ಬಾಕಿ ಉಳಿದ ಮಸೂದೆಗಳ ಅಂಗೀಕಾರಕ್ಕೆ ಜನವರಿ ಮಧ್ಯಭಾಗದಲ್ಲಿ ವಿಧಾನಸಭೆ ಅಧಿವೇಶನ!

ಜನವರಿ ಮಧ್ಯಭಾಗದಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಸಾಧ್ಯತೆಯಿದ್ದು, ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದೆ.
ಜೆ.ಸಿ ಮಾಧುಸ್ವಾಮಿ
ಜೆ.ಸಿ ಮಾಧುಸ್ವಾಮಿ

ಬೆಂಗಳೂರು: ಜನವರಿ ಮಧ್ಯಭಾಗದಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಸಾಧ್ಯತೆಯಿದ್ದು, ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದೆ.

ಅಧಿವೇಶನ ಎಷ್ಟು ದಿನ ನಡೆಯಲಿದೆ ಮತ್ತು ಯಾವ ದಿನಾಂಕದಿಂದ ಆರಂಭವಾಗಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತವಾಗಿ ನಿರ್ಧರಿಸಲಾಗಿಲ್ಲ ಅಧಿವೇಶನ ನಡೆಸಲು ಇನ್ನೂ ಅನುಮೋದನೆ ಸಿಕ್ಕಿಲ್ಲವಾದರೂ, ಜನವರಿ ಮಧ್ಯಭಾಗದಲ್ಲಿ ಅಧಿವೇಶನ ಕರೆಯುವ ಸಾಧ್ಯತೆಯಿದೆ.

ಜನವರಿ 18 ರಿಂದ ಕೆಲ ದಿನಗಳ ಸಮಯ ಜಂಟಿ ಅಧಿವೇಶನ ಕರೆಯುವ ಉದ್ದೇಶವಿದೆ, ಮೊದಲ ದಿನದ ಅಧಿವೇಶನದಲ್ಲಿ ರಾಜ್ಯಪಾಲರು ಸದನ ಉದ್ದೇಶಿಸಿ ಭಾಷಣ ಮಾಡಲಿದ್ದು, ಸರ್ಕಾರ ಬಾಕಿ ಉಳಿದಿರುವ ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ.

ಸರಿಯಾದ ಪ್ರಕ್ರಿಯೆ ನಂತರ ಅಧಿವೇಶನ ಕರೆಯುವ ದಿನಾಂಕಗಳನ್ನು ಸಂಪುಟಸಭೆ ಅನುಮೋದಿಸುತ್ತದೆ, ಅದು ರಾಜ್ಯಪಾಲರ ಮುಂದೆ ಅವರ ಒಪ್ಪಿಗೆಗಾಗಿ ಹೋಗುತ್ತದೆ. ಅಧಿವೇಶನ ನಡೆಯುವ ಬಗ್ಗೆ 15 ದಿನಗಳ ಮುಂಚಿತವಾಗ ಶಾಸಕರಿಗೆ ತಿಳಿಸಬೇಕೆಂಬ ನಿಯಮವೂ ಇದೆ.

ಶಾಸಕಾಂಗ ಅಧಿವೇಶನಕ್ಕೆ ಕರೆ ನೀಡುವ ಪ್ರಸ್ತಾವನೆ ಇರುವುದರಿಂದ ಆಸ್ತಿ ತೆರಿಗೆ ಮಸೂದೆಯನ್ನು ಸೋಮವಾರ ಸುಗ್ರೀವಾಜ್ಞೆ ಮೂಲಕ ಅಂಗೀಕರಿಸಲಾಗಿಲ್ಲ ನಾವು ಅದನ್ನು ಶಾಸಕಾಂಗದ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಸಚಿವ ಮಾಧು ಸ್ವಾಮಿ ಹೇಳಿದ್ದಾರೆ.

ಬಿಜೆಪಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಪ್ರಮುಖ ವಿಷಯಗಳು ಗೋಹತ್ಯೆ ವಿರೋಧಿ ಮಸೂದೆಯನ್ನು ಅಂಗೀಕರಿಸುವುದು, ಇದು ಮೇಲ್ಮನೆಯಲ್ಲಿ ಸೋತ ನಂತರ ಸುಗ್ರೀವಾಜ್ಞೆ ಮೂಲಕ ಜಾರಿಗೊಳ್ಳಲಿದೆ. ಮಸೂದೆಯನ್ನು ಹಿಂತಿರುಗಿಸಿದರೆ, ಅವರು ಅದನ್ನು ಮತ್ತೆ ವಿಧಾನಸಭೆಯಲ್ಲಿ ಅಂಗೀಕರಿಸಿ ಅವರ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಮಾಧುಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com