ಸದನದಲ್ಲಿ 'ಸೋಂಕಿತ ಸರ್ಕಾರ' ಎಂಬ ಬರಹದ ಮಾಸ್ಕ್ ಧರಿಸಿ ಶಾಸಕ ಅಜಯ್ ಸಿಂಗ್ ಆಕ್ರೋಶ!

ಕಾಂಗ್ರೆಸ್ ನ ಮುಖ್ಯಸಚೇತಕ ಅಜಯ್ ಸಿಂಗ್ ಕೊರೋನಾ ಮೇಲಿನ ಚರ್ಚೆ ವೇಳೆ ಸೋಂಕಿತ ಸರ್ಕಾರ ಎಂಬ ಬರಹ ಇರುವ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನಾ ರೂಪದಲ್ಲಿ ಕೊರೋನಾ ಭಾಷಣ ಮಾಡಿ ಸದನದ ಗಮನ ಸೆಳೆದರು.
ಡಾ. ಅಜಯ್ ಸಿಂಗ್
ಡಾ. ಅಜಯ್ ಸಿಂಗ್
Updated on

ಬೆಂಗಳೂರು: ಕಾಂಗ್ರೆಸ್ ನ ಮುಖ್ಯಸಚೇತಕ ಅಜಯ್ ಸಿಂಗ್ ಕೊರೋನಾ ಮೇಲಿನ ಚರ್ಚೆ ವೇಳೆ ಸೋಂಕಿತ ಸರ್ಕಾರ ಎಂಬ ಬರಹ ಇರುವ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನಾ ರೂಪದಲ್ಲಿ ಕೊರೋನಾ ಭಾಷಣ ಮಾಡಿ ಸದನದ ಗಮನ ಸೆಳೆದರು.

ನಿಯಮ 69 ಚರ್ಚೆ ವೇಳೆ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕೊರೋನಾ ಸಂಬಂಧ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿದರು. ಈ ವೇಳೆ ಸೋಂಕಿತ ಸರ್ಕಾರ ಎಂಬ ಸ್ಲೋಗನ್ ಉಳ್ಳ ಮಾಸ್ಕ್ ಧರಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ಧ ಪ್ರತಿಭಟನಾ ರೀತಿಯಲ್ಲಿ ಸೋಂಕಿತ ಸರ್ಕಾರ ಎಂಬ ಘೋಷಣೆಯ ಕಪ್ಪು ಮಾಸ್ಕ್ ಧರಿಸಿ, ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಮೊದಲಿಗೆ ಸರ್ಜಿಕಲ್ ಮಾಸ್ಕ್ ಧರಿಸಿದ್ದ ಅಜಯ್ ಸಿಂಗ್ ಮಾತಿನ‌ ಮಧ್ಯೆ ಪ್ರತಿಭಟನಾರ್ಥವಾಗಿ ಸೋಂಕಿತ ಸರ್ಕಾರ ಎಂಬ ಬರಹದ ಕಪ್ಪು ಬಣ್ಣದ ಮಾಸ್ಕ್ ಧರಿಸಿದರು. ಆ ಮೂಲಕ ಸರ್ಕಾರಕ್ಕೆ ಸದನದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮುಂದಾದರು.

ಈ ಮಧ್ಯೆ, ರಾತ್ರೋರಾತ್ರಿ ಬೆಂಗಳೂರಿನ ಹಲವೆಡೆ ಸೋಂಕಿತ ಸರ್ಕಾರ ಎಂಬ ಭಿತ್ತಿಪತ್ರಗಳನ್ನು ಅಂಟಿಸಲಾಗಿದ್ದು, ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ಅಧಿಕಾರಕ್ಕೆ ಬಂದ ಸೋಂಕಿನ ಸರ್ಕಾರ ಎಂದು ಭಿತ್ತಿಪತ್ರಗಳು ನಗರದ ಎಲ್ಲೆಡೆ ರಾರಾಜಿಸುತ್ತಿವೆ.  
ಮೇಕ್ರಿ ಸರ್ಕಲ್, ಪ್ಯಾಲೆಸ್ ರಸ್ತೆ, ಟಿವಿ ಟವರ್ ರಸ್ತೆ, ಶಂಕರಮಠ, ಕಾಮಾಕ್ಷಿಪಾಳ್ಯ ಮತ್ತಿತರ ಪ್ರದೇಶಗಳಲ್ಲಿ ಸಾವಿರಾರು ಪೋಸ್ಟರ್‍ಗಳನ್ನು ಅಂಟಿಸಲಾಗಿದೆ.

ಕೊರೋನಾ ಸಂಕಷ್ಟದಲ್ಲೂ ಲೂಟಿ ಮಾಡಲು ನಿಂತಿರುವ ಸೋಂಕಿನ ಸರ್ಕಾರ ಎಂಬ ಭಿತ್ತಿಪತ್ರಗಳನ್ನು ಅನಾಮಿಕರು ನಿನ್ನೆ ರಾತ್ರಿ ಅಂಟಿಸಿರುವುದು ಪತ್ತೆಯಾಗಿದೆ. ನಗರದೆಲ್ಲೆಡೆ ರಾರಾಜಿಸುತ್ತಿರುವ ಈ ಭಿತ್ತಿಪತ್ರಗಳು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಭಿತ್ತಿಪತ್ರ ಅಂಟಿಸಿರುವವರನ್ನು ಪತ್ತೆಹಚ್ಚುವಂತೆ ರಾಜ್ಯ ಸರ್ಕಾರ ಬಿಬಿಎಂಪಿ ಮತ್ತು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com