಗುಂಪುಗಳ ಮನವೊಲಿಸುತ್ತಿವೆ, ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದ ನಂತರ ಮಹಿಳಾ ಮತದಾರರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ.
Advertisement