ಇತಿಹಾಸ ತಿರುಚಿವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಸಿದ್ದರಾಮಯ್ಯ

ಇತಿಹಾಸ ತಿರುಚಿವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಪಟೇಲ್ ಪ್ರತಿಮೆಗೆ ನಮ್ಮ ವಿರೋಧ ಇಲ್ಲ. ಆದರೆ ಜವಾಹರ್ ಲಾಲ್ ನೆಹರು ಹಾಗೂ ಸರ್ದಾರ್ ಪಟೇಲ್ ಸಂಬಂಧದ ಬಗ್ಗೆ ಬಿಜೆಪಿ ನಾಯಕರು ಇತಿಹಾಸ ತಿರುಚುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಇತಿಹಾಸ ತಿರುಚಿವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಪಟೇಲ್ ಪ್ರತಿಮೆಗೆ ನಮ್ಮ ವಿರೋಧ ಇಲ್ಲ. ಆದರೆ ಜವಾಹರ್ ಲಾಲ್ ನೆಹರು ಹಾಗೂ ಸರ್ದಾರ್ ಪಟೇಲ್ ಸಂಬಂಧದ ಬಗ್ಗೆ ಬಿಜೆಪಿ ನಾಯಕರು ಇತಿಹಾಸ ತಿರುಚುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಉಕ್ಕಿನ ಮನುಷ್ಯ ದಿ.ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ದಿ. ಇಂದಿರಾಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿದ್ದರಾಮಯ್ಯ, ದೇಶಕ್ಕೆ ಗಾಂಧಿ ಕುಟುಂಬದ ಕೊಡುಗೆ ಅಪಾರ. ಗಾಂಧಿಯವರನ್ನು ಕೊಂದ ಕುಟುಂಬದವರು ಬಿಜೆಪಿ ನಾಯಕರು, ನಿಜವಾದ ಇತಿಹಾಸ ಹೇಳುವುದಿಲ್ಲ. ಸುಳ್ಳು ಹೇಳುವುದೇ ಬಿಜೆಪಿ ನಾಯಕರ ಕೆಲಸ. ನೆಹರು, ವಲ್ಲಭಭಾಯಿ ಪಟೇಲ್, ಇಂದಿರಾಗಾಂಧಿ ನಮಗೆ ಸ್ಪೂರ್ತಿ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ದೇಶಕ್ಕಾಗಿ ಬಿಜೆಪಿಯ ಒಬ್ಬರು ಪ್ರಾಣತ್ಯಾಗ ಮಾಡಿಲ್ಲ. ಆದರೂ ನಾವು ದೇಶಭಕ್ತರು ಎಂದು ಬಿಜೆಪಿಯವರು ಹೇಳುತ್ತಾರೆ. ಇವರು ಗಾಂಧೀಜಿ ಕೊಂದ ಗೂಡ್ಸೆ ವಂಶಸ್ಥರು ಎಂದು ವಾಗ್ದಾಳಿ ನಡೆಸಿದರು. 

ದೇಶದ ಉಕ್ಕಿನ ಮನುಷ್ಯ ವಲ್ಲಭಾಬಾಯ್ ಪಟೇಲ್‌ಗೂ ಬಿಜೆಪಿಗೂ ಏನು ಸಂಬಂಧ. ವಲ್ಲಭಬಾಯ್ ಪಟೇಲ್ ಕಾಂಗ್ರೆಸ್ಸಿಗರು. ಆರ್‌ಎಸ್‌ಎಸ್‌ನ್ ಅನ್ನು ರದ್ದು ಮಾಡಿದವರು ವಲ್ಲಭಾಬಾಯ್ ಪಟೇಲ್ ಎಂದು ಹೇಳಿದರು. 
ಗಾಂಧೀಜಿಯವನ್ನು ಕೊಂದ ನಾತುರಾಮ್ ಗೂಡ್ಸೆ ಆರ್‌ಎಸ್‌ಎಸ್‌ನವನು. ಸರ್ದಾರ್ ವಲ್ಲಭಬಾಯ್ ಪಟೇಲ್ ಹೆಸರೇಳಿಕೊಂಡು ಬಿಜೆಪಿಯವರು ದೇಶಭಕ್ತರಾಗಲು ಹೊರಟಿದ್ದಾರೆ ಎಂದು ಟೀಕಿಸಿದ ಅವರು, ಇತಿಹಾಸವನ್ನು ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಸರ್ಧಾರ್ ವಲ್ಲಭಾಬಾಯ್ ಪಟೇಲರ ಪ್ರತಿಮೆಗೆ ನಮ್ಮ ವಿರೋಧವಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com